Crime News: ಸ್ವಂತ ಅತ್ತೆಯನ್ನೇ ಹತ್ಯೆಗೈದ ಬಿಟೆಕ್ ವಿದ್ಯಾರ್ಥಿ : ಗೋವಾದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ
ಬೆಂಗಳೂರು : ಫೆಬ್ರವರಿ 12ರಂದು ನಾಪತ್ತೆಯಾಗಿದ್ದ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನ ಹೌಸ್ ಕೀಪಿಂಗ್ ಮಹಿಳೆ ಸುಕನ್ಯಾ ಎಂಬುವವರನ್ನು ವಿಜಯವಾಡದ ಆಕೆಯ 20 ವರ್ಷದ ಸೋದರಳಿಯ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Shobhana: ಒಳ ಉಡುಪು ಹಾಕದೆ ಮಳೆಯಲ್ಲಿ ಶೂಟಿಂಗ್ ಮಾಡಿದೆ – ರಜನಿ ಮೇಲೆತ್ತಿದಾಗ… !! ಕರಾಳ ಅನುಭವ ಬಿಚ್ಚಿಟ್ಟ ನಟಿ
ಮಂಗಳವಾರ ಬಿಟೆಕ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಜಸ್ವಂತ್ ರೆಡ್ಡಿಯನ್ನು ಬಂಧಿಸಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ದೊಡ್ಡತೋಗೂರು ನಿವಾಸಿ ತನ್ನ ಅತ್ತೆ ಸುಕನ್ಯಾ ಡಿ (37) ಅವರನ್ನು ಕತ್ತು ಹಿಸುಕಿ ಕೊಂದು ಆಕೆಯ ದೇಹಕ್ಕೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ.
ಜಸ್ವಂತ್ ಬೆಂಕಿ ಹಚ್ಚಿದಾಗ ಸುಕನ್ಯಾ ಪ್ರಜ್ಞಾಹೀನಳಾಗಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಸುಕನ್ಯಾ ಅವರ ಪತಿ ನರಸಿಂಹ ರೆಡ್ಡಿ ಫೆಬ್ರವರಿ 13 ರಂದು ತಮ್ಮ ಪತ್ನಿ ಹಿಂದಿನ ದಿನ ಕೆಲಸದಿಂದ ಮನೆಗೆ ಹಿಂತಿರುಗಲಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರ ಪ್ರಕಾರ, ಅವರು ಸುಕನ್ಯಾ ಅವರ ಕರೆ ವಿವರಗಳ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಗೆ ಜಸ್ವಂತ್ ನಿಂದ ಅನೇಕ ಕರೆಗಳು ಬಂದಿರುವುದು ಕಳ
ತಿಳಿದು ಬಂದಿದೆ.
ಅವರ ಲೊಕೇಶನ್ ಸ್ಥಳವು ಫೆಬ್ರವರಿ 12ರಂದು ಕೆ. ಆರ್. ಪುರಂ ಬಳಿಯ ಸುಕನ್ಯನ ಟವರ್ ಬಳಿ ದೊರೆಯೂತ್ತಿದ್ದಾಗಿ ಪೋಲಿಸರು ತಿಳಿಸಿದ್ದಾರೆ.
ಪೊಲೀಸರು ಮಂಗಳವಾರ ವಿಚಾರಣೆಗಾಗಿ ಜಸ್ವಂತ್ ನನ್ನು ಬೆಂಗಳೂರಿಗೆ ಕರೆದರು. ಆರಂಭದಲ್ಲಿ, ಒಂದೆರಡು ತಿಂಗಳ ಹಿಂದೆ ತಾನು ಸುಕನ್ಯಾಳೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡ ಆತ, ಆಕೆ ಎಲ್ಲಿದ್ದಾಳೆಂದು ತನಗೆ ತಿಳಿದಿಲ್ಲ ಎಂದು ಹೇಳಿದನು. ಕರೆ ದಾಖಲೆಗಳು ಮತ್ತು ಲೊಕೇಶನ್ ಸ್ಥಳದ ವಿವರಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ಇತನ ಮೇಲೆ ಹೆಚ್ಚಿನ ಅನುಮಾನ ಬಂದಿದೆ.
