Home Crime Indian Student: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯ ಭೀಕರ ಹತ್ಯೆ; 50 ಬಾರಿ ಸುತ್ತಿಗೆಯಿಂದ ಹೊಡೆದು ಹತ್ಯೆ!

Indian Student: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯ ಭೀಕರ ಹತ್ಯೆ; 50 ಬಾರಿ ಸುತ್ತಿಗೆಯಿಂದ ಹೊಡೆದು ಹತ್ಯೆ!

Indian Student

Hindu neighbor gifts plot of land

Hindu neighbour gifts land to Muslim journalist

Crime News: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ವಿದ್ಯಾಭ್ಯಾಸದ ಜೊತೆಗೆ ಕೆಲಸವನ್ನು ಮಾಡುತ್ತಿದ್ದ ಸಂದರ್ಭ ಭಿಕಾರಿಗೆ ಊಟ ನೀಡುವ ಮೂಲಕ ಸಹಾಯವನ್ನು ಮಾಡುತ್ತಿದ್ದ. ಆದರೆ ಅನ್ನ ತಿಂದ ಆ ಭಿಕಾರಿ ಇದೀಗ ಭಾರತೀಯ ವಿದ್ಯಾರ್ಥಿಯ ಭೀಕರ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: D.K.: ಸುಡುಮದ್ದು ತಯಾರಿ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ!!!

ಭಿಕಾರಿಗೆ ಅನ್ನ ಹಾಕಿದ್ದೇ ತಪ್ಪಾಯ್ತು!!

ವಿವೇಕ್‌ ಸೈನಿ (25) ಎಂಬಾತನೇ ಅಮೆರಿಕದ ಜಾರ್ಜಿಯಾದಲ್ಲಿ ಎಂಬಿಯ ಕಲಿಯುತ್ತ. ಈತ ತನ್ನ ಬಿಡುವಿನ ವೇಳೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮನೆ ಮಠ ಇಲ್ಲದ ಭಿಕಾರಿಯೊಬ್ಬ ಅಲ್ಲಿಗೆ ಊಟ ಕೇಳಿಕೊಂಡು ಬರುತ್ತಿದ್ದ. ಇದರಿಂದ ಮನಸ್ಸು ಕರಗಿ ವಿವೇಕ್‌ ಸೈನಿ ವ್ಯಕ್ತಿಗೆ ದಿನಾಲೂ ತಿನ್ನಲು ಆಹಾರ ಉಚಿತವಾಗಿ ನೀಡುತ್ತಿದ್ದ. ಆದರೆ ಆ ಭಿಕಾರಿ ಯಾವಾಗ ಮಾದಕ ವ್ಯಸನಿ ಎಂದು ಗೊತ್ತಾಯಿತೋ ವಿವೇಕ್‌ ಆತನಿಗೆ ಆಹಾರ ನೀಡುವುದನ್ನು ಬಿಟ್ಟಿದ್ದಾನೆ. ಇದರಿಂದ ಕೋಪಗೊಂಡ ಭಿಕಾರಿ ಈತನ ಹತ್ಯೆಗೆ ಸಂಚು ಮಾಡಿದ್ದು, ಒಂದು ದಿನ ನೇರವಾಗಿ ವಿವೇಕ್‌ ಸೈನಿ ಇರುವ ಅಂಗಡಿಗೆ ಪ್ರವೇಶಿಸಿ ವಿವೇಕ್‌ ಸೈನಿ ತಲೆಗೆ ಸುತ್ತಿಗೆಯಿಂದ ದಾಳಿ ಮಾಡಿದ್ದಾನೆ.

 

ಈತ ಬರೋಬ್ಬರಿ ಐವತ್ತು ಬಾರಿ ವಿವೇಕ್‌ ಸೈನಿ ತಲೆ ಮುಖಕ್ಕೆ ಹೊಡೆದಿದ್ದಾನೆ. ಅಂಗಡಿಯಲ್ಲಿದ್ದ ಇತರ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜೂಲಿಯನ್‌ ಫಾಕ್ನರ್‌ ಆರೋಪಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜ.26 ಕ್ಕೆ ವಿವೇಕ್‌ ಸೈನಿ ಭಾರತಕ್ಕೆ ಬರಬೇಕಿತ್ತು. ಆದರೆ ಇದರ ನಡುವೆ ಹತ್ಯೆ ನಡೆದಿರುವುದು ಅವರ ಕುಟುಂಬಕ್ಕೆ ಆಘಾತ ತಂದಿದೆ. ಭಾರತಕ್ಕೆ ಮೃತದೇಹವನ್ನು ತರವು ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ.