Egg: ಕೋಳಿ ಮೊಟ್ಟೆ ಚೆನ್ನಾಗಿದೆಯೋ ಇಲ್ಲ ಹಾಳಾಗಿದೆಯೋ ಎಂದು ತಿಳಿಯಲು ಇಲ್ಲಿದೆ ಸಿಂಪಲ್ ಟ್ರಿಕ್ಸ್ !!
Egg: ಹಲವರಿಗೆ ಕೋಳಿ ಮೊಟ್ಟೆ ಎಂದರೆ ಇಷ್ಟ. ಹೆಚ್ಚಿನ ಪ್ರೋಟೀನ್ ಇದರಿಂದ ದೊರೆಯುವುದರಿಂದ ಹಾಗೆ ತಿನ್ನಲು ಮಾತ್ರವಲ್ಲ, ಡಯಟ್ ಫುಡ್ ಆಗಿಯೂ ಇದನ್ನು ಬಳಸುತ್ತಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕೋಳಿ ಮೊಟ್ಟೆಯನ್ನು ಮನೆಗೆ ತರುತ್ತಾರೆ. ತಂದಾಗ ಒಮ್ಮೊಮ್ಮೆ ಅವುಗಳಲ್ಲಿ ಕೆಲವು ಮೊಟ್ಟೆಗಳು ಹಾಳಾಗಿರುತ್ತವೆ. ಆದ್ರೆ ಈ ಮೊಟ್ಟೆ(Egg)ಗಳು ಹಾಳಾಗಿರುವುದನ್ನು ಪತ್ತೆ ಹಚ್ಚುವುದೇಗೆ ಗೊತ್ತಾ? ಇಲ್ಲಿದೆ ನೋಡಿ ಸುಲಭ ವಿಧಾನ.
ಇನ್ಸ್ಟಾಗ್ರಾಮ್ ಅಲ್ಲಿ ಕೋಳಿ ಮೊಟ್ಟೆಯು ಚೆನ್ನಾಗಿದೆಯೋ, ಇಲ್ಲವೋ ಎಂದು ಹೇಗೆ ಪತ್ತೆ ಹಚ್ಚಬಹುದೆಂದು ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಮೊಬೈಲ್ ಚಾರ್ಚ್(Mobile torch)ಅನ್ನು ಆನ್ ಮಾಡಿಕೊಂಡು ಅದನ್ನು ಟೇಬಲ್ ಮೇಲೆ ಇಡಲಾಗಿದೆ. ಆ ಲೈಟ್ ಮೇಲೆ ಒಂದೊಂದೇ ಮೊಟ್ಟೆಯನ್ನು ಇಟ್ಟು ಚೆಕ್ ಮಾಡಲಾಗುತ್ತದೆ.
ಇದನ್ನೂ ಓದಿ: Lust Stories ನ ಕಿಯಾರ ಪಾತ್ರಕ್ಕೆ ಮೊದಲು ಸೆಲೆಕ್ಟ್ ಆಗಿದ್ದು ಈ ನಟಿ! ಮುಂದಾಗಿದ್ದೇ ಬೇರೆ!!!
ಮೊಟ್ಟೆ ಇಟ್ಟಾಗ ಮೊಬೈಲ್ ಲೈಟ್ ಗೆ ಮೊಟ್ಟೆ ಒಳಗೂ ರಿಫ್ಲೆಕ್ಟ್ ಆಗುತ್ತದೆ. ಇದು ಮೊಟ್ಟೆಯು ಕೆಡದೆ ಚೆನ್ನಾಗಿದೆ ಎಂದರ್ಥ. ಆದರೆ ಮೊಟ್ಟೆ ಒಳಗೆ ಲೈಟ್ ಯಾವುದೇ ರೀತಿ ರಿಫ್ಲೆಕ್ಟ್ ಆಗದಿದ್ದರೆ ಅದು ಕೆಟ್ಟುಹೋಗಿದೆ ಎಂದರ್ಥ. ವಿಡಿಯೋದಲ್ಲಿ ಇದನ್ನೂ ಕೂಡ ನಾವು ಕಾಣಬಹುದು. ಲೈಟ್ ರಿಫ್ಲೆಕ್ಟ್ ಆಗದ ಮೊಟ್ಟೆಯನ್ನು ಅಲ್ಲಿ ಒಡೆಯಲಾಗುತ್ತದೆ. ಆಗ ಆ ಮೊಟ್ಟೆ ಕೆಟ್ಟುಹೋಗಿರುತ್ತದೆ.
ಮನೆಯಲ್ಲಿ ನೀವು ಒಂದು ಅಥವಾ ಅರ್ಧ ಡಜನ್ ಮೊಟ್ಟೆ ತಂದಾಗ ಈ ಟ್ರಿಕ್ಸ್ ಫಾಲೋ ಮಾಡಿ ಕೆಟ್ಟು ಹೋದ ಹಾಗೂ ಚೆನ್ನಾಗಿರುವ ಮೊಟ್ಟೆಯನ್ನು ಬೇರ್ಪಡಿಸಬಹುದು. ಯಾವಾಗಲೂ ಮೊಟ್ಟೆ ಹಾಳಾಗಿರುವುದಿಲ್ಲ. ಆದರೆ ಕೆಲವೊಮ್ಮೆ ಹೇಳಲು ಆಗುವುದಿಲ್ಲ. ಮತ್ತೆ ಕೊಳೆತ ಮೊಟ್ಟೆ ಕೆಟ್ಟ ವಾಸನೆ ಬರುವುದರಿಂದ ನೀವು ಈ ವಿಧಾನ ಬಳಸಿ ವಾಸನೆಯಿಂದ ಪಾರಾಗಬಹುದು.
https://www.instagram.com/reel/C1APsKhPuXi/?igsh=MWgxMnRxd2N0Y21yMQ==