Health Tips For Menstrual Days: ಮಹಿಳೆಯರೇ, ಮುಟ್ಟಿನ ನೋವಿನಿಂದ ಪಾರಾಗಲು ಇಲ್ಲಿದೆ ಸುಲಭವಾದ ಉಪಾಯ !!

Lifestyle health news health tips for get rid of stomach ache during menstrual days

Health Tips For Menstrual Days: ಮಹಿಳೆಯರ ಪಾಲಿಗೆ ಋತುಚಕ್ರದ ಸಮಯ ಸವಾಲಿನ ದಿನಗಳಾಗಿರುತ್ತವೆ. ಪ್ರತಿ ತಿಂಗಳ ಮೂರು-ನಾಲ್ಕು ದಿನಗಳು ಆಕೆಯ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆಗಳು ಕಂಡುಬರುವುದರ ಜೊತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಾದ, ಆಸಿಡಿಟಿ, ಡಯರಿಯಗಳು ಕಾಡಿಸಿ, ಈಗಾಗಲೇ ಇರುವ ತೊಂದರೆಗೆ ಮತ್ತಿಷ್ಟು ಸೇರಿಸಿದಂತಾಗುತ್ತದೆ.

ಅದರಲ್ಲೂ ಕೆಲಸದ ಒತ್ತಡದಿಂದ ಮನಸ್ಸು ಮತ್ತು ದೇಹದ ಬಳಲಿಕೆ ಹೆಚ್ಚಾಗಿದ್ದರೆ, ನಿದ್ದೆ ಸಾಕಾಗದಿದ್ದರೆ (health tips), ಆಹಾರ ಕ್ರಮವಾಗಿ ಇರದಿದ್ದರೆ, ಸೋಂಕಿಗೆ ತುತ್ತಾಗಿದ್ದರೆ, ಹಾರ್ಮೋನುಗಳ ಅಸಮತೋಲನ ಹೆಚ್ಚಾದರೆ ಇಂಥ ಸಮಸ್ಯೆಗಳು ಬರಬಹುದು. ಇದಕ್ಕಾಗಿ ಕೆಲವು ಕ್ರಮಗಳನ್ನು (Health Tips For Menstrual Days) ಅಳವಡಿಸುವುದು ಉತ್ತಮ.

ಮುಟ್ಟಿನ ಸಮಯದಲ್ಲಿ ತಿನ್ನುವ ಆಹಾರದಲ್ಲಿ ಕೆಲವು ಬದಲಾವಣೆಗಳು ಅಗತ್ಯ. ಭೂರಿ ಭೋಜನದ ಬದಲು, ಹಗುರವಾದ ಸೌಮ್ಯ ಆಹಾರದ ಸೇವನೆ ಅನುಕೂಲಕರ. ಇಡೀ ಧಾನ್ಯಗಳು, ಹಣ್ಣು-ತರಕಾರಿಗಳು ಮತ್ತು ಲೀನ್‌-ಪ್ರೊಟೀನ್‌ ಇದ್ದರೆ ಅನುಕೂಲ. ಹಣ್ಣುಗಳಲ್ಲಿ ಹುಳಿ ಹಣ್ಣುಗಳನ್ನು (ಸಿಟ್ರಸ್)‌ ದೂರ ಇಡಿ. ಒಮ್ಮೆಲೇ ಹೊಟ್ಟೆ ತುಂಬಿಸಿಕೊಳ್ಳುವ ಬದಲು, ಸ್ವಲ್ಪವೇ ಆಹಾರವನ್ನು ಆಗಾಗ ತೆಗೆದುಕೊಳ್ಳುವುದು ನೆರವಾಗಬಹುದು. ಇದರಿಂದ ಜೀರ್ಣಾಂಗಗಳ ಮೇಲೆ ಒತ್ತಡ ಹೆಚ್ಚುವುದನ್ನು ತಪ್ಪಿಸಬಹುದು.

