Belthangady: 42 ಸಿಮ್‌ ಕಾರ್ಡ್‌ ಪತ್ತೆ ಪ್ರಕರಣ; ವಿದೇಶಿ ಕರೆನ್ಸಿ ದಂಧೆಯ ಗುಮಾನಿ, ಇಡಿ ಸಂಸ್ಥೆ ಎಂಟ್ರಿ

Share the Article

Belthangady: ನಿಗೂಢ ಕಾರ್ಯ ಸಾಧನೆ ಮಾಡಲೆಂದು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಸಂಗ್ರಹಿಸಿಕೊಂಡು ಬೆಂಗಳೂರು ಕಡೆ ಪ್ರಯಾಣ ಮಾಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್‌ ನವರು ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿದ್ದ ಪ್ರಕರಣ ಸಂಬಂಧ ಇದೀಗ ಐದು ಜನ ಆರೋಪಿಗಳು ವಿದೇಶಿ ಕರೆನ್ಸ್‌ ದಂಧೆ ನಂಟು ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಈ ಪ್ರಕರಣ ಭೇದಿಸಲು ಇಡಿ ಸಂಸ್ಥೆ ಎಂಟ್ರಿಯಾಗಿದೆ.

ಇದನ್ನೂ ಓದಿ: Valentine’s day: ವ್ಯಾಲಂಟೈನ್ಸ್ ದಿನ ಹುಡುಗಿಯರು ಕಿಸ್, ಬಟ್ಟೆ, ಗಿಫ್ಟ್ ಗಿಂತ ‘ಅದನ್ನು’ ಕೇಳಿದ್ದೇ ಹೆಚ್ಚಂತೆ !!

ಫೆ.1 ರಂದು ಪ್ರಕರಣ ಐದು ಜನ ಆರೋಪಿಗಳ ಮೇಲೆ ದಾಖಲಾದ ಮೋಸ ವಂಚನೆ ಅಥವಾ ನಿಗೂಢ ಕಾರ್ಯಸಾಧನೆ ಮಾಡುವ ಪ್ರಕರಣದ ಕುರಿತು ಪೊಲೀಸ್‌ ಹಿರಿಯ ಅಧಿಕಾರಿಗಳು ವಿದೇಶಿ ಕರೆನ್ಸಿ ದಂಧೆಯಲ್ಲಿ ಈ ಐದು ಜನ ಆರೋಪಿಗಳು ಶಾಮೀಲಾಗಿರುವ ಕುರಿತು ಜಾರಿ ನಿರ್ದೇಶಾನಲಯ ಅಧಿಕಾರಿಗಳಿಗೆ ಕರೆ ಮಾಡಿ ಮೌಖಿಕ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಧರ್ಮಸ್ಥಳ ಪೊಲೀಸರು ಜಾರಿ ನಿರ್ದೇಶಾನಾಲಯ ಇಲಾಖೆಗೆ ವಿದೇಶಿ ನಂಟು ಇರುವ ಕಾರಣ ಹೆಚ್ಚಿನ ತನಿಖೆ ನಡೆಸಲು ಲಿಖಿತ ರೂಪದಲ್ಲಿ ಪತ್ರವನ್ನು ಬರೆದಿದ್ದರು. ಇದೀಗಿ ಇಡಿ ಅಧಿಕಾರಿಗಳು ಆಗಮನಿಸಿ ಐದು ಜನ ಆರೋಪಿಗಳನ್ನು ಕಚೇರಿಗೆ ಕರೆಯಿಸಿ ಖುದ್ದಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿರುವುದಾಗಿ ವರದಿಯಾಗಿದೆ. ಇದೀಗ ಇಡಿ ಅಧಿಕಾರಿಗಳು ಹೊಸ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ.

Leave A Reply