Electric Bike: ಬೈಕ್ ಕೊಳ್ಳುವವರಿಗೆ ಭರ್ಜರಿ ಸುದ್ದಿ- ಈ ಬೈಕ್ ಮೇಲೆ ಬರೋಬ್ಬರಿ 42,500 ಸಾವಿರ ಡಿಸ್ಕೌಂಟ್ ಘೋಷಿಸಿದ ಕಂಪೆನಿ

Tork kratos bumper news for this electric bike buyers you can get this for rs 42,500

Electric Bike: ವಾಹನ ಪ್ರಿಯರೇ ಗಮನಿಸಿ, ನೀವೇನಾದರೂ ಬೈಕ್ (Bike)ಖರೀದಿ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರೆ, ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ನೀವು ಹೊಸ ಎಲೆಕ್ಟಿಕ್ ಬೈಕ್ (Electric Bike)ಖರೀದಿ ಮಾಡಲು ಯೋಜನೆ ಹಾಕಿಕೊಂಡಿದ್ದರೆ ಈ ಸುದ್ದಿ ತಿಳಿದುಕೊಳ್ಳಿ!!

ಎಲೆಕ್ನಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿರುವ ಟಾರ್ಕ್ ಮೋಟಾರ್ಸ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಕ್ರೆಟಾಸ್ ಆರ್ ಅನ್ನು ಟಾರ್ಕ್ ಕ್ರೆಟಾಸ್ ಆರ್ ಎಲೆಕ್ನಿಕ್ ಬೈಕ್ ವಿವಿಧ ಬಣ್ಣಗಳಲ್ಲಿ ದೊರೆಯಲಿದೆ. ಈ ಎಲೆಕ್ನಿಕ್ ಬೈಕಿನಲ್ಲಿ ಇಕೋ, ಸಿಟಿ, ಸ್ಪೋರ್ಟ್ಸ್ ಮತ್ತು ರಿವರ್ಸ್ ಮೋಡ್ ಜೋಡಿಸಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಕೂಡ ಇದೆ.ಕಂಪನಿಯು 4 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಈ ಎಲೆಕ್ಟಿಕ್ ಬೈಕಿನ ಬೆಲೆ ರೂ.2,09,999ಗಳಾಗಿದೆ. ಇದರ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 105 ಕಿ.ಮೀ.ಗಳಾಗಿದೆ.ಕಂಪನಿಯ ವೆಬ್ ಸೈಟ್ ನಲ್ಲಿ ನೀವು ಈ ಎಲೆಕ್ನಿಕ್ ಬೈಕ್ ಅನ್ನು ಬುಕ್ ಮಾಡಲು ಅನುವು ಮಾಡಿಕೊಡಲಾಗಿದೆ. ಈ ಬೈಕ್ ಮೂರು ವರ್ಷಗಳವರೆಗೆ ವಾರಂಟಿಯನ್ನು ಹೊಂದಿದೆ.

ಕೇಂದ್ರ ಸರ್ಕಾರ(Central Government)ನೀಡುವ ಫೇಮ್ 2 ಸಬ್ಸಿಡಿ ಮೂಲಕ 22,500 ರೂ.ಗಳವರೆಗೆ ರಿಯಾಯಿತಿ ಪಡೆಯಲು ಅವಕಾಶವಿದೆ. ಇದರ ಜೊತೆಗೆ, ಕಂಪನಿಯು ಹೆಚ್ಚುವರಿಯಾಗಿ ರೂ. 20,000 ರೂ.ಗಳವರೆಗೆ ರಿಯಾಯಿತಿಯನ್ನು ಕೂಡ ನೀಡಲಿದೆ. ಹೀಗಾಗಿ, ನಿಮಗೆ ಬರೋಬ್ಬರಿ ರೂ. 42,500ವರೆಗೆ ರಿಯಾಯಿತಿ ಸಿಗುವುದು ಗ್ಯಾರಂಟಿ. ನೀವು ಈ ಬೈಕ್ ಅನ್ನು 1,67,499 ರೂ. ಎಕ್ಸ್ ಶೋರೂಂ ಬೆಲೆಯಾಗಿದ್ದು ಖರೀದಿ ಮಾಡಬಹುದಾಗಿದೆ. ಕೈಟಕುವ ದರದಲ್ಲಿ ನಿಮಗೆ ಈ ಬೈಕ್ ಅನ್ನು ಖರೀದಿ ಮಾಡಿದೆ.

ಇದು ಐಪಿ 67 ರೇಟಿಂಗ್ ಅನ್ನು ಒಳಗೊಂಡಿದ್ದು, ಇನ್-ಅಪ್ಲಿಕೇಶನ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ವೆಹಿಕಲ್ ಲೊಕೇಟರ್, ಆಂಟಿ-ಫೆಸ್ಟ್, ಸಿಸ್ಟಮ್, ಜಿಯೋ-ಫೆನ್ಸಿಂಗ್, ಪಾಯಿಂಟ್ ಲೊಕೇಶನ್, ಒಟಿಎ ನವೀಕರಣಗಳು, ರೈಡ್ ಅನಾಲಿಟಿಕ್ಸ್, ಗೈಡ್ ಮಿ ಹೋಮ್ ಲೈಟ್ಸ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿ.ಮೀ ಚಾಲನೆ ಮಾಡಬಹುದು.ಇದು 9 ಕಿಲೋವ್ಯಾಟ್ ಆಕ್ಸಲ್ ಪ್ಲಕ್ಸ್ ಮೋಟರ್ ಅನ್ನು ಹೊಂದಿದೆ.ಹೆಚ್ಚಿನ ಶ್ರೇಣಿಯ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಶ್ರೇಣಿಗಳನ್ನು ಬಯಸುವವರು ಈ ಎಲೆಕ್ನಿಕ್ ಬೈಕ್ ಅನ್ನು ಖರೀದಿ ಮಾಡಬಹುದು.

 

ಇದನ್ನು ಓದಿ: ಸಿಗ್ನಲ್ ನಲ್ಲಿ ಎಷ್ಟು ಸೆಕುಂಡ್ ಇದ್ರೆ ಇಂಜಿನ್ ಆಫ್ ಮಾಡಬೇಕು ?- ಬಂತು ನೋಡಿ ಹೊಸ ರೂಲ್ಸ್ ! 10 % ಕಾಸು ಉಳಿಸೋ ಪ್ಲಾನ್ !

Leave A Reply

Your email address will not be published.