Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ; ಕಾಲುಗಳಿಗೆ ಗಂಭೀರ ಗಾಯ

Share the Article

Dandeli: ಕಾಗದ ಕಾರ್ಖಾನೆಯೊಂದರ ಚಿಪ್ಪರ್‌ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವನ ಕಾಲು ಯಂತ್ರದಡಿ ಸಿಲುಕಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಇದನ್ನೂ ಓದಿ: Accident: ಬಸ್‌ ಪಲ್ಟಿ; ಚಾಲಕ ಸಾವು, ವಿದ್ಯಾರ್ಥಿಗಳು ಸೇರಿ 20 ಮಂದಿಗೆ ಗಾಯ

ಶ್ರೀಕಾಂತ ಲಕ್ಷ್ಮಣ ಹರಿಜನ (35) ಗಂಭೀರ ಗಾಯಗೊಂಡ ವ್ಯಕ್ತಿ. ಇವರು ಸ್ಥಳೀಯ ನಿರ್ಮಲನಗರದ ನಿವಾಸಿ. ಗಂಭೀರವಾಗಿ ಗಾಯಗೊಂಡ ಇವರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಎರಡು ಕಾಲುಗಳಿ ಗಂಭೀರ ಗಾಯವಾಗಿದೆ. ಅದರಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದು, ಇನ್ನೊಂದು ಕಾಲನ್ನು ಉಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡುವ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

ಶ್ರೀಕಾಂತ್‌ ಅವರು ಬಡ ಕುಟುಂಬದವರಾಗಿದ್ದು, ಎರಡು ವರ್ಷದ ಸಣ್ಣ ಮಗುವನ್ನು ಹೊಂದಿದ್ದಾರೆ. ಇದೀಗ ಇವರಿಗೆ ಈ ರೀತಿ ಆಗಿದ್ದು, ಅವರ ಕುಟುಂಬ ಆಘಾತದಲ್ಲಿದೆ

Leave A Reply