Home remedies for lice: ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆಯೇ? ಪೋಷಕರಿಗೊಂದು ಬೆಸ್ಟ್‌ ಸೊಲ್ಯೂಶನ್‌ ಇಲ್ಲಿ ನೀಡಲಾಗಿದೆ!!

Lifestyle health tips home remedies for lice in kids hair in kannada

Home remedies for lice: ತಲೆಯಲ್ಲಿ ಹೇನುಗಳು ತುಂಬಿಕೊಂಡಾಗ ಆಗಾಗ ಕಚ್ಚುತ್ತಾ ಇರುತ್ತವೆ ಮತ್ತು ಇದರಿಂದ ವಿಪರೀತ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಇವುಗಳಿಂದ ಹೇಗಾದರೂ ಮಾಡಿ ಮುಕ್ತಿ ಸಿಕ್ಕರೆ ಸಾಕು ಎನಿಸುತ್ತದೆ. ಅದಲ್ಲದೆ ಚಿಕ್ಕಮಕ್ಕಳ ತಲೆಯಲ್ಲಿ ಹೇನುಗಳು ಹೆಚ್ಚಾಗಿ ಕಂಡು ಬರುವುದರಿಂದ ಅವರಿಗೆ ಕಬ್ಬಿಣದಂಶದ ಕೊರತೆ ಉಂಟಾಗಿ ಅನಿಮಿಯ ಸಮಸ್ಯೆ ಎದುರಾಗುತ್ತದೆ.

ಹೇನು ನೋಡಲು ತುಂಬಾ ಚಿಕ್ಕದಾಗಿದ್ದು, ತಲೆಯಿಂದ ರಕ್ತವನ್ನು ಹೀರುತ್ತವೆ ಮತ್ತು ಮೊಟ್ಟೆಗಳನ್ನು ಸಹ ಇಡುತ್ತದೆ. ಇದು ಕೂದಲಿನ ಬೇರುಗಳಿಗೆ ಬಿಗಿಯಾಗಿ ಅಂಟಿಕೊಳ್ಳುತ್ತದೆ ಮತ್ತು ತೆಗೆದುಹಾಕಲು ಕಷ್ಟ. ಸದ್ಯ ಈ ಮಹಾಮಾರಿ ಹೇನಿನ ಕಾಟದಿಂದ ತಪ್ಪಿಸಿಕೊಳ್ಳಲು ಕೆಲ ಮನೆ ಮದ್ದನ್ನು (Home remedies for lice) ಬಳಸಬೇಕು. ಈ ಮೂಲಕ ನಿಮ್ಮ ತಲೆಯಲ್ಲಿರುವ ಹೇನು ಸಮಸ್ಯೆ ನಿವಾರಣೆ ಆಗಲಿದೆ.

ಮೆಂತ್ಯ ಪೇಸ್ಟ್ :
ಕೊಬ್ಬರಿ ಎಣ್ಣೆಯ ಜೊತೆಗೆ ಮೆಂತ್ಯೆ ಕಾಳುಗಳ ಪೇಸ್ಟ್ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಸುಮಾರು ನಾಲ್ಕು ಗಂಟೆ ಹಾಗೆ ಬಿಟ್ಟು ನಂತರ ತಲೆಸ್ನಾನ ಮಾಡುವುದರಿಂದ ಹೇನು ಸಮಸ್ಯೆ ನಿವಾರಣೆ ಆಗುತ್ತವೆ.

ನೀಲಗಿರಿ ಎಣ್ಣೆ:
ನೀಲಗಿರಿ ಎಂಬ ಈ ಎಣ್ಣೆಯು ಹೇನುಗಳನ್ನು ಮತ್ತು ಅದರ ಮೊಟ್ಟೆಗಳನ್ನು ಕೊಲ್ಲುತ್ತದೆ. ಇದರಿಂದ ತುರಿಕೆ ಸಮಸ್ಯೆಯೂ ನಿವಾರಣೆಯಾಗುತ್ತದೆ. ಇದಕ್ಕಾಗಿ ನೀಲಗಿರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಮೂರು ಗಂಟೆಗಳ ನಂತರ ತಲೆ ಸ್ನಾನ ಮಾಡಬೇಕು

ಬೆಳ್ಳುಳ್ಳಿ ಮತ್ತು ಲವಂಗ ಪೇಸ್ಟ್ :
ಬೆಳ್ಳುಳ್ಳಿ ಮತ್ತು ಲವಂಗವನ್ನು ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಗೆ ನಿಂಬೆ ರಸ ಸೇರಿಸಿ. ಈ ಎರಡನ್ನು ಮಿಕ್ಸ್ ಮಾಡಿದ ನಂತರ ಕೂದಲಿನ ಬೇರುಗಳಿಗೆ ಹಚ್ಚಿ. ಮೂರು ಗಂಟೆ ನಂತರ ಸ್ನಾನ ಮಾಡಿ.

