Home latest Rain Alert: ಸದ್ಯದಲ್ಲೇ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ !!

Rain Alert: ಸದ್ಯದಲ್ಲೇ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ !!

Hindu neighbor gifts plot of land

Hindu neighbour gifts land to Muslim journalist

Rain Alert: ದೇಶದ ಹಲವು ರಾಜ್ಯಗಳಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಿದ್ದು, ಅನೇಕ ಕಡೆಗಳಲ್ಲಿ ಮಳೆಯ(Rain) ವಾತಾವರಣ ಎದುರಾಗಿದ್ದರೆ. ಇದರಿಂದ ಬಿಸಿಲ ಬೇಗೆಗೆ ಸುಸ್ತು ಹೊಡೆದ ಜನರಿಗೆ, ರೈತರಿಗೆ ಭಾರೀ ಸಂತಸ ಎದುರಾಗಿದೆ. ಹಾಗಿದ್ದರೆ ಯಾವ ಭಾಗದಲ್ಲಿ ಮಳೆಯಾಗಲಿದೆ ನೋಡೋಣ.

ಇದನ್ನೂ ಓದಿ: Sini Shetty: ಐಶ್ವರ್ಯಾ ರೈ ಹಾದಿಯಲ್ಲೇ ಸಾಗಿದ ಸಿನಿ ಶೆಟ್ಟಿ; ನೆಟ್ಟಿಗರಿಂದ ‘ಮುಂದಿನ ಬಾಲಿವುಡ್ ಸ್ಟಾರ್’ ಎಂಬ ಪ್ರಶಂಸೆ

ವಾತಾವರಣದಲ್ಲಿ ಏರುಪೇರಿನಿಂದಾಗಿ ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 6 ಮತ್ತು 7 ರ ನಡುವೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಅಲ್ಲದೆ ಅರುಣಾಚಲ ಪ್ರದೇಶದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆ ಅಥವಾ ಹಿಮಪಾತವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದು, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಇಂದಿನಿಂದ ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಎರಡು ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಜೊತೆಗೆ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಹವಾಮಾನವು ಮಾರ್ಚ್ 7 ಮತ್ತು 9 ರ ನಡುವೆ ಹದಗೆಡಲಿದೆ. ಹೀಗಾಗಿ ಈ ಮೂರು ರಾಜ್ಯಗಳಲ್ಲೂ ಮಳೆಯಾಗಬಹುದು.