IPL-2024: RCB ಅಭಿಮಾನಿಗಳಿಗೆ ಶಾಕ್- ತಂಡದಿಂದ ಸ್ಟಾರ್ ಪ್ಲೇಯರ್ ಔಟ್ !!

Cricket news IPL-2024 Shock for RCB fans Star player out of team

Share the Article

IPL-2024: ಐಪಿಎಲ್ 2024ರ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಇದಕ್ಕೂ ಆಟಗಾರರ ಟ್ರೇಡಿಂಗ್ ಹಾಗೂ ರೀಟೈನ್ ಮತ್ತು ರಿಲೀಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಈ ಬಾರಿ ಹಲವು ಅಚ್ಚರಿಗಳು ಕಾದಿದೆ. ಈ ನಡುವೆಯೇ RCB ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದ್ದು ಈ ಸ್ಟಾರ್ ಪ್ಲೇಯರ್ ತಂಡದಿಂದ ಔಟ್ ಆಗಿದ್ದಾರೆ.

ಹೌದು, ನಿನ್ನೆ ದಿನ ಕೊಡು, ಕೊಳ್ಳುವಿಕೆಗೆ ಅಂದರೆ ಆಟಗಾರರ ಟ್ರಾನ್ಸ್‌ಪರ್‌ಗೆ ಕಡೆಯ ದಿನವಾಗಿತ್ತು. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು(RCB) ತನ್ನ ಸ್ಟಾರ್ ಆಲ್ರೌಂಡರ್ ಶೆಹಬಾಜ್ ಅಹಮದ್ ಅವರನ್ನು ತಂಡದಿಂದ ಬಿಟ್ಟುಕೊಟ್ಟಿದೆ. ಅಂದರೆ ಸನ್‌ರೈಸರ್ಸ್ ಹೈದರಾಬಾದ್‌ಗೆ ನೀಡಿ ಅಲ್ಲಿಂದ ಮಯಾಂಕ್ ಡಾಗರ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದು RCB ಅಭಿಮಾನಿಗಳಿಗೆ ಕೊಂಚ ನಿರಾಸೆ ಉಂಟುಮಾಡಿದೆ.

ಅಂದಹಾಗೆ ಶೆಹಬಾಜ್ ಅಹಮದ್ ಅತ್ಯದ್ಭುತ ಆಲ್ರೌಂಡ್ ಎಂಬುದು ಎಲ್ಲರಿಗೂ ಗೊತ್ತು. ಅಲ್ಲದೆ IPL ನಲ್ಲಿ(IPL-2024) ಅವರ ಉತ್ತಮ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಆದರೆ ಕಳೆದ ಐಪಿಎಲ್ ಟೂರ್ನಿಯಲ್ಲಿ ಅಭಿಮಾನಿಗಳು ನಿರೀಕ್ಷಿಸಿದಂತೆ ಶೆಹಬಾಜ್ ಅವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಅಚ್ಚರಿ ಎಂಬಂತೆ ಕಳೆದ ಬಾರಿ ಆರ್‌ಸಿಬಿ ಪರ ಶೆಹಬಾಜ್ 10 ಪಂದ್ಯಗಳನ್ನಾಡಿ ಕೇವಲ 42 ರನ್ ಗಳನ್ನಷ್ಟೇ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಕೇವಲ ಒಂದು ವಿಕೆಟ್ ಉರುಳಿದ್ದರು ಅಷ್ಟೆ.

ಇದನ್ನೂ ಓದಿ: Halal Ban: ದೇಶಾದ್ಯಂತ ಹಲಾಲ್ ಉತ್ಪನ್ನಗಳ ನಿಷೇದ ವಿಚಾರ – ಅಮಿತ್ ಶಾ ಮಹತ್ವದ ಹೇಳಿಕೆ !!

Leave A Reply