Finger Watch: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಬೆರಳುಗಳಿಗೆ ತೊಡುವ ಗಡಿಯಾರ ! ಏನಿದರ ವಿಶೇಷತೆ.. ಇದು ಸಿಗೋದಾದ್ರೂ ಎಲ್ಲಿ?

Technology news japan company manufactures finger watches

Share the Article

Finger Watch: ಇಂದು ಮಾರುಕಟ್ಟೆಯಲ್ಲಿ ಹೊಸ ಹೊಸ ವೈಶಿಷ್ಟ್ಯದ ಸ್ಮಾರ್ಟ್ ವಾಚ್(Smart Watch) ಲಗ್ಗೆ ಇಟ್ಟಿದ್ದು, ಹೀಗಾಗಿ, ಎಲ್ಲಿಲ್ಲದ ಬೇಡಿಕೆಯನ್ನೂ ಸೃಷ್ಟಿ ಮಾಡಿಕೊಂಡಿದೆ. ಚಿಕ್ಕವರಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್ ವಾಚ್ ಕೊಂಡುಕೊಳ್ಳುವ ಕ್ರೇಜ್ ಸಾಮಾನ್ಯವಾಗಿ ಬಿಟ್ಟಿದೆ. ಕಾಲಕ್ಕೆ ತಕ್ಕಂತೆ ಜೀವನಶೈಲಿಗೆ ತಕ್ಕಂತೆ ಟ್ರೆಂಡ್ ಬದಲಾಗುವುದು ಸಾಮಾನ್ಯ!! ಈ ನಡುವೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ವೈಶಿಷ್ಟ್ಯದ ವಾಚ್ಗಳು!!.

ಕೈಗಡಿಯಾರದ ಹೆಸರನ್ನೇ ಬದಲಾಯಿಸುವ ರೀತಿಯಲ್ಲಿ ಹೊಸ ವಾಚ್ಗಳು ಬರುತ್ತಿವೆ! ನಿಮಗೆ ಕೇಳುವಾಗ ಅಚ್ಚರಿ ಎನಿಸಬಹುದು.ಬೆರಳಿಗೆ ತೊಡುವ ವಾಚ್ಗಳು(Finger Watch)ಬಿಡುಗಡೆಯಾಗಿದೆ. ಅರೇ,ಇದೆಲ್ಲಿ ? ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!

ದಿನಕ್ಕೊಂದು ಹೊಸ ಬಗೆಯ ಗ್ಯಾಜೆಟ್(Gadget) ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುತ್ತದೆ. ಇದೀಗ, ಜಪಾನಿನ ವಾಚ್ ಕಂಪನಿ (Japan Watch Company)ಈ ಫಿಂಗರ್ ವಾಚ್ಗಳನ್ನು ಬಿಡುಗಡೆ ಮಾಡಿದ್ದು,ಜಪಾನಿನ ಕಂಪನಿ ಕ್ಯಾಸಿಯೊ ಇತ್ತೀಚೆಗೆ ಬೆರಳು ಉಂಗುರಗಳನ್ನು ಸಿದ್ದ ಪಡಿಸಲು ಸ್ಟಾನ್ಲಿ ಸ್ಟ್ಯಾಂಡ್ ಸ್ಟೋನ್ಸ್ ಜೊತೆ ಕೈಜೋಡಿಸಿದೆಯಂತೆ.ಇದರ ವಿಶೇಷತೆ ಬಗ್ಗೆ ಗಮನ ಹರಿಸಿದರೆ, ಸಮಯವನ್ನು ತೋರಿಸುವ ಜೊತೆಗೆ ಕ್ಯಾಲ್ಕುಲೇಟರ್, ಡಿಜಿಟಲ್ ಡಿಸ್ಪ್ಲೇ ಅಂತಹ ವೈಶಿಷ್ಟ್ಯಗಳನ್ನು ಕೂಡ ಒಳಗೊಂಡಿವೆ.ಮಾಮೂಲಿ ಗಡಿಯಾರವನ್ನು ಹೋಲುವ ಇವುಗಳನ್ನು ಬೆರಳುಗಳಿಗೆ ಧರಿಸಬಹುದಾಗಿದ್ದು, ಈ ಗಡಿಯಾರಗಳನ್ನು ವಿವಿಧ ಮಾದರಿಗಳಲ್ಲಿ ತಯಾರಿಸಲಾಗುತ್ತಿದೆ.

ಇದನ್ನೂ ಓದಿ: Gruha Lakshmi Yojana: ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಡೆಡ್ ಲೈನ್ ಫಿಕ್ಸ್ ?! ಇಲ್ಲಿದೆ ಈ ಕುರಿತು ಬಿಗ್ ಅಪ್ಡೇಟ್!

Leave A Reply