Vijayapura: ಲವ್‌, ಸೆಕ್ಸ್‌, ದೋಖಾ-ಪ್ರೀತಿ ಹೆಸರಲ್ಲಿ ಕಾನ್ಸ್‌ಟೇಬಲ್‌ನಿಂದ ಯುವತಿಗೆ ಮೋಸ!!!

Share the Article

Vijayapur: ಯುವತಿಯೋರ್ವಳು ಪೊಲೀಸ್‌ ಕಾನ್ಸ್ಟೇಬಲ್‌ ಪ್ರೀತಿಗೆ ಬಿದ್ದು, ಇದೀಗ ಆತ ಆಕೆಯನ್ನು ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡ ಆರೋಪವನ್ನು ಪೊಲೀಸ್‌ ಕಾನ್ಸ್ಟೇಬಲ್‌ ಎದುರಿಸುತ್ತಿದ್ದಾರೆ.

ಈ ಘಟನೆ ನಡೆದಿರುವುದು ವಿಜಯಪುರದಲ್ಲಿ. ವಿಜಯಪುರ ನಗರದ ಗಾಂಧಿಚೌಕ್‌ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿರುವ ವಿನಾಯಕ್‌ ಟಕ್ಕಳಕಿ ಓರ್ವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂಬ ಆಋೋಪ ಕೇಳಿ ಬಂದಿದೆ.

ಇವರಿಬ್ಬರಿಗೆ ಎಂಟು ತಿಂಗಳ ಹಿಂದೆ ಪರಿಚಯವಾಗಿದೆ. ನಂತರ ಪರಿಚಯ ಪ್ರೇಮಕ್ಕೆ ತಿರುಗಿದೆ. ಈ ಸಲುಗೆಯಲ್ಲಿ ಕಾನ್ಸ್‌ಟೇಬಲ್‌ ಯುವತಿ ಜೊತೆ ಹಲವು ಬಾರಿ ದೈಹಿಕ ಸಂಪರ್ಕ ಮಾಡಿದ್ದನಂತೆ. ಆದರೆ ಇತ್ತೀಚೆಗೆ ಈತ ಯುವತಿಯನ್ನು ಮದುವೆಯಾಗಲು ನಿರಾಕರಣೆ ಮಾಡುತ್ತಾ ಬಂದಿದ್ದಾನೆಂದು ಆರೋಪವಿದೆ. ಯುವತಿ ಹಲವು ಬಾರಿ ಮದುವೆಯಾಗು ಎಂದು ಹೇಳಿದರೂ ಅದನ್ನು ನಿರಾಕರಿಸುತ್ತಲೇ ಬಂದಿದ್ದಾನೆ. ಇದರಿಂದ ರೋಸಿ ಹೋದ ಯುವತಿ ಇದೀಗ ದೂರು ದಾಖಲು ಮಾಡಿದ್ದಾಳೆ. ಪೊಲೀಸರಿಗೆ ಫೋಟೋಸ್‌ಗಳನ್ನು ನೀಡಿದ್ದಾಳೆ. ಇದೀಗ ಮಹಿಳಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದೀಗ ಕಾನ್ಸ್‌ಟೇಬಲ್‌ ವಿನಾಯಕ ಟಕ್ಕಳಕಿ ಕಳೆದ ಇಪ್ಪತ್ತು ದಿನಗಳಿಂದ ಸೇವೆಗೆ ಗೈರಾಗಿದ್ದಾನೆ. ಗಾಂಧಿ ಚೌಕ್‌ ಪೊಲೀಸ್‌ ಠಾಣೆಗೆ ಆತ ಸೇವೆಗೆ ಬಂದಿಲ್ಲ. ಇತ್ತ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲು ಮಾಡಿ ವಿನಾಯಕ ಟಕ್ಕಳಕಿ ಪತ್ತೆಗೆ ಬಲೆ ಬೀಸಿದ್ದಾರೆ.

ಯುವತಿ ನ್ನನ ಜೊತೆ ಆತ ಮದುವೆಯಾಗಬೇಕೆಂದು ಪಟ್ಟು ಹಿಡಿದಿದ್ದಾಳೆ. ಇದೀಗ ವಿನಾಯಕ ಟಕ್ಕಳಕಿಯ ಲವ್‌, ಸೆಕ್ಸ್‌, ದೋಖಾ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave A Reply