ನಂತರದ ವಿಚಾರಣೆಯಲ್ಲಿ ಫೆಬ್ರವರಿ 12ರಂದು ಸುಕನ್ಯಾಳನ್ನು ಭೇಟಿಯಾಗಲು ಬಾಡಿಗೆ ಕಾರಿನಲ್ಲಿ ಬೆಂಗಳೂರಿಗೆ ಬಂದು ಆಕೆಯ ಚಿನ್ನದ ಆಭರಣಗಳನ್ನು ದೋಚಿದ್ದಾಗಿ ಜಸ್ವಂತ್ ಪೊಲೀಸರಿಗೆ ತಿಳಿಸಿದ್ದಾನೆ.
ಆತ ಆಕೆಯನ್ನು ಆಕೆಯ ಕೆಲಸದ ಸ್ಥಳದಿಂದ ಕರೆದೊಯ್ದು ಕಾರನ್ನು ನಿರ್ಜನ ಸ್ಥಳದಲ್ಲಿ ನಿಲ್ಲಿಸಿ, ತನ್ನ ಸಾಲವನ್ನು ತೀರಿಸಲು ಹಣವನ್ನು ಕೇಳಿದ್ದಾನೆ. ತನ್ನ ಬಳಿ ಹಣವಿಲ್ಲ ಎಂದು ಸುಕನ್ಯಾ ಅವನಿಗೆ ಹೇಳಿದಳು ಎಂದು ವರದಿಯಾಗಿದೆ.
ಆಕೆ ಹಣ ಕೊಡಲು ಒಪ್ಪದೇ ಹೋದಾಗ ಆಕೆಯ ಕತ್ತು ಹಿಸುಕಿ ಸಾಧಿಸಿದ್ದಾನೆ, ಬಳಿಕ ಆಕೆಯ ದೇಹವನ್ನು ಎಸ್ ಬಿಂಗಿಪುರಾ ಗ್ರಾಮದ ನಿರ್ಜನ ಸ್ಥಳದಲ್ಲಿ ಎಸೆದು 25 ಗ್ರಾಂ ತೂಕದ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಹೊಸೂರಿಗೆ ಹೋಗಿ ಅಲ್ಲಿ ಐದು ಲೀಟರ್ ಪೆಟ್ರೋಲ್ ಖರೀದಿಸಿ ಮರಳಿ ಆಕೆಯ ದೇಹದ ಮೇಲೆ ಇಂಧನವನ್ನು ಸುರಿದು ಬೆಂಕಿ ಹಚ್ಚಿದ್ದಾನೆ.
ಜಸ್ವಂತ್ ಕಳೆದ ವರ್ಷ ಅಕ್ಟೋಬರ್ನಲ್ಲಿ ಅಪಘಾತಕ್ಕೀಡಾಗಿದ್ದ ಮತ್ತು ಪ್ರಕರಣವನ್ನು ಮುಂದುವರಿಸದಿದ್ದಕ್ಕಾಗಿ ವಾಹನದ ಮಾಲೀಕರಿಗೆ 50,000 ರೂಪಾಯಿ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದ. ತನಗೆ ಹತ್ತಿರವಾಗಿದ್ದ ಸುಕನ್ಯಾ ತನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸುತ್ತಾಳೆ ಎಂದು ಆತ ಆಶಿಸುತ್ತಿದ್ದ.
ಇಡೀ ದೇಹವು ಸುಡುವವರೆಗೂ ಜಸ್ವಂತ್ ಕಾಯುತ್ತಿದ್ದ. ಆತ ಆಕೆಯ ಫೋನನ್ನು ಕೆ. ಆರ್. ಪುರಂಗೆ ಹೋಗಿ ಅದನ್ನು ತೋಟದಲ್ಲಿ ಎಸೆದು, ನಂತರ ಹೈದರಾಬಾದ್ಗೆ ಹೋಗಿ ಆ ಸರವನ್ನು 95,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. 50, 000 ಸಾಲವನ್ನು ತೀರಿಸಿದ ಆತ ಗೋವಾ ಪ್ರವಾಸಕ್ಕೆ ಹೋಗಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.