Lover ಡೆತ್‌ನೋಟ್‌ನಲ್ಲಿತ್ತು ಹತ್ಯೆಗೀಡಾದ ಪ್ರೇಯಸಿಯ ಕೋಡ್‌! ನಾಪತ್ತೆಯಾಗಿದ್ದ ಪ್ರೇಯಸಿಯ ಶವ ದೊರಕಿದ್ದೆಲ್ಲಿ ಗೊತ್ತೇ?

Share the Article

Mumbai: ಮಹಾರಾಷ್ಟ್ರದ ನವಿಮುಂಬಯಿಂದ ಡಿ.12,2023 ರಂದು ನಾಪತ್ತೆಯಾಗಿದ್ದ 19 ವರ್ಷದ ಯುವತಿ ವೈಷ್ಣವಿ ಬಾಬರ್‌ ಎಂಬುವರ ಶವ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಈ ಶವ ಪತ್ತೆಯಾಗಿರುವುದು ಆಕೆಯ ಪ್ರಿಯಕರ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿದ್ದ ಸೀಕ್ರೆಟ್‌ ಕೋಡ್‌ನಿಂದ.

ಇದನ್ನೂ ಓದಿ: kadaba: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ 

ಈಕೆ ವೈಭವ ಎಂಬ ಯುವಕನ ಜೊತೆಗೆ ಪ್ರೀತಿಯಲ್ಲಿದ್ದು ವೈಷ್ಣವಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಆಕೆ ನಾಪತ್ತೆಯಾಗಿದ್ದ ದಿನವೇ ಇತ್ತ ವೈಭವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಿಯಕರನ ಶವ ಏನೋ ಸಿಕ್ಕಿತ್ತು. ಆದರೆ ವೈಷ್ಣವಿ ಏನಾಗಿದ್ದಳು ಎಂಬುವುದು ತಿಳಿದಿರಲಿಲ್ಲ. ನಂತರ ವೈಭವ್‌ ಮೊಬೈಲ್‌ನಲ್ಲಿದ್ದ ಡೆತ್‌ನೋಟ್‌ ಗಮನಿಸಿದಾಗ ಅದರಲ್ಲಿ ಎಲ್‌01-501 ಎಂಬ ಕೋಡ್‌ ಇದ್ದಿರುವುದು ಕಂಡಿದ್ದಾರೆ. ಇದನ್ನು ತನಿಖೆ ಮಾಡಿದಗ, ಆ ಸಂಖ್ಯೆಯು ಅರಣ್ಯ ಇಲಾಖೆಯು ಮರವೊಂದರ ಮೇಲೆ ಬರೆದಿರುವ ಸಂಖ್ಯೆ ಎಂದು ಗೊತ್ತಾಗಿದೆ.

ಅದೇ ಮರದ ಕೆಳಗೆ ವೈಷ್ಣವಿಯ ಶವ ಹೂತಿರುವುದು ಪತ್ತೆಯಾಗಿದೆ.

Leave A Reply