Home Crime Delhi: ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಬೇಕಿದ್ದ ಮಗನನ್ನು ಇರಿದು ಕೊಂದ ತಂದೆ !! ನಿಜಕ್ಕೂ ಅಚ್ಚರಿ...

Delhi: ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಬೇಕಿದ್ದ ಮಗನನ್ನು ಇರಿದು ಕೊಂದ ತಂದೆ !! ನಿಜಕ್ಕೂ ಅಚ್ಚರಿ ಮೂಡಿಸುತ್ತೆ ಕಾರಣ

Delhi

Hindu neighbor gifts plot of land

Hindu neighbour gifts land to Muslim journalist

Delhi: ಕೆಲವೇ ಗಂಟೆಗಳಲ್ಲಿ ಮದುವೆಯಾಗಲಿದ್ದ ಮಗನನ್ನು ಆತನ ತಂದೆಯೇ ಇರಿದು ಕೊಂದಂತಹ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Sringeri Minor Girl Rape Case: 15 ವರ್ಷದ ಬಾಲಕಿ ಮೇಲೆ 52 ಜನ 5 ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಪ್ರಕರಣ; ತಾಯಿ ಸೇರಿ ನಾಲ್ವರು ದೋಷಿಗಳು

ಹೌದು, ದಕ್ಷಿಣ ದೆಹಲಿ(Delhi)ಯಲ್ಲಿ ಇಂತಹ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು ಗೌರವ್ ಸಿಂಘಾಲ್ (29) ಎಂಬಾತನನ್ನು ಆತನ ತಂದೆ ರಂಗಲಾಲ್ ಹತ್ಯೆ ಮಾಡಿದ್ದಾನೆ. ಇದೀಗ ರಂಗಲಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಅಗಂದಹಾಗೆ ಗೌತಮ್‌ ಜಿಮ್ ನಡೆಸುತ್ತಿದ್ದ. ದೇವ್ಲಿ ಎಕ್ಸ್‌ಟೆನ್ಶನ್‌ನಲ್ಲಿರುವ ಮನೆಯಲ್ಲೇ ಆತನ ಎದೆಗೆ 15 ಬಾರಿ ಇರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗೌರವ್‌ ತನ್ನ ಮದುವೆಯ ಮೆರವಣಿಗೆಗೆ ಹೊರಟಿದ್ದ. ಮದುವೆ ಮೆರವಣಿಗೆ ಮಾಡಲು ಮದುಮಗನಿಗಾಗಿ ಜನರೂ ಕಾಯುತ್ತಿದ್ದರು. ಆದರೆ ಗೌರವ್‌ ಬರಲಿಲ್ಲ. ಅನುಮಾನಗೊಂಡು ಅತಿಥಿಗಳು ಹುಡುಕಾಟ ನಡೆಸಿದ್ದಾರೆ. ಆದರೆ ಪಾರ್ಕ್‌ವೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಕೊಲೆ ಮಾಡಲು ಕಾರಣ?

ತಂದೆಯೇ ಮಗನನ್ನು ಕೊಲ್ಲಲು ಕ್ಷುಲ್ಲಕ ಕಾರಣವೇ ದಾರಿಯಾಗಿದೆ. ಅದೇನೆಂದರೆ ಪುತ್ರ ಗೌರವ್ ಪ್ರತಿದಿನ ತನಗೆ ಅವಮಾನ ಮಾಡುತ್ತಿದ್ದರಿಂದ ಕೋಪಗೊಂಡು ಕೊಲೆ ಮಾಡಿರುವುದಾಗಿ ರಂಗಲಾಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.