SBI Bank ನೊಳಗೆ ಬಂದ ಗೂಳಿ; ಅಲ್ಲಿಗೆ ಬಂದು ಮಾಡಿದ್ದೇನು ನೋಡಿ!!!

Share the Article

SBI Bank: ಉತ್ತರ ಪ್ರದೇಶದ ಉನ್ನಾವೋದ ಶಹಗಂಜ್‌ ಪ್ರದೇಶದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಗೆ ಗೂಳಿಯೊಂದು ಎಂಟ್ರಿ ನೀಡಿದೆ. ಈ ವೇಳೆ ಬ್ಯಾಂಕಿನೊಳಗಿದ್ದ ಗ್ರಾಹಕರು ಹಾಗೂ ಸಿಬ್ಬಂದಿಗಳು ಗಲಿಬಿಲಿಗೊಂಡಿದ್ದಾರೆ.

ಬ್ಯಾಂಕಿನೊಳಗೆ ಪ್ರವೇಶ ಮಾಡಿದ ಗೂಳಿ ಯಾರಿಗೂ ತೊಂದರೆ ಕೊಟ್ಟಿಲ್ಲ. ತನ್ನ ಪಾಡಿಗೆ ತಾನು ನಿಂತಿದೆ. ಗ್ರಾಹಕರು ಬೇಗ ಬೇಗನೇ ಕೆಲಸ ಮುಗಿಸಿ ಬ್ಯಾಂಕ್‌ನಿಂದ ಹೊರ ಹೋಗಿದ್ದಾರೆ. ಕೆಲವರು ತಮ್ಮ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದಿ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.

ಇದೀಗ ಇದರ ವೀಡಿಯೋ ವೈರಲ್‌ ಆಗಿದೆ. ಮಾಹಿತಿಯ ಪ್ರಕಾರ ಬ್ಯಾಂಕ್‌ನ ಹೊರ ಭಾಗದಲ್ಲಿ ಎರಡು ಗೂಳಿಗಳು ಕಾದಾಡಿಕೊಂಡಿದ್ದು, ಒಂದು ಗೂಳಿ ಸೀದಾ ಬ್ಯಾಂಕ್‌ ಒಳಗೆ ಪ್ರವೇಶ ಮಾಡಿದೆ ಎಂದು ಹೇಳಲಾಗಿದೆ.

https://twitter.com/i/status/1745013934258819502

Leave A Reply