Director Mansore: ರಾಷ್ಟ್ರಪ್ರಶಸ್ತಿ ಖ್ಯಾತಿಯ ಮಂಸೋರೆ ವಿರುದ್ಧ ಪತ್ನಿಯಿಂದ ವರದಕ್ಷಿಣೆ ದೂರು; ನನ್ನ ಹೆಂಡತಿ ಮಾನಸಿಕ ಅಸ್ವಸ್ಥೆ ಎಂದ ನಿರ್ದೇಶಕ

Share the Article

Director Mansore: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (ಮಂಜುನಾಥ್‌) ಅವರ ಪತ್ನಿ ಅಖಿಲಾ, ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ದೂರು ದಾಖಲು ಮಾಡಿದ್ದಾರೆ.

ಇದಕ್ಕೆ ಮಂಸೋರೆ ಅವರು ಪತ್ನಿಯು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಕೌನ್ಸಲಿಂಗ್‌ ಅಗತ್ಯವಿದೆ ಎಂದು ಠಾಣೆಗೆ ಪತ್ರ ರವಾನಿಸ್ದು, ಇಬ್ಬರೂ ದೂರು ಪ್ರತಿದೂರು ದಾಖಲು ಮಾಡಿದ್ದಾರೆ.

ಕೋವಿಡ್‌ ಸಮಯದಲ್ಲಿ ಪತಿ ಮಂಸೋರೆ ಅವರು ಸಿನಿಮಾ ಮಾಡಲು ತಮ್ಮ ಮನೆಯವರಿಂದ 10ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಮಂಸೋರೆ ಅವರ ತಾಯಿ ವೆಂಟಕಲಕ್ಷ್ಮಮ್ಮ ಮತ್ತವರ ಸಹೋದರಿ ಹೇಮಲತಾ ತಮಗೆ 30 ಲಕ್ಷದ ಎಸ್‌ಯುವಿ ಕಾರು ಕೊಡಿಸುವಂತೆ ಪೀಡಿಸಿದ್ದಾರೆ. ಇದನ್ನೇನಾದರೂ ಹೊರಗಡೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಅಖಿಲಾ ಅವರು ತಿಳಿಸಲಾಗಿದೆ.

ಇತ್ತ ಪರಿ ಮಂಸೋರೆ ಅವರು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರಿಗೆ ಪತ್ರದ ಮೂಲಕ, ನನ್ನ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಇದೆ. ಮಾನಸಿಕ ಅಸ್ವಸ್ಥತೆಯಿಂ ನನ್ನ ಪತ್ನಿ ಅಖಿಲಾ ಬಳಲುತ್ತಿದ್ದು, ಇದು ನನ್ನ ವೈಯಕ್ತಿಕ ಜೀವನಕ್ಕೂ ತೊಂದರೆಯಾಗಿದೆ. ಬೆಂಗಳೂರಿನ ಕೌನ್ಸಲಿಂಗ್‌ ಸೆಂಟರ್‌ಗೆ ಪತ್ನಿಯನ್ನು ಕರೆದುಕೊಂಡು ಹೋಗಿರುತ್ತೇನೆ. ಅವರಿಗೆ ನಿರಂತರ ಚಿಕಿತ್ಸೆಯ ಅಗತ್ಯವಿದೆ ಎಂದು ಕೌನ್ಸಲಿಂಗ್‌ ಮಾಡಿದ ಕಾರ್ಮೆಲಿಟಾ ಹೇಳಿದ್ದಾರೆ ಎಂದು ವರದಿಯಾದಿದೆ.

ನಾನು ಯಾವುದೇ ವಾಹನ, ವಸ್ತು ಉಡುಗೊರೆ ರೂಪದಲ್ಲಿ ಪಡೆದಿಲ್ಲ. ನೀವು ನನ್ನ ಬ್ಯಾಂಕ್‌ ಖಾತೆ ಮತ್ತು ವ್ಯವಹಾರಗಳ ಬಗ್ಗೆ ಪರೀಕ್ಷೆ ಮಾಡಿ ತನಿಖೆ ಕೈಗೊಳ್ಳಬಹುದು. ದೂರು ನೀಡುವ ಮೊದಲು ನನ್ನ ಪತ್ನಿ ಆತ್ಮಹತ್ಯೆಗೆ ಯತ್ನ ಮಾಡಿದ್ದು. ಅದರ ದೃಶ್ಯ, ನನ್ನ ತಾಯಿಯ ವಿರುದ್ಧ ನಿಂದನೆ ಮಾಡಿದ ದೃಶ್ಯ, ಹಲ್ಲೆ ಮಾಡಿದ ವೀಡಿಯೋ ನನ್ನ ಬಳಿ ಇದೆ. ಇವುಗಳನ್ನು ಸಾಕ್ಷಿಯಾಗಿ ಅರ್ಜಿಯ ಜೊತೆ ನೀಡಿದ್ದೇ. ನಾನು ಕೊಡಿಸಿದ ಚಿನ್ನಾಭರಣಗಳ ಜೊತೆಗೆ ನನಗೆ ಬಂದಿದ್ದ ರಾಷ್ಟ್ರಪ್ರಶಸ್ತಿಯನ್ನೂ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ.

 

Leave A Reply