Menstruation: ಮುಟ್ಟು ಬೇಗ ಆಗಬೇಕಾ?? ಹಾಗಿದ್ರೆ ಈ ಪದಾರ್ಥಗಳ ಸೇವನೆ ಉಪಕಾರಿ!!

Menstruation: ಮಹಿಳೆಯರಲ್ಲಿ ಮುಟ್ಟು (Menstruation)ನೈಸರ್ಗಿಕ ಕ್ರಿಯೆಯಾಗಿದ್ದು, ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಕೆಲವೊಮ್ಮೆ ಯಾವುದಾದರೂ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದಾಗ ಮುಟ್ಟಾದರೆ ಇರಿಸು ಮುರಿಸು ಉಂಟಾಗುತ್ತದೆ.ಇದನ್ನು ತಪ್ಪಿಸಲು ಅವಧಿಗಿಂತ ಮೊದಲು ಮುಟ್ಟಾಗಲು ಈ ಮನೆ ಮದ್ದು ಬಳಸಿ.

 

ಕೆಲವೊಮ್ಮೆ ಮಹಿಳೆಯರು ಮುಟ್ಟಿನ ದಿನ ಬೇಗ ಆಗಬೇಕೆಂದು ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಳ್ಳುತ್ತಾರೆ. ಇದಕ್ಕೆ ವೈದ್ಯರ ಇಲ್ಲವೇ ಮಾತ್ರೆಯ ಮೊರೆ ಹೋಗುವ ಬದಲಿಗೆ ಮನೆ ಮದ್ದು ಬಳಕೆ ಮಾಡಬಹುದು.

* ಮುಟ್ಟು ಬೇಗ ಆಗಬೇಕು ಎಂದು ಬಯಸುವವರು, ಕೊತ್ತಂಬರಿ ಬೀಜಗಳನ್ನು ಬಳಸಬಹುದು. ಅವಧಿಗೆ ಮೊದಲು 1 ಟೀಸ್ಪೂನ್ ಕೊತ್ತಂಬರಿ ಬೀಜವನ್ನು 2 ಕಪ್ ನೀರಿನಲ್ಲಿ ಕುದಿಸಿ ನಂತರ ಅದನ್ನು ಫಿಲ್ಟ‌ರ್ ಮಾಡಿ, ದಿನಕ್ಕೆ ಮೂರು ಬಾರಿ ಕುಡಿಯಬೇಕು.

 

* ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆ, ಕಿತ್ತಳೆ, ಕಿವಿ, ಆಮ್ಲಾ ಮುಂತಾದ ಹಣ್ಣುಗಳನ್ನು ಸೇವಿಸುವುದರಿಂದ ಮುಟ್ಟು ಬೇಗ ಆಗುತ್ತದೆ.

 

* ಮುಟ್ಟು ಬೇಗ ಆಗಬೇಕು ಎಂದು ಬಯಸುವವರು ಕಾಯಿ ಪಪ್ಪಾಯಿ ಸೇವನೆ ಮಾಡಿ.

* ಶುಂಠಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಶುಂಠಿ ಸೇವನೆಯಿಂದ ಮುಟ್ಟಿನ ಅವಧಿ ಬೇಗ ಆಗುತ್ತದೆ. ಬೇಗ ಮುಟ್ಟು ಬಯಸುವವರು ಶುಂಠಿ ಟೀ ಸೇವನೆ ಮಾಡಬೇಕು.

Leave A Reply

Your email address will not be published.