ಇನ್ನು ಸುಸ್ತು, ಆಯಾಸ ಹೆಚ್ಚಿದ್ದಾಗ ಆಹಾರ ಸೇವಿಸಿ ಕೂಡಲೇ ಮಲಗಬೇಡಿ. ಊಟದ ನಂತರ ಕೆಲ ನಿಮಿಷಗಳ ಕಾಲ ನಡೆಯುವುದು ಒಳ್ಳೆಯದು. ಊಟ ಮಾಡುವಾಗ ಚೆನ್ನಾಗಿ ಅಗಿದು ತಿನ್ನುವುದು ಮತ್ತು ಊಟದ ನಡುವೆ ಅನಗತ್ಯವಾಗಿ ನೀರು ಕುಡಿಯದೆ ಇರುವುದು ಸಹ ಜೀರ್ಣಕ್ರಿಯೆಗೆ ಅನುಕೂಲಕರ.

ಊಟದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಸೂಕ್ತ. ಆದರೆ ಇಡೀ ದಿನದಲ್ಲಿ ಮೂರು ಲೀ. ನೀರು ದೇಹಕ್ಕೆ ಅಗತ್ಯ. ಇದರಿಂದ ಎದೆಯುರಿ, ಆಸಿಡಿಟಿಯನ್ನು ಕಡಿಮೆ ಮಾಡಬಹುದು. ಜೊತೆಗೆ ಈ ದಿನಗಳಲ್ಲಿ ನಿರ್ಜಲೀಕರಣಕ್ಕೆ ಒಳಗಾಗದಂತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ.

ಮುಖ್ಯವಾಗಿ ಒತ್ತಡ ಹೆಚ್ಚುತ್ತಿದ್ದಂತೆ ದೇಹದಲ್ಲಿ ಸ್ಟ್ರೆಸ್‌ ಹಾರ್ಮೋನುಗಳ ಮಟ್ಟವೂ ಹೆಚ್ಚುತ್ತದೆ. ಜೀರ್ಣಾಂಗಗಳ ತೊಂದರೆ ಮತ್ತೂ ಹೆಚ್ಚಾಗುತ್ತದೆ. ಹಾಗಾಗಿ ಧ್ಯಾನ, ಪ್ರಾಣಾಯಾಮ, ಸಂಗೀತ ಕೇಳುವುದು, ಯೋಗ ಮುಂತಾದ ಯಾವುದೇ ಕ್ರಮದ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.

ಇನ್ನು ಅತಿಯಾದ ಖಾರದ, ಮಸಾಲೆಭರಿತ, ಹುಳಿ ಹೆಚ್ಚಿರುವ, ಕರಿದ ಮತ್ತು ಕೊಬ್ಬಿನ ತಿನಿಸುಗಳು ಇರುವ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಆಹಾರ ಸೌಮ್ಯವಾಗಿರಲಿ, ತಾಜಾ ಇರಲಿ. ಕೆಫೇನ್‌ ಮತ್ತು ಆಲ್ಕೋಹಾಲ್‌ ದೂರ ಮಾಡುವುದೇ ಒಳ್ಳೆಯದು. ಬಿಗಿಯಾದ ಉಡುಪುಗಳು ಸಹ ತೊಂದರೆಯನ್ನು ಹೆಚ್ಚಿಸುತ್ತವೆ. ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ.

ಇದನ್ನೂ ಓದಿ: ಐಫೋನ್ ಕೊಳ್ಳಲು ಲಕ್ಷ ಲಕ್ಷ ಬೇಕಿಲ್ಲ- ಜಸ್ಟ್ 20,000 ಇದ್ರೆ ಸಾಕು ಈ ಆಫರ್ ಮೂಲಕ ಆರಾಮಾಗಿ ಖರೀದಿಸ್ಬೋದು !!

Leave A Reply

Your email address will not be published.