Gay Marriage: ಪತ್ನಿಯನ್ನು ಬಿಟ್ಟು ಸಲಿಂಗಿ ಮದುವೆಯಾದ ಯುವಕ
Viral Marriage: ಖಾಸಗಿ ಸಮಾರಂಭವೊಂದರಲ್ಲಿ ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ವಾಸುದೇವ್ ಮತ್ತು ಅಮಿತ್ ಪರಸ್ಪರ ಹಾರ ಬದಲಾಯಿಸಿಕೊಂಡು, ಹಣೆಗೆ ಸಿಂಧೂರವಿಟ್ಟು ವಿವಾಹವಾಗಿರುವ(Viral Marriage) ಘಟನೆ ಹೌರಾದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಬ್ಬರು ಯುವಕರು ಸಲಿಂಗ ಮದುವೆಯಾಗಿದ್ದಾರೆ. ಇವರ ಮದುವೆಗೆ ಕುಟುಂಬದವರು ಸಹ ಒಪ್ಪಿದ್ದಾರೆ. ಇದರಲ್ಲಿ ಒಬ್ಬನು ಈಗಾಲೇ ಮದುವೆಯಾಗಿದ್ದು, ಪತ್ನಿಯನ್ನು ಬಿಟ್ಟು ಬಂದಿದ್ದಾನೆ. ತಾನು ಪ್ರೀತಿಸಿದ ಹುಡುಗನನ್ನೇ ಮದುವೆ ಯಾಗಿದ್ದಾನೆ. ಯುವಕ ಸಲಿಂಗಕಾಮಿ ಸಂಗಾತಿಯನ್ನು ಮದುವೆಯಾಗಲು ಹೆಂಡತಿಗೆ ಕೈಕೊಟ್ಟಿದ್ದಾನೆ. ಪ್ರೀತಿಗೆ ಜಾತಿ-ಧರ್ಮವಿಲ್ಲ ಅನ್ನೋ ಸಾಲಿನಲ್ಲಿ ಲಿಂಗವೂ ಇಲ್ಲವೆನ್ನುವಂತೆ ಸಿಯುರಿ ನಿವಾಸಿ ವಾಸುದೇವ್ ಚಕ್ರವರ್ತಿ(37) ಎಂಬಾತ ತನ್ನ ಸಂಗಾತಿ ಅಮಿತ್ ಮಲಿಕ್‌ನೊಂದಿಗೆ ಮದುವೆಯಾಗಿದ್ದಾನೆ.
ಹೌರಾದಲ್ಲಿ ನಡೆದ ಸಮಾರಂಭದಲ್ಲಿ ಸ್ನೇಹಿತರು, ಹಿತೈಷಿಗಳನ್ನು ಒಳಗೊಂಡಂತೆ ವಾಸುದೇವ್ ಮತ್ತು ಅಮಿತ್ ಪರಸ್ಪರ ಹಾರ ಬದಲಾಯಿಸಿಕೊಂಡು, ಹಣೆಗೆ ಸಿಂಧೂರವಿಟ್ಟುಕೊಂಡು ಮದುವೆಯಾಗಿದ್ದಾರೆ. ಈ ಸಲಿಂಗಿಗಳ ವಿವಾಹದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ಕುರಿತಂತೆ ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹದ ಕುರಿತು ಕಾನೂನು ಮಾನ್ಯತೆ ಇಲ್ಲವೆಂದು ಸುಪ್ರೀಂಕೋರ್ಟ್ ತಿಳಿಸಿದೆ. ಆದ್ರೆ ದೇಶದಲ್ಲಿ ಸಲಿಂಗ ಪ್ರೇಮ ಪ್ರಕರಣಗಳು ನಡೆಯುತ್ತಲೇ ಇವೆ. ಇವರ ಮದುವೆಗೆ ಕುಟುಂಬಸ್ಥರು ಸಮ್ಮತಿ ನೀಡಿರುವುದು ವಿಶೇಷವಾಗಿದೆ. ಈ ಮದುವೆ ನಮಗೆ ತುಂಬಾ ಸಂತೋಷ ತಂದಿದೆ, ಸುತ್ತಮುತ್ತಲಿನ ಜನರು ಮತ್ತು ಸ್ನೇಹಿತರು ಖುಷಿ ವ್ಯಕ್ತಪಡಿಸಿ ಹಾರೈಸಿದ್ದಾರೆ ಎಂದು ಮನೆಯ ಸದಸ್ಯರು ತಿಳಿಸಿದ್ದಾರೆ.
ಸಿಯುರಿಯ ಕರಿಧ್ಯದ ಸೆಂಪಾರ ನಿವಾಸಿ ವಾಸುದೇವ್ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಆದರೆ ತನ್ನ ಹೆಂಡತಿ ಜೊತೆಗೆ ಸರಿಯಾದ ಬಾಂಧವ್ಯವಿರಲ್ಲಿಲ್ಲ. ಸದಾ ಜಗಳಗಳಾಗುತ್ತಿತ್ತಂತೆ. ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದಿದ್ದಾರೆಂದು ವರದಿಯಾಗಿದೆ.