Valentine’s day: ವ್ಯಾಲಂಟೈನ್ಸ್ ದಿನ ಹುಡುಗಿಯರು ಕಿಸ್, ಬಟ್ಟೆ, ಗಿಫ್ಟ್ ಗಿಂತ ‘ಅದನ್ನು’ ಕೇಳಿದ್ದೇ ಹೆಚ್ಚಂತೆ !!

Share the Article

Valentine’s day : ನಾಳೆ (ಫೆ. 14) ಪ್ರೇಮಿಗಳ ದಿನಾಚರಣೆ(Valentine’sday). ಇನ್ನು ಒಂದೇ ದಿನದಲ್ಲಿ ಪ್ರೇಮಿಗಳ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಸಂಗಾತಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಈ ದಿನ ಕೆಲವು ಜೋಡಿಗಳು ಬಹಳ ವಿಶೇಷ ರೀತಿಯ ಪ್ಲಾನ್ ಮಾಡಿಕೊಂಡಿರುತ್ತಾರೆ. ತಮ್ಮ ಸಂಗಾತಿಗೆ ಸರ್ಪೈಸ್ ನೀಡಬೇಕು, ಅವರನ್ನು ಖುಷಿ ಪಡಿಸಬೇಕೆಂದು. ಅಲ್ಲದೆ ಕೆಲವು ಹುಡುಗಿಯರು ತಮ್ಮ ಪ್ರಿಯತಮನಿಂದ ವಿಶೇಷ ಉಡುಗೊರೆಯನ್ನು ಬಯಸುತ್ತಾರೆ.

ಇದನ್ನೂ ಓದಿ:MLC election: ಕಾಂಗ್ರೆಸ್ ಅಭ್ಯರ್ಥಿ ಪರ ಬಿಜೆಪಿ ಶಾಸಕ ಕ್ಯಾಂಪೇನ್ !!

ಈ ವ್ಯಾಲಂಟೈನ್ ಡೇ ದಿನ ಹುಡುಗರಿಂದ ಹುಡುಗಿಯರು ಉಡುಗೊರೆ ಬಯಸೋದು ಕಾಮನ್. ಆದರೆ ವಿಶೇಷ ಅಂದ್ರೆ ಫಿಲಿಪೈನ್ಸ್‌ ದೇಶದಲ್ಲಿ ಹುಡುಗಿಯರು ಮುತ್ತು, ಬಟ್ಟೆ ಹಾಗೂ ವಿಶೇಷವಾದ ಉಡುಗೊರೆಗಳಿಗಿಂತ ಹಣವನ್ನಂ ಹೆಚ್ಚು ಬಯಸುತ್ತಾರಂತೆ! ವಿಚಿತ್ರ ಅಂದರೂ ಇದು ನಿಜ

ಹೌದು, ಫಿಲಿಪೈನ್ಸ್ ದೇಶದಲ್ಲಿ ಸಮೀಕ್ಷೆಯೊಂದು ನಡೆದಿದ್ದು, ವ್ಯಾಲಂಟೈನ್ಸ್‌ ಡೇ ಸಮಯದಲ್ಲಿ ಯಾವ ಉಡುಗೊರೆ ಬಯಸ್ತೀರಿ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅನೇಕರು ನೀಡಿದ ಉತ್ತರ ಹಣ !! ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 16ರಷ್ಟು ಮಂದಿ ಹಣ ನಿರೀಕ್ಷೆ ಮಾಡಿದ್ರೆ ಶೇಕಡಾ 11 ಮಂದಿ ಪ್ರೀತಿ ಒಡನಾಟ ಎಂದಿದ್ದಾರೆ. ಶೇಕಡಾ 10 ಮಂದಿ ಹೂವಾದ್ರೆ ಶೇಕಡಾ 9 ಮಂದಿ ಬಟ್ಟೆ ಆಯ್ಕೆ ಮಾಡಿದ್ದಾರೆ.

Leave A Reply