Intresting News: ಬದ್ಧತೆಯೇ ಯಶಸ್ಸಿನ ಮೂಲ ಮಂತ್ರ
ವಿದ್ಯಾರ್ಥಿಯೊಬ್ಬ ಒಂದು ದಿನದಲ್ಲಿ ತಾನು ಏನೆಲ್ಲಾ ಕೆಲಸಗಳನ್ನು ಮಾಡಬೇಕು ಎಂದು, ಹಿಂದಿನ ದಿನ ಅಂದುಕೊಂಡ. ಆದರೆ ಅಂದುಕೊಂಡ ಕೆಲಸಗಳಲ್ಲಿ ಒಂದನ್ನೂ ಮುಗಿಸಲಾಗಲಿಲ್ಲ. ಇಡೀ ದಿನ ಅರಿವಿಲ್ಲದೇ ಶೂನ್ಯವಾಗಿ ಕಳೆದು ಹೋಯಿತಲ್ಲಾ ಎಂದು ಪಚ್ಚಾತಾಪ ಪಟ್ಟನು.
ಇದನ್ನೂ ಓದಿ: Education News: ನಾಳೆ ಪರೀಕ್ಷೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ
ಹೀಗೆ ನಾವು ನೀವೆಲ್ಲರೂ ಸಮಯವನ್ನು ಹೇಗೆ ಬಳಸಬೇಕು ಎಂಬುದರ ಅರಿವಿಲ್ಲದೇ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ.
ಕೆಲವರಂತೂ ನನಗೆ ಸಮಯವೇ ಸಿಗುತ್ತಿಲ್ಲವೆಂದು ಹೇಳುವುದುಂಟು. ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳುವುದೂ ಒಂದು ಕಲೆ. ಆ ಕಲೆಯನ್ನು ಕರಗತ ಮಾಡಿಕೊಂಡವರು ಅಸಮಾನ್ಯ ವ್ಯಕ್ತಿಗಳಾಗಿದ್ದಾರೆ. ಸಮಯ ಯಾರಿಗೂ ಕಾಯುವುದಿಲ್ಲ. ಹೋದ ಕಾಲ ಮತ್ತೇ ಬಾರದು. ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವುದು ಅವಶ್ಯಕವಾದುದು.
ಚೆಸ್ಟರ ಪೀಲ್ಡ ಹೇಳುವಂತೆ, ಸಮಯದ ಮೌಲ್ಯದ ಕುರಿತು ಎಲ್ಲರೂ ಮಾತನಾಡುತ್ತಾರೆ. ಆದರೆ ಕೆಲವರು ಮಾತ್ರ ಅದನ್ನು ಕಾರ್ಯಗತಗೊಳಿಸುತ್ತಾರೆ. ಎಂಬುದು ಭಾಗಶಃ ಸತ್ಯವಾದುದು. ಸಮಯವು ಹಣವಿದ್ದಂತೆ. ನಾವು ಹಣವನ್ನು ಹೇಗೆ ಹಿತ ಮಿತವಾಗಿ ಉಳಿಕೆ ಮಾಡಿಕೊಂಡ ಬಳಸುತ್ತೇವೆಯೋ ಹಾಗೇ ಸಮಯವನ್ನು ನಿಮ್ಮಿಷ್ಟದ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕು.
ಸಮಯದ ಪರಿಪಾಲನೆಗೆ ಮಾಡುವುದು ಹೇಗೆ :
ನೀವು ಪ್ರತಿದಿನ ಮಾಡಬೇಕಿರುವ ಕೆಲಸಗಳನ್ನು ನಿರ್ವಹಿಸಲು to do list ಮಾಡುವುದು ಒಳ್ಳೆಯದು. ಮಾಡಬೇಕಾದ ಕೆಲಸಗಳ ಒಂದು ಪುಟ್ಟದಾದ ಲಿಸ್ಟ್ ತಯಾರಿಸಿ. ಅದರಲ್ಲಿ ಕೆಲಸದ ಆದ್ಯತೆಯ ಮೇರೆಗೆ ಮಾಡಬೇಕಾದ ಕೆಲಸವನ್ನು ಬರೆದಿಡಿ. ಅವುಗಳನ್ನು ಒಂದೊಂದಾಗಿ ಮುಗಿಸುತ್ತ ಬನ್ನಿ. ಒಂದು ಕೆಲಸ ಮುಗಿಯದ ವರೆತೂ ಮತ್ತೊಂದಕ್ಕೆ ಹೋಗುವುದು ನಿಷೇಧ. ಹೀಗೆ ಒಂದು ಪಟ್ಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ಬೇಗ ಎದ್ದ ಹಕ್ಕಿ ಹೆಚ್ಚು ಆಹಾರವನ್ನು ಮುಕ್ಕುತ್ತದೆ ಎಂಬ ಗಾದೆ ಮಾತೊಂದಿದೆ. ಬೆಳಗ್ಗೆ ಬೇಗ ಹೇಳುವುದು ಲಾಭದಾಯಕವಾದುದ್ದು. ಇದು ನಮಗೆ ದೈಹಿಕವಾಗಿಯೂ ಮಾನಸಿವಾಗಿಯೂ ಆರೋಗ್ಯವನ್ನು ಒದಗಿಸುತ್ತದೆ. ಬೆಳ್ಳಂಬೆಳಗ್ಗೆ ನಮ್ಮ ಮನಸ್ಸು ನಿರ್ಮಲವಾಗಿರುವುದರಿಂದ ಹೆಚ್ಚು ಏಕಾಗ್ರತೆಯನ್ನು ಪಡೆಯಬಹುದು. ಈ ಸಮಯದಲ್ಲಿ ಎರಡು ಗಂಟೆ ಅಭ್ಯಾಸ ಮಾಡುವುದು ದಿನದ 22 ಗಂಟೆಗೆ ಸಮನಾದುದ್ದು.
