Chattisghar : ‘ಓಯೋ’ ಬಂದ್ ಮಾಡಿಸಿದ BJP ಶಾಸಕ – ರೊಚ್ಚಿಗೆದ್ದು MLA ಕಛೇರಿ ಮುಂದೆಯೇ ಆಟ ಶುರುಮಾಡಿದ ಜೋಡಿ !!

Chattisghar : ತಮ್ಮ ಕ್ಷೇತ್ರದಲ್ಲಿ ವೇಶ್ಯವಾಟಿಕೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು(BJP MLA) ಓಯೋ(Oyo) ಹೋಟೆಲ್‌ಗಳನ್ನು, ಓಯೋ ರೂಮ್‌ಗಳನ್ನು ಬಂದ್ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ನಡೆಗೆ ಪ್ರೇಮಿಗಳು ರೊಚ್ಚಿಗೆದ್ದಿದ್ದು, ಅವರ ಕಛೇರಿ ಮುಂದೆಯೇ ರೊಮ್ಯಾನ್ಸ್ ಗೆ ಇಳಿದಿದ್ದಾರೆ.

ಇದನ್ನೂ ಓದಿ: Karnataka BJP: ರಾಜ್ಯ ಬಿಜೆಪಿಗೆ ಹೆಚ್ಚಿದ ಆತಂಕ – ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋದು ಖಾಲಿ ಇಷ್ಟೇ ಸೀಟಾ?!

https://x.com/NCMIndiaa/status/1788958433242153161?t=e9adxht9O4yG89Cdb5RVcA&s=08

ಹೌದು, ಛತ್ತೀಸ್‌ಗಢದ(Chattisghar ) ವೈಶಾಲಿ ನಗರದಲ್ಲಿ(Vaishaly Town) ಸ್ಥಳೀಯ ಬಿಜೆಪಿ ನಾಯಕ ಹಾಗೂ ಶಾಸಕ ರಿಕೇಶ್ ಸೇನ್(MLA Rikesh Sen) ಅವರು ಒಯೋ ರೂಮ್‌ಗಳಲ್ಲಿ ವೇಶ್ಯಾವಾಟಿಕೆ ಹೆಚ್ಚಳವಾಗುತ್ತಿದೆ ಎಂದು ಆರೋಪಿಸಿ ಇಂತಹ ಹೊಟೇಲ್‌ಗಳನ್ನು ಬಂದ್‌ಗೆ ಸೂಚಿಸಿದ್ದರು. ಜೊತೆಗೆ ಎಲ್ಲೆಲ್ಲಿ ವೇಶ್ಯವಾಟಿಕೆ ನಡೆಯುತ್ತಿದೆಯೋ ಅಲ್ಲಿಗೆ ಸ್ವತಃ ದಾಳಿ ನಡೆಸುವುದಾಗಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಈ ನಿರ್ಧಾರದ ವಿರುದ್ಧ ಕಪಲ್ ಗಳು ರೊಚ್ಚಿಗೆದ್ದಿದ್ದಾರೆ. ಈ ಹಿನ್ನೆಲೆ ಸಿಟ್ಟಿಗೆದ್ದ ಜೋಡಿಯೊಂದು ಶಾಸಕರ ಕಛೇರಿ ಮುಂದೆ ಕಿಸ್ಸಿಂಗ್ ಮಾಡಿದ್ದಾರೆ. ಪ್ರತಿಭಟನಾ ರೂಪವಾಗಿ ಇವರಿಬ್ಬರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ: Guest Lecturer Suicide: ಅತಿಥಿ ಉಪನ್ಯಾಸಕಿ ಆತ್ಮಹತ್ಯೆಗೆ ಬಿಗ್‌ ಟ್ವಿಸ್ಟ್‌;

ಅಂದಹಾಗೆ ನಗರದಲ್ಲಿ ವೇಶ್ಯಾವಾಟಿಕೆ ಹಾವಳಿ ವ್ಯಾಪಕವಾಗಿದ್ದು, ಎಲ್ಲೆಲ್ಲಿ ಹೀಗೆ ವೇಶ್ಯಾವಾಟಿಕೆ ನಡೆಯುತ್ತಿದೆಯೋ ಅಲ್ಲೆಲ್ಲಾ ಪೊಲೀಸರೊಂದಿಗೆ ತಾನು ಸ್ವತಃ ಭೇಟಿ ನೀಡಿ ದಾಳಿ ನಡೆಸುವುದಾಗಿ ಶಾಸಕ ರಿಕೇಶ್ ಸೇನ್ ಹೇಳಿದ್ದರು. ಅಲ್ಲದೆ ಈ ಹಿಂದೆಯೂ ಶಾಸಕರು ಪಾರ್ಕ್‌ವೊಂದರಲ್ಲಿ ರೊಮ್ಯಾನ್ಸ್‌ ಮಾಡುತ್ತಿದ್ದ ಜೋಡಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮರುತ್ತರಿಸಿದ ಜೋಡಿ ನೀವು ಓಯೋ ರೂಮ್‌ ಬ್ಯಾನ್ ಮಾಡಿದ್ದರಿಂದ ನಮಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.