ಈರುಳ್ಳಿ ರಸ:
ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ನಂತರ ಈ ತುಂಡುಗಳನ್ನು ಮಿಕ್ಸಿಂಗ್ ಬೌಲ್ಗೆ ಹಾಕಿ ರಸವನ್ನು ಹೊರತೆಗೆಯಿರಿ. ನಂತರ ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ. ಎರಡು ಗಂಟೆಯ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಹೇನು ಸಾಯುತ್ತದೆ.

ತೆಂಗಿನ ಎಣ್ಣೆ:
ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರವನ್ನು ಮಿಶ್ರಣ ಮಾಡಿ. ನಂತರ ಕೂದಲಿಗೆ ಚೆನ್ನಾಗಿ ಹಚ್ಚಿದ ನಂತರ, ಬಾಚಣಿಗೆಯಲ್ಲಿ ಬಾಚಬೇಕು. ಮೂರು ಗಂಟೆಗಳ ಕಾಲ ಬಿಟ್ಟು, ನಂತರ ಕೂದಲನ್ನು ತೊಳೆಯಿರಿ. ಆಗ ಹೇನು ಮತ್ತು ಅದರ ಮೊಟ್ಟೆಗಳು ನಾಶವಾಗುತ್ತವೆ.

ಬೆಳ್ಳುಳ್ಳಿ ಮತ್ತು ನಿಂಬೆ ರಸ :
ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಿಂಡಿ.
ಇದನ್ನು ತಲೆಯ ಎಲ್ಲಾ ಕಡೆ ಮಸಾಜ್ ಮಾಡಿ. ಮಗುವಿನ ತಲೆಯ ಭಾಗಕ್ಕೆ ಶವರ್ ಕ್ಯಾಪ್ ಹಾಕಿ 30ರಿಂದ 45 ನಿಮಿಷಗಳು ಹಾಗೆ ಬಿಡಿ. ನಂತರ ನಿಮ್ಮ ದಿನಬಳಕೆಯ ಸಾಧಾರಣ ಶಾಂಪು ವಿನಲ್ಲಿ ತಲೆಸ್ನಾನ ಮಾಡಿ.

ಸೀತಾಫಲ ಹಣ್ಣಿನ ಬೀಜ :
ಸೀತಾಫಲ ಹಣ್ಣುಗಳ ಬೀಜಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಪೇಸ್ಟ್ ಮಾಡಿಕೊಳ್ಳಿ.
ತಲೆಯಲ್ಲಿ ಹೇನುಗಳು ಇರುವ ಸಮಯದಲ್ಲಿ ಈ ಪೇಸ್ಟನ್ನು ಕಡಲೆಹಿಟ್ಟಿನ ಜೊತೆಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿ ಎರಡು ಗಂಟೆ ಬಿಟ್ಟು ನಂತರ ಸ್ನಾನ ಮಾಡಿಕೊಳ್ಳಿ.

ಆಲಿವ್ ಆಯಿಲ್:
ಸ್ವಲ್ಪ ಆಲಿವ್ ಆಯಿಲ್ ತೆಗೆದುಕೊಂಡು ಅದನ್ನು ನಿಮ್ಮ ತಲೆಗೆ ರಾತ್ರಿಯ ಸಮಯದಲ್ಲಿ ಹಚ್ಚಿ ಶವರ್ ಕ್ಯಾಪ್ ಹಾಕಿಕೊಂಡು ಮಲಗಿಕೊಳ್ಳಿ. ಬೆಳಗ್ಗೆ ಎದ್ದು ನಂತರ ಸ್ನಾನ ಮಾಡಿ ತಲೆ ಬಾಚಿ ನೋಡಿದರೆ ಸತ್ತ ಹೇನುಗಳು ನಿಮ್ಮ ಬಾಚಣಿಗೆಯಲ್ಲಿ ಇರುತ್ತವೆ.

ಇದನ್ನೂ ಓದಿ: ನಿಮಗಿದು ಗೊತ್ತೇ? ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥವೆಂದು? ಮನುಷ್ಯನಿಗೆ ಇದೇನು ಸೂಚನೆ ನೀಡುತ್ತೆ?

Leave A Reply

Your email address will not be published.