Death News: ರಾತ್ರಿ ಮದ್ಯಪಾನ ಮಾಡಿದ ವಿದ್ಯಾರ್ಥಿನಿ, ಬೆಳಗ್ಗೆ ಎದ್ದೇಳಲೇ ಇಲ್ಲ, ದಾರುಣ ಸಾವು; ಪ್ರಿಯಕರ ಅರೆಸ್ಟ್‌

Share the Article

Death News: ನೀಲಗಿರಿ ಜಿಲ್ಲೆಯ ಊಟಿಯ ಬಾಂಬೆ ಕ್ಯಾಸಲ್‌ನಲ್ಲಿ ವಾಸಿಸುತ್ತಿರುವ ಆಕಾಶ (20) ಹಾಗೂ ಈತನ ಪ್ರೇಯಸಿ ರಿತಿ ಏಂಜೆಲ್‌ (19) ಊಟಿಯ ಪಿಂಕರ್‌ ಪೋಸ್ಟ್‌ ಮೂಲದವಳು. ಇವರಿಬ್ಬರು 10ನೇ ತರಗತಿಯಲ್ಲಿ ಒಟ್ಟಿಗೆ ಓದಿದ್ದರಿಂದ ಪರಿಚಿತರು. ಪರಿಚಯದಿಂದ ಪ್ರೀತಿಗೆ ತಿರುಗಿತ್ತು. ಈ ಮಧ್ಯೆ ರಿತಿ ಏಂಜೆಲ್‌ ಕೊಯಮತ್ತೂರಿನ ಖಾಸಗಿ ನರ್ಸಿಂಗ್‌ ಕಾಲೇಜಿಗೆ ಸೇರಿದ್ದಾಳೆ. ಆಕಾಶ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಸೇರಿಕೊಂಡಿದ್ದ. ಪ್ರೇಮಿಗಳು ಆಗಾಗ್ಗೆ ಭೇಟಿ ಮಾಡುತ್ತಿದ್ದರು.

 

ಕಳೆದ ಶನಿವಾರ ಕಾಲೇಜಿಗೆ ರಜೆ ಇದ್ದು, ಗೆಳೆಯ ಹೇಳಿದನೆಂದು ಕೊಯಮತ್ತೂರಿನಿಂದ ರಿತಿ ಏಂಜೆಲ್‌ ಬಂದಿದ್ದಳು. ಅಲ್ಲಿ ಟಾಸ್ಮಾಕ್‌ ಬಾರ್‌ನಲ್ಲಿ ಮದ್ಯ ಖರೀದಿಸಿ ನಂತರ ಯುವತಿಯನ್ನು ಗೆಳೆಯ ದ್ವಿಚಕ್ರ ವಾಹನದಲ್ಲಿ ಕೂರಿತಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆನ್‌ಲೈನ್‌ನಲ್ಲಿ ಆಹಾರ ಬುಕ್‌ ಮಾಡುತ್ತಾರೆ. ನಂತರ ಇನ್ನರೂ ಆಕಾಶ್‌, ರಿತಿ ಏಂಜೆಲ್‌ ಮದ್ಯ ಸೇವನೆ ಮಾಡುತ್ತಾರೆ. ನಂತರ ಮೋಟಾರ್‌ ಸೈಕಲ್‌ ನಲ್ಲಿ ಸಮೀಪದಲ್ಲೇ ಇದ್ದ ಪೈನ್‌ ಅರಣ್ಯ ಪ್ರದೇಶಕ್ಕೆ ತೆರಳಿ ಮ್ಯಾಜಿಕ್‌ ಮಶ್ರೂಮ್‌ಗಳನ್ನು ತೆಗೆದುಕೊಂಡು ವೈನ್‌ ಸಮೇತ ತಿಂದಿದ್ದಾರೆ. ಇಬ್ಬರಿಗೂ ಅಮಲು ಹೆಚ್ಚಾಗಿ ನಿದ್ದೆಗೆ ಜಾರಿದ್ದಾರೆ.

 

ಬೆಳಗ್ಗೆ ಆಕಾಶ್‌ ಎದ್ದಿದ್ದಾನೆ. ಆದರೆ ರಿತಿ ಏಂಜೆಲ್‌ ಎದ್ದಿಲ್ಲ. ಎಷ್ಟೇ ಎಬ್ಬಿಸಿದರೂ ಏಳದ ಕಾರಣ ಕೂಡಲೇ ಆತ 108 ಕ್ಕೆ ಕರೆ ಮಾಡಿದ್ದಾರೆ. ವೈದ್ಯರು ಯುವತಿಯನ್ನು ಪರಿಶೀಲನೆ ಮಾಡಿದಾಗ ಆಕೆ ಮೃತ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಊಟಿ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅನುಮಾನಾಸ್ಪದ ಸಾವಿನ ಕಾರಣ ಪೊಲೀಸರು ಪ್ರಕರಣ ದಾಖಲಿಸಿ ಆಕಾಶ್‌ನನ್ನು ಬಂಧನ ಮಾಡಿದ್ದಾರೆ. ಸಾವಿನ ಕುರಿತು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ಬೆಳ್ತಂಗಡಿ: 42 ಸಿಮ್‌ ಕಾರ್ಡ್‌ ಪತ್ತೆ ಪ್ರಕರಣ,ವಿದೇಶಿ ಕರೆನ್ಸಿ ದಂಧೆಯ ಗುಮಾನಿ, ಇಡಿ ಸಂಸ್ಥೆ ಎಂಟ್ರಿ

Leave A Reply