

cesarean surgery: ವೈದ್ಯರನ್ನು ನಂಬಿ ರೋಗಿಗಳು ತಮ್ಮ ಸಮಸ್ಯೆ ನಿವಾರಿಸಿಕೊಳ್ಳಲು ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಅಂತಹ ವೈದ್ಯರೇ ಎಡವಟ್ಟು ಮಾಡಿದರೆ ರೋಗಿಗಳು ಜೀವವನ್ನೆ ಕಳೆದುಕೊಳ್ಳಬೇಕಾಗಿರುತ್ತದೆ. ಅಥವಾ ಜೀವನ ಪೂರ್ತಿ ನರಳಾಡ ಬೇಕಾಗಿರುತ್ತದೆ. ಹಾಗೆಯೇ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಗೆ ಆಪರೇಷನ್ ಮಾಡಿದ ವೈದ್ಯರು ಆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ತಟ್ಟೆಯಾಕಾರದ ತಟ್ಟೆ ಇಟ್ಟು ಹೊಲಿಗೆ ಹಾಕಿದ ಯಡವಟ್ಟು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ವೈದ್ಯರು ಮಹಿಳೆಯೊಬ್ಬರಿಗೆ ಸಿಸೇರಿಯನ್ ಮಾಡಿ (cesarean surgery) ಮಗುವನ್ನು ಹೊರತೆಗೆದಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮುಗಿಯುವ ಹೊತ್ತಿಗೆ ಹೊಟ್ಟೆಯಲ್ಲಿ ತಟ್ಟೆ ಇಟ್ಟು ಹೊಲಿಗೆ ಹಾಕಿಬಿಟ್ಟಿದ್ದಾರೆ . ಈ ವಿಚಿತ್ರ ಘಟನೆ ನ್ಯೂಜಿಲೆಂಡ್ (New Zealand) ನಲ್ಲಿ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ, 20 ವರ್ಷದ ಮಹಿಳೆ ಹೆರಿಗೆ ಮಾಡಿಸಿಕೊಳ್ಳಲು ಆಕ್ಲೆಂಡ್ ಸಿಟಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿನ ವೈದ್ಯರು ಸಿಸೇರಿಯನ್ ಮಾಡಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದರು. ಆದರೆ, ಶಸ್ತ್ರಚಿಕಿತ್ಸೆ ಕಾರ್ಯಾಚರಣೆಯ ಸಮಯದಲ್ಲಿ, 17 ಸೆಂ (6 ಇಂಚು) ಅಲೆಕ್ಸಿಸ್ ರಿಟ್ರಾಕ್ಟರ್ (ಶಂಕುವಿನಾಕಾರದ ಸಾಧನ) ಅನ್ನು ಸೇರಿಸಿ, ಹೊಟ್ಟೆಗೆ ಹೊಲಿಗೆ ಹಾಕಿ ಬಳಿಕ ಮಹಿಳೆಯನ್ನು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.
ಆದರೆ ಆ ನಂತರ ಮಹಿಳೆ ಆಗಾಗ್ಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಮಹಿಳೆ ಸುಮಾರು 18 ತಿಂಗಳು ದೀರ್ಘಕಾಲದ ಹೊಟ್ಟೆ ನೋವಿನಿಂದ ಬಳಲಿದ್ದು, ಕೊನೆಗೂ ವೈದ್ಯರ ಬಳಿಗೆ ವಾಪಸಾಗಿದ್ದಾರೆ.
ವೈದ್ಯರು ಮಹಿಳೆಗೆ ಕ್ಷ ಕಿರಣ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಿದರು. ಹಲವು ಬಗೆಯ ಔಷಧಗಳನ್ನೂ ನೀಡಲಾಯಿತು. ಆದರೆ ಯಾವುದೂ ಫಲ ನೀಡಲಿಲ್ಲ. ಕೊನೆಗೂ ಸಿಟಿ ಸ್ಕ್ಯಾನ್ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ.
ಮಹಿಳೆ 18 ತಿಂಗಳಿನಿಂದ ಹೊಟ್ಟೆಯಲ್ಲಿ AWR ಎಂಬ ಹಿಂತೆಗೆದುಕೊಳ್ಳುವ ಸೂಜಿ ಸಾಧನವನ್ನು ಹೊಟ್ಟೆಯಲ್ಲಿ ಹೊತ್ತಿದ್ದಳು ಎಂದು ತಿಳಿದು,
ಕೂಡಲೇ ಮತ್ತೆ ಶಸ್ತ್ರಚಿಕಿತ್ಸೆ ಕಾರ್ಯಾಚರಣೆ ನಡೆಸಿ ಮಹಿಳೆಯ ಹೊಟ್ಟೆಯಿಂದ ಸಾಧನವನ್ನು ಹೊರತೆಗೆಯಲಾಯಿತು.
ಮಾಹಿತಿ ಪ್ರಕಾರ, ಸಿಸೇರಿಯನ್ ಸಮಯದಲ್ಲಿ ವೈದ್ಯರು ಬಳಸುವ ಸಾಧನಗಳಲ್ಲಿ ಒಂದಾದ ಅಲೆಕ್ಸಿಸ್ ರಿಟ್ರಾಕ್ಟರ್ ಆ ಮಹಿಳೆಯ ಹೊಟ್ಟೆಯಲ್ಲಿ ಭದ್ರವಾಗಿ ಕುಳಿತಿತ್ತು. ಆದು ನೋಡಲು ಊಟದ ತಟ್ಟೆಯ ಗಾತ್ರವಿರುತ್ತದೆ. ಒಟ್ಟಿನಲ್ಲಿ ವೈದ್ಯರು ಆಪರೇಷನ್ ಮಾಡುವಾಗ ಸಣ್ಣ ಪುಟ್ಟ ತಪ್ಪು ಮಾಡುತ್ತಾರೆ. ಆದರೆ ದೊಡ್ಡ ಗಾತ್ರದ ತಟ್ಟೆ ಮರೆಯುವಷ್ಟು ನಿಷ್ಕಾಳಜಿ ವಹಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ಆಡಳಿತ ವರ್ಗ ಕಿಡಿ ಕಾರಿದೆ.
ಇದನ್ನೂ ಓದಿ: ಕರಾವಳಿಗರೇ ನಿಮಗೊಂದು ಗುಡ್ ನ್ಯೂಸ್- ಇನ್ಮುಂದೆ ಇಲ್ಲಿಗೆಲ್ಲಾ ನೀವು ರೈಲಲ್ಲೇ ಓಡಾಡಬಹುದು – ಇಲ್ಲಿದೆ ನೋಡಿ ಡೀಟೇಲ್ಸ್ !!













