Inverter LED Bulb: ಕರೆಂಟ್‌ ಹೋದರೆ ಚಿಂತಿಸಬೇಡಿ, ಈ ಬಲ್ಬ್‌ ಅಳವಡಿಸಿ, ಮನೆ ಬೆಳಗಿಸಿ! ಇದಕ್ಕಿದೆ ಭಾರೀ ಬೇಡಿಕೆ!!!

Latest news technology news inverter bulb use after power failure

Inveter LED Bulb: ಎಲ್‌ಇಡಿ ಬಲ್ಬ್‌ಗಳು ಎಲ್ಲಾ ಕಡೆ ಸಾಮಾನ್ಯವಾಗಿ ದೊರಕುತ್ತದೆ. ಒಮ್ಮೆಲೇ ಈ ಬಲ್ಬ್‌ಗಳು ವಿದ್ಯುತ್‌ ಇಲ್ಲ ಎಂದಾಗ ನಮ್ಮ ಉಪಯೋಗಕ್ಕೆ ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಈಗೊಂದು ವಿಶೇಷ ಬಲ್ಬ್‌ ಬಂದಿದೆ. ಈ ಬಲ್ಬ್‌ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಹಾಗೂ ಜನರು ಈ ಬಲ್ಬ್‌ ಖರೀದಿಸಲು ಮುಗಿ ಬೀಳುತ್ತಾರೆ.

ಈ ಬಲ್ಬ್‌ ಒಂದು ವೇಳೆ ವಿದ್ಯುತ್‌ ಇಲ್ಲದಿದ್ದರೂ ಉರಿಯುತ್ತಲೇ ಇರುತ್ತದೆ. ಈ ಬಲ್ಬ್‌ನ ಹೆಸರು Inverter rechargebale Emergency led Bulb (Inverter LED Bulb). ಇದನ್ನು ನೀವು amazon ನಲ್ಲಿ ಖರೀದಿ ಮಾಡಬಹುದು. ಇದರ ಬೆಲೆ ಸರಿ ಸುಮಾರು 500-600 ರೂ. ಸಾಮಾನ್ಯ ಎಲ್‌ಇಡಿ ಬಲ್ಬ್‌ ಗೆ ಹೋಲಿಸಿದರೆ, ಇದರ ಬೆಲೆ ಹೆಚ್ಚಿದೆ ಎಂದು ಅನಿಸಬಹುದು. ಆದರೆ ಸಾಮಾನ್ಯ ಎಲ್‌ಇಡಿ ಬಲ್ಬ್‌ಗೆ ಹೋಲಿಸಿದರೆ ಇದು ಬಹಳ ಉತ್ತಮ. ವಿದ್ಯುತ್‌ ಹೋದ ಹಲವು ಗಂಟೆಗಳವರೆಗೆ ಇದು ಬೆಳಕು ನೀಡುತ್ತದೆ.

ಈ ಎಲ್‌ಇಡಿ ಬಲ್ಬ್‌ಗಳು ಶಕ್ತಿಯುತವಾಗಿದ್ದು, ವಿದ್ಯುತ್ ವೈಫಲ್ಯದ ನಂತರ ಸುಮಾರು 4 ಗಂಟೆಗಳ ಕಾಲಗಳವರೆಗೆ ಈ ಬಲ್ಬ್ ಉರಿಯುತ್ತಲೇ ಇರುತ್ತದೆ. ತುರ್ತು ಸಂದರ್ಭಗಳಲ್ಲಿ ಈ ಬಲ್ಬ್ ಗಳನ್ನೂ ಬಳಸಬಹುದು. ವಿಶೇಷವೆಂದರೆ ಅವುಗಳನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅಗತ್ಯವಿಲ್ಲ ಮತ್ತು ಅವುಗಳು ಅದರ ಪಾಡಿಗೆ ಚಾರ್ಜ್ ಮಾಡುತ್ತವೆ.

ವಿದ್ಯುತ್‌ ಹೋದ ನಂತರ ಈ ಬಲ್ಬ್‌ ಸುಮಾರು ನಾಲ್ಕು ಗಂಟೆಗಳವರೆಗೆ ಈ ಬಲ್ಬ್‌ ಉರಿಯುತ್ತಿರುತ್ತದೆ. ಹಾಗೆನೇ ಈ ಬಲ್ಬ್‌ ತುರ್ತು ಸಂದರ್ಭದಲ್ಲಿ ಕೂಡಾ ಉಪಯೋಗಿಸಬಹುದು. ಇದಕ್ಕೆ ಚಾರ್ಜ್‌ ಮಾಡುವ ಅಗತ್ಯವಿಲ್ಲ. ಅದರಷ್ಟಕ್ಕೇ ಅದು ಚಾರ್ಜ್‌ ಆಗುತ್ತದೆ.

ಇದು ಲಿಥಿಯಂ-ಐಯಾನ್‌ ಬ್ಯಾಟರಿಯನ್ನು ಹೊಂದಿರುವ ಇದು ಚಾರ್ಜ್‌ ಮಾಡಲು ಎಂಟರಿಂದ ಹತ್ತು ಗಂಟೆ ತೆಗೆದುಕೊಳ್ಳುತ್ತದೆ. 12W ಇನ್ವರ್ಟರ್‌ ತುರ್ತು LED ಆನ್‌ ಮಾಡಿದಾಗ ಅದರಷ್ಟಕ್ಕೇ ಚಾರ್ಜ್‌ ಆಗುತ್ತದೆ. ಈ ಬಲ್ಬ್‌ ಮೇಲೆ ಆರು ತಿಂಗಳ ವಾರಂಟಿ ದೊರಕುತ್ತದೆ.

 

ಇದನ್ನು ಓದಿ: Electric Bike: ಬೈಕ್ ಕೊಳ್ಳುವವರಿಗೆ ಭರ್ಜರಿ ಸುದ್ದಿ- ಈ ಬೈಕ್ ಮೇಲೆ ಬರೋಬ್ಬರಿ 42,500 ಸಾವಿರ ಡಿಸ್ಕೌಂಟ್ ಘೋಷಿಸಿದ ಕಂಪೆನಿ

1 Comment
  1. najlepszy sklep says

    Wow, awesome weblog layout! How lengthy have you been running
    a blog for? you make blogging look easy. The entire glance of your
    website is great, let alone the content material! You can see similar here sklep online

Leave A Reply

Your email address will not be published.