Home News Seema Haider: ಪಾಕ್ ಆಂಟಿ ಸೀಮಾ ಸೀದಾ ಬಾಲಿವುಡ್’ಗೆ ಜಂಪ್ : ಸಿನಿಮಾದಲ್ಲಿ ನಟಿಸಲು ಮಸ್ತ್...

Seema Haider: ಪಾಕ್ ಆಂಟಿ ಸೀಮಾ ಸೀದಾ ಬಾಲಿವುಡ್’ಗೆ ಜಂಪ್ : ಸಿನಿಮಾದಲ್ಲಿ ನಟಿಸಲು ಮಸ್ತ್ ಆಫರ್ !

Seema Haider
Image source: Vijayavani

Hindu neighbor gifts plot of land

Hindu neighbour gifts land to Muslim journalist

Seema Haider: ಭಾರತದ ಯುವಕನ ಜತೆ ಪಬ್‌ಜಿ ಆಡಿ ಪ್ರೀತಿ ಶುರುವಾಗಿ, ಪಾಕಿಸ್ತಾನ ಮಹಿಳೆ ಸೀಮಾ ಹೈದರ್ (Seema Haider) ಪ್ರೀತಿಗಾಗಿ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.

ಉತ್ತರ ಪ್ರದೇಶದ ವ್ಯಕ್ತಿ ಸಚಿನ್ ಮೀನಾ ಅವರನ್ನು ಹುಡುಕಿ ತಾವು ಬಂದಿರುವುದಾಗಿ ಅವರು ಹೇಳಿಕೊಂಡಿದ್ದರು. ಸದ್ಯ ಈ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೀಮಾ ಸ್ಪೈ ಮಾಡುತ್ತಿರಬಹುದು ಎಂಬ ಅನುಮಾನ ಇದೆ. ಹೀಗಿರುವಾಗಲೇ ಬಾಲಿವುಡ್ ನಿರ್ಮಾಪಕರೊಬ್ಬರು ಅವರಿಗೆ ಸಿನಿಮಾ ಆಫರ್ ನೀಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ತಾಯ್ನಾಡು ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಬಂದ ಸೀಮಾ ಅವರು ಸಚಿನ್ ಮತ್ತು 4 ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಜೀವನ ಅಷ್ಟು ಸುಲಭವಿಲ್ಲ. ಈ ಕಾರಣಕ್ಕೆ ಮೀರಠ್ ಮೂಲದ ಅಮಿತ್ ಜಾನಿ ಅವರು ಸೀಮಾಗೆ ಸಿನಿಮಾ ಆಫರ್ ನೀಡಿದ್ದಾರೆ.

ಅಮಿತ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೀಮಾ ಹೈದರ್ ಹಾಗೂ ಸಚಿನ್ ಅವರ ಆರ್ಥಿಕ ಪರಿಸ್ಥಿತಿ ನೋಡಿ ನಾನು ಈ ಸಹಾಯ ಮಾಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಆದ್ದರಿಂದ ಸೀಮಾ ಹೈದರ್ ಮತ್ತು ಆಕೆಯ ಪ್ರಿಯಕರ ಸಚಿನ್ ಮೀನಾ (Sachin Meena) ಅವರಿಗೆ ಇಬ್ಬರೂ ತಮ್ಮ ಬಳಿ ಯಾವಾಗ ಬೇಕಾದರೂ ಬಂದು ಕೆಲಸ ಮಾಡಬಹುದು, ಪ್ರತಿಯಾಗಿ ತಲಾ ಐವತ್ತು ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಹೇಳಲಾಗಿದೆ ಎನ್ನಲಾಗುತ್ತಿದೆ.

ಅದಲ್ಲದೆ ಸೀಮಾ ಹಾಗೂ ಸಚಿನ್ ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಭಾರತದ ಸುರಕ್ಷತಾ ದೃಷ್ಟಿಯಿಂದ ದೊಡ್ಡ ಮಟ್ಟದ ತನಿಖೆ ಆಗುತ್ತಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸೀಮಾ ಹಾಗೂ ಸಚಿನ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದರು. ತಮಗೆ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದರು.

ಆದ್ದರಿಂದ ‘ಸೀಮಾ ಹೈದರ್ ಅವರ ಆರ್ಥಿಕ ಪರಿಸ್ಥಿತಿ ನೋಡಿ ನನಗೆ ಬೇಸರವಾಗಿದೆ. ಈ ಕಾರಣಕ್ಕೆ ಅವರಿಗೆ ಸಹಕಾರಿ ಆಗಲಿ ಎಂಬ ಕಾರಣಕ್ಕೆ ನಾನು ಸಿನಿಮಾ ಆಫರ್ ನೀಡುತ್ತಿದ್ದೇನೆ. ಉದಯಪುರದ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ಸಾಹು ಹತ್ಯೆಯ ಕುರಿತು ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ಸೀಮಾ ಕೂಡ ನಟಿಸುತ್ತಿದ್ದಾರೆ’ ಎಂದಿದ್ದಾರೆ ಅಮಿತ್. ಈ ಚಿತ್ರವನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸೀಮಾ ಈ ಆಫರ್ ಒಪ್ಪುತ್ತಾರಾ? ಒಪ್ಪಿದರೆ ಅವರಿಗೆ ನಟಿಸಲು ಪೊಲೀಸರು ಒಪ್ಪಿಗೆ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅದಲ್ಲದೆ ಸದ್ಯ ಸೀಮಾ ವಿರುದ್ಧ ತನಿಖೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಬಗ್ಗೆ ಸೀಮಾ ಸದ್ಯ ಯೋಚಿಸುವಂತೆ ಇಲ್ಲ. ಸದ್ಯ ಸೀಮಾ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇನ್ನು ಈ ಪತ್ರದ ನಿಜಾಂಶ ಹಾಗೂ ಸಿನಿಮಾ ಆಫರ್​ ಹಿಂದಿರುವ ಸತ್ಯ ಇನ್ನಷ್ಟೇ ಬಯಲಾಗಬೇಕಿದೆ.

 

ಇದನ್ನು ಓದಿ: Gyanavapi case: ಹಿಂದೂ ಗೆಲುವು, ಜ್ಞಾನ ವ್ಯಾಪಿ ಮಸೀದಿ ಸಮೀಕ್ಷೆಗೆ ಹೈ ಕೋರ್ಟ್ ಸಮ್ಮತಿ !