Different Story: ಹೆಂಡತಿಯನ್ನು ಮಾಜಿ ಲವರ್ ಜೊತೆ ಮದುವೆ ಮಾಡಿಸಿದ ಗಂಡ !! ಮುಂದೇನಾಯ್ತು ?

Share the Article

Love Story: ಮದುವೆಯ (Marriage)ಬಳಿಕ ಪತ್ನಿಗೆ(Wife)ಮತ್ತೊಬ್ಬನ ಜೊತೆಗೆ ಸಂಬಂಧವಿದೆ(Relationship)ಎಂಬ ವಿಚಾರ ಪತಿಗೆ ತಿಳಿದರೆ ಅಲ್ಲಿ ಗಲಾಟೆ, ಮನಸ್ತಾಪ, ಕೊಲೆ ಎಲ್ಲ ನಡೆಯುವುದು ಮಾಮೂಲಿ.ಆದರೆ, ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಪತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ವಿವಾಹ ಮಾಡಿಸಿಕೊಟ್ಟ ಅಪರೂಪದ ಘಟನೆ ವರದಿಯಾಗಿದೆ.

ಒಂದು ವರ್ಷದ ಹಿಂದೆ ಮಹಿಳೆಗೆ ವಿವಾಹವಾಗಿದ್ದು, ಆದರೆ ಮಹಿಳೆ ಬಿಹಾರ ಮೂಲದ ಆಕಾಶ್‌ ಶಾ ಎಂಬಾತನನ್ನು ಪ್ರೀತಿಸುತ್ತಿದ್ದಳು.ಮಹಿಳೆಗೆ ವಿವಾಹದ ನಂತರ ಕೂಡ ಪ್ರಿಯಕರ ಆಕಾಶ್‌ ನೊಂದಿಗೆ ಸಂಪರ್ಕದಲ್ಲಿದ್ದಳು. (ಸೆ.22 ರಂದು) ಅಂದರೆ, ಶುಕ್ರವಾರ ರಾತ್ರಿ ಆಕಾಶ್‌ ಬಿಹಾರದ ಗೋಪಾಲಗಂಜ್ ನಿಂದ ಉತ್ತರ ಪ್ರದೇಶದಲ್ಲಿರುವ ಮಹಿಳೆಯ ಪತಿಯ ಮನೆಗೆ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದಾನೆ. ಹೀಗೆ, ಭೇಟಿಯಾಗಿದ್ದನ್ನು ಸ್ಥಳೀಯರು ನೋಡಿ ಆಕಾಶ್‌ ನನ್ನು ಅಲ್ಲೇ ಥಳಿಸಿದ್ದಾರೆ.

ಈ ವಿಚಾರ ಪತಿಗೆ ತಿಳಿದ ಸಂದರ್ಭ, ಪತ್ನಿ ಪ್ರಿಯಕರನೊಂದಿಗೆ ಹೋಗಲು ಬಿಡುವಂತೆ ತನ್ನ ಪತಿಗೆ ಮನವಿ ಮಾಡಿದ್ದಾಳೆ. ಈ ಸಂದರ್ಭ, ಮಹಿಳೆಯೊಂದಿಗೆ ತಾನು ಎರಡು ವರ್ಷದಿಂದ ಸಂಬಂಧದಲ್ಲಿದ್ದೇನೆ. ಆಕೆಯ ಮದುವೆಯ ಬಳಿಕವೂ ಆಕೆಯನ್ನು ನನಗೆ ಮರೆಯಲಾಗುತ್ತಿಲ್ಲ. ಹೀಗಾಗಿ, ನಾನು ಭೇಟಿಗೆಂದು ಬಂದಿರುವ ಕುರಿತು ಆಕಾಶ್‌ ಹೇಳಿಕೊಂಡಿದ್ದಾನೆ. ಇಬ್ಬರ ಮಾತನ್ನು ಕೇಳಿ ಪತಿ ಏನು ಮಾಡಿದ ಗೊತ್ತಾ? ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡು ಪತಿ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಮಾಡಿಸಿದ್ದು ಮಾತ್ರವಲ್ಲದೇ, ಪ್ರೇಮಿ ಬಂದಿದ್ದ ಮೋಟಾರ್ ಸೈಕಲ್ ನಲ್ಲಿಯೇ ಕಳುಹಿಸಿದ್ದಾನೆ.

Leave A Reply