Home Breaking Entertainment News Kannada Deepika Padukone:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಬಾಲಿವುಡ್ ಕಪಲ್ಸ್; ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ – ರಣವೀರ್!!

Deepika Padukone:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಬಾಲಿವುಡ್ ಕಪಲ್ಸ್; ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ – ರಣವೀರ್!!

Deepika Padukone

Hindu neighbor gifts plot of land

Hindu neighbour gifts land to Muslim journalist

Deepika Padukone: ಬಾಲಿವುಡ್‌ನ ಕ್ಯೂಟ್ ಕಪಲ್ ಗಳಾದ ನಟಿ ದೀಪಿಕಾ ಪಡುಕೋಣೆ(Deepika Padukone) ಹಾಗೂ ಪತಿ ರಣವೀರ್ ಸಿಂಗ್(Ranveer Singh)ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಕಾಫಿ ವಿತ್ ಕರಣ್’ ನಲ್ಲಿ ಭಾಗವಹಿಸಿದ ಈ ಜೋಡಿ ತಮ್ಮ ವೈಯಕ್ತಿಕ ಜೀವನದ( Personal Life)ಬಗ್ಗೆ ಮಾಹಿತಿ ನೀಡಿದ್ದಾರೆ.

Deepika Padukone

ಇದನ್ನೂ ಓದಿ: Rashmika mandanna: ಮುಂಬೈ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ ಎಡ್ವಟ್ !! ವೈರಲ್ ಆಯ್ತು ವಿಡಿಯೋ

ದೀಪಿಕಾ ಪಡುಕೋಣೆ ಮಗು ಮಾಡಿಕೊಳ್ಳುವುದರ ಕುರಿತು ಮಾತನಾಡಿದ್ದು, “ಖಂಡಿತವಾಗಿಯೂ ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ಮಗು ಮಾಡಿಕೊಳ್ಳುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ. ಇದರಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕಳೆದ ವರ್ಷ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಸಂದರ್ಭ ದೀಪಿಕಾ ಹಾಗೂ ರಣವೀರ್(Deepika Padukone-Ranveer Singh) ಇಬ್ಬರೂ ತಮ್ಮ ಮಕ್ಕಳನ್ನು ಅವರ ಪೋಷಕರು ಬೆಳೆಸಿದ ರೀತಿಯಲ್ಲೇ ಅದೇ ಗುಣಗಳೊಂದಿಗೆ ಬೆಳೆಸಲು ಇಚ್ಚಿಸುವುದಾಗಿ ಹೇಳಿಕೊಂಡಿದ್ದಾರೆ.

ದೀಪಿಕಾ ರಣವೀರ್ ಸಿಂಗ್ ಜೊತೆ ಸಂಸಾರ ಆರಂಭಿಸುವ ಅಂದರೆ ಮಗುವಿನ ನಿರೀಕ್ಷೆಯ ಕುರಿತಾಗಿ ಮಾತನಾಡಿದ್ದಾರೆ. ತಂದೆ-ತಾಯಿ ತೋರಿಸಿದ ದಾರಿಯಲ್ಲಿ ನಡೆದು ಬಂದ ಹಿನ್ನೆಲೆ ಚಿತ್ರ ಲೋಕದ ಗ್ಲಾಮರ್ ನನ್ನ ದಾರಿ ತಪ್ಪಿಸಲಿಲ್ಲ. ನನ್ನ ಕುಟುಂಬದಲ್ಲಿ ಯಾರೂ ನನ್ನನ್ನು ಸೆಲೆಬ್ರಿಟಿ ಎಂದು ನೋಡುವುದಿಲ್ಲ. ನಮ್ಮ ಮನೆಯವರಿಗೆ ನಾನು ಮೊದಲು ಮಗಳು ಮತ್ತು ಸಹೋದರಿ ಅಷ್ಟೇ ಅಲ್ಲದೇ ಅದನ್ನು ಬದಲಾಯಿಸಲು ನಾನು ಬಯಸುವುದಿಲ್ಲ. ಇದೇ ಗುಣಗಳನ್ನು ರಣವೀರ್ ಮತ್ತು ನಾನು ನಮ್ಮ ಮಕ್ಕಳಲ್ಲಿ ಕಾಣಲು ಬಯಸುತ್ತೇವೆ” ಎಂದಿದ್ದಾರೆ.