Halal Ban: ದೇಶಾದ್ಯಂತ ಹಲಾಲ್ ಉತ್ಪನ್ನಗಳ ನಿಷೇಧ ವಿಚಾರ – ಅಮಿತ್ ಶಾ ಮಹತ್ವದ ಹೇಳಿಕೆ !!

National news Amit Shah says no decision on halal ban by central government yet

Halal Ban: ರಾಷ್ಟ್ರದಲ್ಲಿ ಇದೀಗ ಹಲಾಲ್ ವಿಚಾರ ಭಾರೀ ಸದ್ದು ಮಾಡುತ್ತಿದೆ. ಹಲಾಲ್ ಉತ್ಪನ್ನಗಳು ನಿಷೇದ(Halal ban) ಮಾಡಲಾಗುತ್ತದೆ ಎಂಬ ಕೂಗು ಕೇಳಿ ಬರುತ್ತಿದೆ. ಆದರೀಗ ಈ ಕುರಿತು ದೇಶದ ಗೃಹಮಂತ್ರಿಗಳಾದ ಅಮಿತ್ ಶಾ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಹೌದು, ಹಲಾಲ್ ಉತ್ಪನ್ನಗಳ ನಿಷೇದದ ಕಿಡಿ ಹೊತ್ತಿದ್ದು ಉತ್ತರ ಪ್ರದೇಶದಲ್ಲಿ. ಯುಪಿಯಲ್ಲಿ ಹಲಾಲ್‌ ಪ್ರಮಾಣಪತ್ರ ಇರುವ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ (Halal Ban) ಬೆನ್ನಲ್ಲೇ ದೇಶಾದ್ಯಂತ ಹಲಾಲ್‌ ನಿಷೇದ ಮಾಡಲಾಗುವುದು ಎಂದು ಸುದ್ದಿಯೊಂದು ಹರಿದಾಡಿತ್ತು. ಆದರೀಗ ಪ್ರಮಾಣಪತ್ರ ಇರುವ ಉತ್ಪನ್ನಗಳ ನಿಷೇಧದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಹತ್ವದ ಅಪ್‌ಡೇಟ್‌ ನೀಡಿದ್ದು “ದೇಶಾದ್ಯಂತ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ (Halal Certified Products) ನಿಷೇಧದ ಕುರಿತು ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಮಾಹಿತಿ ನೀಡಿದ್ದಾರೆ.

ಅಂದಹಾಗೆ ಹೈದರಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲಾಲ್‌ ಉತ್ಪನ್ನಗಳ ಮಾರಾಟ ನಿಷೇಧಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ತೆದುಕೊಂಡಿಲ್ಲ. ನಮ್ಮ ಮುಂದೆ ಯಾವುದೇ ಈ ರೀತಿಯ ಚಿಂತನೆಗಳಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಊಹಾಪೂಹಗಳಿಗೆ ತೆರೆ ಎಳೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ನಿಷೇದ:
ಉತ್ತರ ಪ್ರದೇಶದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಆದೇಶ ಹೊರಡಿಸಿದ್ದು ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವು ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಸರ್ಕಾರ ಹೇಳಿತ್ತು.

ಇದನ್ನೂ ಓದಿ: Honey trap: ಬೆತ್ತಲೆ ಹುಡುಗಿ ನೋಡಿ ತಾನೂ ಬೆತ್ತಲಾದ – ಲಕ್ಷ ಲಕ್ಷ ಪೀಕಿದ !!

Leave A Reply

Your email address will not be published.