ಮನುಷ್ಯನಿಗೆ ಒಂದು ಕೆಟ್ಟ ಸ್ವಭಾವವಿದೆ. ಮಾಡಬೇಕಾದ ಕೆಲಸವೂ ಕುತ್ತಿಗೆಗೆ ಬರುವ ವರೆಗೂ ಮಾಡುವುದಿಲ್ಲ. ಇದು ಸಾಕಷ್ಟು ಒತ್ತಡವನ್ನು ನೀಡುತ್ತದೆ. ಅಂದಿನ ಕೆಲಸವನ್ನು ಅಂದೆ ಮುಗಿಸುವುದು ಒಳ್ಳೆಯದು. ಒಂದು ಕೆಲಸವನ್ನು ಇಂತಿಷ್ಟು ದಿನಗಳಲ್ಲಿ ಮುಗಿಸುತ್ತೇನೆ ಎಂದು ಗಡುವು ಹಾಕಿಕೊಳ್ಳಿ. ಆ ಅವಧಿಯಲ್ಲಿ ನೀವು ನಿಮ್ಮ ಕೆಲಸವನ್ನು ಮುಗಿಸುತ್ತೀರಿ. ನಿಮ್ಮ ಬಳಿ ಸದಾ ಇರುವಂತೆ ಚಿಕ್ಕ ಕಾಗದದ ತುಂಡು ಹಾಗೂ ಪೆನ್ನನ್ನು ಇಟ್ಟುಕೊಳ್ಳಿ. ನಿಮ್ಮಲ್ಲಿ ಬರುವ ಹೊಸ ಆಲೋಚನೆಗಳನ್ನು ಆಗಿಂದಾಗ್ಗೆ ಬರೆದಿಡಿ. ಕೇಳಿಸಿಕೊಳ್ಳುವುದು ಒಂದು ಕಲೆ. ಆ ಕಲೆಯನ್ನು ಕರಗತ ಮಾಡಿಕೊಳ್ಳಿ. ನೀವು ನಿರ್ವಹಿಸುವ ಪತ್ರಿ ಕೆಲಸದಲ್ಲಿ ಸಮಯವನ್ನು ಉಳಿಸಲು ಪ್ರಯತ್ನಿಸಿ. ನೀವು ಅಭ್ಯಾಸಿಸುವ ಕೊಠಡಿ ಹಾಗೂ ಟೇಬಲ್ ಸ್ವಚ್ಚವಾಗಿರಲಿ. ಬೇಡವಾದ ಕಡತಗಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡುತ್ತಿರಿ. ನಿಮ್ಮ ಕೆಲಸಗಳಲ್ಲಿ ಬದ್ಧತೆ ಇರಲಿ. ಮೊಬೈಲ್ ಹಾಗೂ ನಿಮ್ಮನ್ನು ಋಣಾತ್ಮಕವಾಗಿ ಪ್ರಚೋದಿಸುವ ಗೆಳೆಯರಿಂದ ಆದಷ್ಟು ದೂರವಿರುವುದು ಸೂಕ್ತ. ಮಾಡಬೇಕಾದ ಕೆಲಸವನ್ನು ಒಂದು ಚಿಕ್ಕ ಕಾಗದದ ಮೇಲೆ ಬರೆದು ಆಗಾಗ ಅದನ್ನು ಗಮನಿಸುತ್ತಿದ್ದರೆ ತಾನಾಗಿಯೇ ಕೆಲಸ ಮುಗಿಸುವ ಹೊಮ್ಮಸ್ಸು ಬರುತ್ತದೆ. ನಮ್ಮ ಕೆಲಸದಲ್ಲಿ ಬದ್ಧತೆ ಬಹಳ ಮುಖ್ಯ.
ಸೂಕ್ತ ಯೋಜನೆಯನ್ನು ಮಾಡಿಕೊಂಡ ಕಾರ್ಯ ಪ್ರವೃತ್ತರಾದರೆ ಯಶಸ್ಸಿಗೆ ಹತ್ತಿರವಾಗುತ್ತೀರಿ.