Accident: ಬಸ್‌ ಪಲ್ಟಿ; ಚಾಲಕ ಸಾವು, ವಿದ್ಯಾರ್ಥಿಗಳು ಸೇರಿ 20 ಮಂದಿಗೆ ಗಾಯ

Kasaragod: ಖಾಸಗಿ ಬಸ್‌ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತ ಹೊಂದಿದ್ದು, ವಿದ್ಯಾರ್ಥಿಗಳು ಸೇರಿ 20 ಮಂದಿ ಗಾಯಗೊಂಡ ಘಟನೆಯೊಂದು ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಚಾಲಿಂಗಾಲ್‌ ನಲ್ಲಿ ನಿನ್ನೆ(ಸೋಮವಾರ) ನಡೆದಿದೆ.

ಇದನ್ನೂ ಓದಿ: Bengaluru Crime News: ಪತ್ನಿಗೆ ಅಶ್ಲೀಲ ವೀಡಿಯೋ ಕಳುಹಿಸಿದ ಪತಿ; ಜೈಲು ಶಿಕ್ಷೆ ಜೊತೆಗೆ ರೂ.45 ಸಾವಿರ ದಂಡ

ಮಧೂರು ರಾಮನಗರದ ಚೇತನ್‌ ಕುಮಾರ್‌ (37) ಎಂಬಾತನೇ ಮೃತ ಚಾಲಕ ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಚಾಲಿಂಗಾಲ್‌ನ ಪೆರಿಯ ಗ್ರಾಮ ಪಂಚಾಯತ್‌ ಕಚೇರಿ ಸಮೀಪದಲ್ಲಿ ಅಪಘಾತಕ್ಕೀಡಾಗಿದೆ.

ಇದನ್ನೂ ಓದಿ: Women Dies: ಮದುವೆಯಾದ ವರ್ಷದಲ್ಲೇ ನವವಧು ಸಾವು; ಬೀಗರ ಮನೆಗೆ ಬೆಂಕಿ ಇಟ್ಟ ಪೋಷಕರು, ಅತ್ತೆ, ಮಾವನ ಸಜೀವ ದಹನ

ಚಾಲಿಂಗಾಲ್‌ನಲ್ಲಿ ಟೋಲ್‌ ಬೂತ್‌ ನಿರ್ಮಿಸಲು ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ ಹೊಡೆದಿದೆ. ಸ್ಥಳೀಯ ನಿವಾಸಿಗಳು, ಅಗ್ನಿಶಾಮಕದಳದ ಸಿಬ್ಬಂದಿಗಳು, ಪೊಲೀಸರು ಬಸ್ಸಿನಡಿ ಸಿಲುಕಿದ್ದವನ್ನು ಹೊರತೆಗೆದು ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.

1 Comment
  1. […] ಇದನ್ನೂ ಓದಿ: Accident: ಬಸ್‌ ಪಲ್ಟಿ; ಚಾಲಕ ಸಾವು, ವಿದ್ಯಾರ್ಥಿಗ… […]

Leave A Reply

Your email address will not be published.