November financial Rules Changes: ಹಣಕಾಸು ನಿಯಮಗಳಲ್ಲಿ ಮಹತ್ವದ ಬದಲಾವಣೆ- ನವೆಂಬರ್’ನಲ್ಲಿ ಈ ಪ್ರಮುಖ ರೂಲ್ಸ್ ಗಳೆಲ್ಲಾ ಚೇಂಜ್ !!

National news these financial rules change from 1 November 2023 complete details is here

November financial Rules Changes: ನವೆಂಬರ್ ತಿಂಗಳು ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗಿವೆ (November financial Rules Changes). ಜನಸಾಮಾನ್ಯರಿಗೆ ಮತ್ತು ಉದ್ಯಮಗಳಿಗೆ ಆರ್ಥಿಕವಾಗಿ ಪರಿಣಾಮ ಬೀರಲಿದ್ದು, ನವೆಂಬರ್ 1ರಿಂದ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿವೆ.

ಅನಿಲ ದರ ಪರಿಷ್ಕರಣೆ:
ಪೆಟ್ರೋಲಿಯಂ ಮಾರ್ಕೆಟಿಂಗ್ ಕಂಪನಿಗಳು ಪ್ರತೀ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್​ಗಳ ಬೆಲೆ ಪರಿಷ್ಕರಿಸುತ್ತವೆ. ಇದೀಗ ನವೆಂಬರ್ 1ರಂದು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 101.50 ರೂನಷ್ಟು ಹೆಚ್ಚಾಗಿದೆ.

ಲ್ಯಾಪ್ಸ್ ಆದ ಎಲ್​ಐಸಿ ಪಾಲಿಸಿಗಳಿಗೆ ಮರುಜೀವ:
ಎಲ್​ಐಸಿ ಪಾಲಿಸಿಯ ಪ್ರೀಮಿಯಮ್ ಅನ್ನು ನಿರ್ದಿಷ್ಟ ಅವಧಿಯವರೆಗೆ ಕಟ್ಟದೇ ಹೋದರೆ ಅವುಗಳು ಲ್ಯಾಪ್ಸ್ ಆಗುತ್ತವೆ. ಇವುಗಳ ರಿನಿವಲ್​ಗೆ ಸರ್ಕಾರ ಅವಕಾಶ ಕೊಟ್ಟಿತ್ತು. ಅಕ್ಟೋಬರ್ 31ರವರೆಗೂ ಇದಕ್ಕೆ ಅವಕಾಶ ಇತ್ತು. ಈಗ ಈ ಡೆಡ್​ಲೈನ್ ಮುಗಿದಿದೆ.

ಷೇರುಪೇಟೆಯಲ್ಲಿ ವಹಿವಾಟು ಶುಲ್ಕ:
ಭಾರತದ ಎರಡು ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ನವೆಂಬರ್ 1ರಿಂದ ಈಕ್ವಿಟಿ ಡಿರೈವೇಟಿಂಗ್ ಸೆಗ್ಮೆಂಟ್​ನಲ್ಲಿ ಟ್ರಾನ್ಸಾಕ್ಷನ್ ಶುಲ್ಕವನ್ನು ಹೆಚ್ಚಿಸಿದೆ. ಅಕ್ಟೋಬರ್ 20ರಂದು ಈ ನಿಟ್ಟಿನಲ್ಲಿ ಬಿಎಸ್​ಇಯಿಂದ ಘೋಷಣೆಯಾಗಿತ್ತು.

ಇ-ಚಲನ್ ಪೋರ್ಟಲ್​ಗೆ ಜಿಎಸ್​ಟಿ ಚಲನ್ ಹಾಕುವುದು:
ಕನಿಷ್ಠ 100 ಕೋಟಿ ರೂಗೂ ಹೆಚ್ಚು ಮೌಲ್ಯದ ಸಂಸ್ಥೆಗಳು ಇ-ಚಲನ್ ಪೋರ್ಟಲ್​ನಲ್ಲಿ ಜಿಎಸ್​ಟಿ ಚಲನ್ ಅಪ್​ಲೋಡ್ ಮಾಡಬೇಕು. ಬಿಲ್ ರಚನೆಯಾಗಿ 30 ದಿನದೊಳಗೆ ಅಪ್​ಲೋಡ್ ಆಗಬೇಕು ಎಂದು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್​ಐಸಿ) ಹೇಳಿದೆ.

ಲ್ಯಾಪ್​ಟಾಪ್ ಆಮದು ನಿರ್ಬಂಧ:
ಎಚ್​ಎಸ್ಎನ್ 8741 ಕೆಟಗರಿ ಅಡಿಯಲ್ಲಿ ಲ್ಯಾಪ್​ಟಾಪ್, ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್ ಇತ್ಯಾದಿ ಏಳು ಉತ್ಪನ್ನಗಳ ಆಮದುಗಳ ಮೇಲೆ ಸರ್ಕಾರ ಆಗಸ್ಟ್ 3ರಂದು ನಿರ್ಬಂಧ ಹೇರಿತ್ತು. ಈಗ ನಿರ್ಬಂಧಿತ ಆಮದುಗಳಿಗೆ ಪರವಾನಿಗೆ ಹೊಂದಿದ್ದರೆ ಈ ಏಳು ಉತ್ಪನ್ನಗಳ ಆಮದು ಮಾಡಲು ಅವಕಾಶ ಕೊಡಲಾಗಿದೆ.

ಇದನ್ನೂ ಓದಿ: ಮಹಿಳೆಯರೇ, ಮುಟ್ಟಿನ ನೋವಿನಿಂದ ಪಾರಾಗಲು ಇಲ್ಲಿದೆ ಸುಲಭವಾದ ಉಪಾಯ !!

Leave A Reply

Your email address will not be published.