Deadly Accident: ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ಸೇರಿ ಒಂದೇ ಕುಟುಂಬದ 5 ಮಂದಿಯ ದಾರುಣ ಸಾವು

Share the Article

Deadly Accident: ಕಾರೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತರು ಸೇರಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದ ಘಟನೆಯೊಂದು ಆಂಧ್ರಪ್ರದೇಶದ ನಂದ್ಯಾಳದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಅಲ್ಲಗಡ್ಡ ಮಂಡಲದ ನಲ್ಲಗಟ್ಲ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಕುಟುಂಬವು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುವ ಸಮದಯಲ್ಲಿ ಈ ಆಕ್ಸಿಡೆಂಟ್‌ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ 5.15 ರ ಬೆಳಿಗ್ಗೆ ನಲ್ಲಗಟ್ಲ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ ಪೊಲೀಸ್‌ ವಶಕ್ಕೆ

ಟ್ರಕ್‌ನ ಚಾಲಕ ಗಾಡಿಯನ್ನು ಬದಿಗೆ ನಿಲ್ಲಿಸಿದ್ದು, ಕಾರು ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಐದು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ವಾರದ ಹಿಂದೆ ವಿವಾಹವಾಗಿದ್ದ ಬಾಲಕಿರಣ ಮತ್ತು ಕಾವ್ಯ ಸಾವಿಗೀಡಾಗಿದ್ದಾರೆ. ಬಾಲಕಿರಣ್‌ನ ತಾಯಿ ಮಂತ್ರಿ ಲಕ್ಷ್ಮಿ, ತಂದೆ ಮಂತ್ರಿ ರವೀಂದ್ರ್‌ , ಕಿರಿಯ ಸಹೋದರ ಉದಯ್‌ ಸಾವಿಗೀಡಾಗಿದ್ದಾರೆ. ಮುಂಜಾನೆ 5.15ರ ಸುಮಾರಿಗೆ ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್ ಅನ್ನು ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಗಮನಿಸದೇ ಇದ್ದುದರಿಂದ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಂತ್ರಸ್ತರೊಬ್ಬರ ಮೊಬೈಲ್ ಫೋನ್‌ನಿಂದ ಅವರ ಸಂಬಂಧಿಕರಿಗೆ ಕರೆ ಮಾಡಿ, ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ.

Leave A Reply