Mangaluru: ವೃದ್ಧ ದಂಪತಿಯ ಮೇಲೆ ಥಳಿಸಿದ ಚರ್ಚ್‌ ಪಾದ್ರಿ; ಪಾದ್ರಿ ವಿರುದ್ಧ ಆಕ್ರೋಶ

Share the Article

Mangaluru: ಕ್ರೈಸ್ತರ ಚರ್ಚ್‌ ಧರ್ಮಗುರುವೊಬ್ಬರು ಹಾಡಹಗಲೇ ವೃದ್ಧ ದಂಪತಿಯ ಮೇಲೆ ಹಲ್ಲೆ ಮಾಡಿರುವ ಘಟನೆಯ ವೀಡಿಯೋವೊಂದು ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ನಡೆದಿರುವುದು ಬಂಟ್ವಾಳ ತಾಲೂಕಿನ ಪುಣಚದ ಎರ್ಮೆತ್ತಡ್ಕ ಎಂಬಲ್ಲಿ. ಗುರುವಾರ ಫೆ.29ರಂದು ಈ ಘಟನೆ ನಡೆದಿದೆ.

ಮನೆಲ ಚರ್ಚ್‌ನ ಧರ್ಮಗುರು ಫಾದರ್‌ ನೆಲ್ಸನ್‌ ಒಲಿವೆರಾ ಎಂಬುವವರೇ ಹಲ್ಲೆ ನಡೆಸಿದ ಪಾದ್ರಿ. ಗ್ರೆಗರಿ ಮೊಂತೆರೋ (79) ಮತ್ತು ಅವರ ಪತ್ನಿ ಫಿಲೋಮಿನಾ (72) ಹಲ್ಲೆಗೊಳಗಾದ ವೃದ್ಧ ದಂಪತಿಗಳು. ಕಾಲಿನಿಂದ ವೃದ್ಧರನ್ನು ಒದೆಯುತ್ತಿರುವ, ಕತ್ತಿನ ಪಟ್ಟಿ ಹಿಡಿದು ಎಳೆದಾಡುತ್ತಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ಗ್ರೆಗರಿ ಮೊಂತೆರೋ ಅವರ ಮನೆಗೆ ಪಾದ್ರಿ ಮನೆ ಶುದ್ಧಗೊಳಿಸುವ ವಿಷಯಕ್ಕೆ ಬಂದಿದ್ದು, ಈ ವೆಳೆ ದಂಪತಿ ಚರ್ಚ್‌ಗೆ ದೇಣಿಗೆ, ವಂತಿಗೆ ನೀಡದಿರುವ ಕುರಿತು ಚರ್ಚೆಯಾಗಿದೆ. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ವೃದ್ಧ ದಂಪತಿಯನ್ನು ಫಾದರ್‌ ಎಳೆದಾಡಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಕುರಿತು ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply