Congress: ರಾಮ ಮಂದಿರಕ್ಕೆ ಕಾಂಗ್ರೆಸ್ ಕೊಡುಗೆಯ ಪಟ್ಟಿ ಬಿಡುಗಡೆ!!
Congress: ಭಾರತದ ಹಳ್ಳಿ, ಹಳ್ಳಿಗಳಲ್ಲಿ ಲಕ್ಷಾಂತರ ರಾಮದೇಗುಲ (Ram Mandir)ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧಿನಾಯಕರಾಗಿದ್ದರು ಎಂದು ಕಾಂಗ್ರೆಸ್ ಬಿಜೆಪಿಗೆ ಟಾಂಗ್ ನೀಡಿದೆ. ಈ ನಡುವೆ, ಕಾಂಗ್ರೆಸ್ ರಾಮ ಮಂದಿರಕ್ಕೆ ನೀಡಿದ ಕೊಡುಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ಪಟ್ಟಿ ಹೀಗಿದೆ:
*ಭಾರತದ ಹಳ್ಳಿ, ಹಳ್ಳಿಗಳಲ್ಲಿ ಲಕ್ಷಾಂತರ ರಾಮದೇಗುಲ ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ.
* ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧಿನಾಯಕರಾಗಿದ್ದರು.
* ನಾಥುರಾಮ್ ಗೂಡ್ಲೆ ಹಾರಿಸಿದ ಗುಂಡಿಗೆ ಎದೆ ಸೀಳಿ ಹುತಾತ್ಮರಾದಾಗ ಮಹಾತ್ಮ ಗಾಂಧೀಜಿ ಅವರು ಹೇಳಿದ ಕೊನೇ ಮಾತು ಹೇ ರಾಮ್! ಆಗ ಬಿಜೆಪಿ ಹುಟ್ಟೇ ಇರಲಿಲ್ಲ.
ಇದನ್ನೂ ಓದಿ: Relation tips: ಹುಡುಗಿಯರ ಬಗ್ಗೆ ಹುಡುಗರು ತಿಳಿಯಲೇಬೇಕಾದ 4 ರಹಸ್ಯಗಳಿವು !!
* 1985-86 ರಲ್ಲಿ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇ ರಾಜೀವ್ ಗಾಂಧಿ.
* 1989 ರಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ವಿಶ್ವ ಹಿಂದೂ ಪರಿಷತ್ ಗೆ ಅವಕಾಶ ಕಲ್ಪಿಸಿದವರು ರಾಜೀವ್ ಗಾಂಧಿ. ರಾಜೀವ್ ಗಾಂಧಿ ಅವರು ಮೊದಲ ಹೆಜ್ಜೆ ಇಡದೇ ಹೋಗಿದ್ದರೆ ಬಿಜೆಪಿಯವರಿಗೆ ಇದರ ಆಲೋಚನೆಯೇ ಬರುತ್ತಿರಲಿಲ್ಲ.
* ದೂರದರ್ಶನದಲ್ಲಿ ರಾಮಾಯಣದ ಸೀರಿಯಲ್ ಪ್ರಸಾರ ಮಾಡಿ ಮನೆ, ಮನೆಯೂ ರಾಮಲಲ್ಲಾನನ್ನು ಕಣ್ಣುಂಬಿಕೊಳ್ಳುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ.
* ರಾಮ ಮತ್ತು ಆತನ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ. ಆದರೆ ರಾಮನ ಹೆಸರೇಳಿಕೊಂಡೇ ರಾಜಕೀಯ ಆಶ್ರಯ ಹುಡುಕುವ ಬಿಜಪಿಗೆ ಸನ್ಮತಿ ದೇ ಭಗವಾನ್” ಎಂದು ಹೇಳಬೇಕಾಗಿ ಬಂದಿರುವುದು ದುರಂತ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
https://x.com/INCKarnataka/status/1744315758333788321?s=20