Airtel Annual Plan: ಏರ್ಟೆಲ್ ಗ್ರಾಹಕರಿಗೆ ಬಂಪರ್ ಸಿಹಿ ಸುದ್ದಿ: ಕೈಗೆಟಕುವ ದರದಲ್ಲಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ!!

Airtel Annual Plan: ಏರ್ಟೆಲ್ ಗ್ರಾಹಕರೇ ಗಮನಿಸಿ, ವರ್ಷವಿಡೀ ಸಿಮ್ ಅನ್ನು ಸಕ್ರಿಯವಾಗಿರಿಸುವ (Airtel Annual Plan)ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು( Recharge Plan)ಆಯ್ಕೆ ಬಗ್ಗೆ ನೀವು ಯೋಚಿಸುತ್ತಿದ್ದರೆ ನಿಮಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ!!

ಏರ್‌ಟೆಲ್ ಕನಿಷ್ಠ ವಾರ್ಷಿಕ ರೀಚಾರ್ಜ್ ಯೋಜನೆ ರೂ.1799 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ, ಬಳಕೆದಾರರು 365 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯ ಮೂಲಕ ಗ್ರಾಹಕರು ವರ್ಷಕ್ಕೆ 3600 ಉಚಿತ SMS ಅನ್ನು ಪಡೆಯಬಹುದು. ಏರ್‌ಟೆಲ್ ರೂ.1799 ಪ್ಲಾನ್‌ನೊಂದಿಗೆ ಗ್ರಾಹಕರು HelloTune, Wink Music, Shaw Academy, Apollo 24/7 Circle, ಒಂದು ತಿಂಗಳ Amazon Prime ಮೊಬೈಲ್ ಆವೃತ್ತಿ ಇತ್ಯಾದಿಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಇದರ ಜೊತೆಗೆ ಫಾಸ್ಟ್ಯಾಗ್‌ನಲ್ಲಿ ರೂ.100 ಕ್ಯಾಶ್‌ಬ್ಯಾಕ್ ಕೂಡ ಸಿಗಲಿದೆ. ಈ ಯೋಜನೆಯ ಮೂಲಕ ನಿಮಗೆ ದಿನಕ್ಕೆ ಕೇವಲ 5 ರೂ. ನಷ್ಟು ವೆಚ್ಚವಾಗಲಿದೆ.

ಇದನ್ನು ಓದಿ: Chikkamagaluru News:ಸ್ಕೂಲ್‌ ಬಸ್‌ ಡ್ರೈವರ್‌ ಅಂಕಲ್‌ ಪ್ರೇಮಕ್ಕೆ ಬಿದ್ದ 8 ನೇ ಕ್ಲಾಸ್‌ ಹುಡುಗಿ!! ನ್ಯೂ ಇಯರ್‌ ನೆಪ, ಇಬ್ಬರೂ ರೈಲಿನಡಿಗೆ ಬಿದ್ದು ಸಾವು!!!

ಏರ್‌ಟೆಲ್‌ನ ಅಗ್ಗದ ವಾರ್ಷಿಕ ರೀಚಾರ್ಜ್ ಯೋಜನೆಯು ರೂ.1799 ಮೌಲ್ಯದ್ದಾಗಿದೆ. ವರ್ಷವಿಡೀ ತಮ್ಮ ಸಿಮ್ ಅನ್ನು ಸಕ್ರಿಯವಾಗಿಡಲು ಬಯಸುವ ಏರ್‌ಟೆಲ್ ಗ್ರಾಹಕರಿಗೆ ಇದು ಅತ್ಯುತ್ತಮ ಯೋಜನೆ ಎನ್ನಬಹುದು. ದಿನಕ್ಕೆ 5 ರೂ.ನಂತೆ ವರ್ಷವಿಡೀ ಸಿಮ್ ಸಕ್ರಿಯವಾಗಿರಲಿದ್ದು, ಡೇಟಾ ಅಗತ್ಯವಿಲ್ಲದೇ ಸಿಮ್ ಅನ್ನು ಸಕ್ರಿಯವಾಗಿರಲು ಇಚ್ಛಿಸುವವರಿಗೆ ಇದು ಉತ್ತಮ ಯೋಜನೆ ಎನ್ನಲಾಗುತ್ತದೆ. ಏರ್‌ಟೆಲ್ನ ಈ ರೀಚಾರ್ಜ್ ಪ್ಲಾನ್ನಲ್ಲಿ ಗ್ರಾಹಕರು ಉಚಿತ ಅನಿಯಮಿತ ಧ್ವನಿ ಕರೆಗಳನ್ನು ಪಡೆಯಬಹುದು. ಒಂದು ವರ್ಷದಲ್ಲಿ ನೀವು 4G ಗಾಗಿ 24 GB ಡೇಟಾವನ್ನು ಉಚಿತವಾಗಿ ಪಡೆಯಬಹುದು. ಡೇಟಾ ಖಾಲಿಯಾದ ಬಳಿಕ ನೀವು ಡೇಟಾಗಾಗಿ ಟಾಪ್ ಅಪ್ ಡೇಟಾ ಯೋಜನೆಗಳನ್ನು ರೀಚಾರ್ಜ್ ಮಾಡಬಹುದಾಗಿದೆ.

Leave A Reply

Your email address will not be published.