Bengaluru: ಮುಖಾಮುಖಿಯಾದ ಮೆಟ್ರೋ ರೈಲುಗಳು; ತಪ್ಪಿದ ಭಾರೀ ದುರಂತ
ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆ

Bengaluru Metro: ಇಂದು ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವೈಟ್ ಫೀಲ್ಡ್ ನಿಂದ ಚೆಲ್ಲಘಟ್ಟ ಸಾಗುವ ಮೆಟ್ರೋ ದಾರಿಯಲ್ಲಿ ಸುಮಾರು 20 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಈ ದಾರಿಯಲ್ಲಿ ಎರಡು ಟ್ರ್ಯಾಕ್ ನಲ್ಲಿ ಸಂಚರಿಸಬೇಕಾದ ಎರಡು ಟ್ರೈನ್ ಗಳು ನಾಯಂಡಹಳ್ಳಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದೇ ಈ ಅವ್ಯವಸ್ಥೆಗೆ ಕಾರಣ.

ಗ್ರೀನ್ ಮಾರ್ಗದಲ್ಲಿ ಸಂಚರಿಸಬೇಕಾದ ಹಸುರು ಬಣ್ಣದ ಟ್ರೈನ್ ಎದುರಾಗಿ ಬಂದು ಕೆಲವೇ ಮೀಟರ್ ಅಂತರದಲ್ಲಿ ನಿಂತಿತ್ತು. ಇದು ಅವ್ಯವಸ್ಥೆಗೆ ಕಾರಣ ಏನೆಂದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಬೇಕಿದೆ.
ಪ್ರತಿ ಸ್ಟೇಷನ್ ಗಳಲ್ಲಿ ಮೆಟ್ರೋ ನಿಂತು ಬಿಟ್ಟಿವೆ. ಪ್ರಯಾಣಿಕರು ರೈಲಿನಿಂದ ಇಳಿದು ಬದಲೀ ವ್ಯವಸ್ಥೆ ಮಾಡಿಕೊಂಡಿದ್ದಾರೆ.