Home News Android Smartphone: ಈ ಸ್ಮಾರ್ಟ್ಫೋನ್’ಗಳು ಆಗಸ್ಟ್ 1ರಿಂದ ಕಾರ್ಯ ನಿರ್ವಹಿಸುವುದಿಲ್ಲ ; ನಿಮ್ಮ ಫೋನ್ ಕೂಡ...

Android Smartphone: ಈ ಸ್ಮಾರ್ಟ್ಫೋನ್’ಗಳು ಆಗಸ್ಟ್ 1ರಿಂದ ಕಾರ್ಯ ನಿರ್ವಹಿಸುವುದಿಲ್ಲ ; ನಿಮ್ಮ ಫೋನ್ ಕೂಡ ಇದೆಯಾ ನೋಡಿ !

Android Smartphone

Hindu neighbor gifts plot of land

Hindu neighbour gifts land to Muslim journalist

Android Smartphone: ಈ ಕಾಲದಲ್ಲಿ ಸ್ಮಾರ್ಟ್ ಫೋನ್ (Android Smartphone) ಬಳಸದವರು ಯಾರೂ ಇಲ್ಲ. ಸದ್ಯ Android ಸ್ಮಾರ್ಟ್ಫೋನ್ ಪ್ರಿಯರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಆಗಸ್ಟ್ ಒಂದರಿಂದ ಈ ಸ್ಮಾರ್ಟ್ ಫೋನ್ ಗಳು ಕಾರ್ಯ ನಿರ್ವಹಿಸುವುದಿಲ್ಲ. ನಿಮ್ಮ ಫೋನ್ ಕೂಡ ಲಿಸ್ಟ್ ನಲ್ಲಿದೆಯಾ ನೋಡಿಕೊಳ್ಳಿ!.

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕಿಟ್‌ಕ್ಯಾಟ್ ಆಂಡ್ರಾಯ್ಡ್ ಆವೃತ್ತಿಯನ್ನು 2013 ರಲ್ಲಿ ಪ್ರಾರಂಭಿಸಲಾಯಿತು. ಸುಮಾರು 10 ವರ್ಷಗಳಷ್ಟು ಹಳೆಯದಾದ ಸ್ಮಾರ್ಟ್ಫೋನ್ ಗಳಲ್ಲಿ ಗೂಗಲ್ ಸಿಸ್ಟಮ್ ಕಾರ್ಯನಿರ್ವಹಿಸುವುದಿಲ್ಲ. ಆಗಸ್ಟ್ 1 ರಿಂದ ಈ ಫೋನ್ ಗಳಲ್ಲಿ ದೇಶಾದ್ಯಂತ Google ನ ಬೆಂಬಲವನ್ನು ಸ್ಥಗಿತಗೊಳಿಸಬಹುದು ಎನ್ನಲಾಗಿದೆ.

ಪ್ರಸ್ತುತ ಕೇವಲ 1% Android ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು KitKat Android ವ್ಯವಸ್ಥೆಯನ್ನು ಆಧರಿಸಿವೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ Google Play ಸೇವೆಯನ್ನು ಬೆಂಬಲಿಸುವುದಿಲ್ಲ. Google Play ಬೆಂಬಲ ನಿಂತಾಗ, ಆಪರೇಟಿಂಗ್ ಸಿಸ್ಟಮ್ ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. Google ಸಪೋರ್ಟ್ ಇಲ್ಲದೆ ಫೋನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾವುದೇ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ನಿಮ್ಮ ಡೇಟಾ ಸುರಕ್ಷಿತವಾಗಿ ಇರಲುವುದಿಲ್ಲ. ಆಗ ಆ ಫೋನ್ ಅಸುರಕ್ಷಿತ. ಹಾಗಾಗಿ ಫೋನ್ ಅನ್ನು ಬದಲಾಯಿಸುವುದು ಉತ್ತಮ.

 

ಇದನ್ನು ಓದಿ: Child girl-Chicken video: ಕೋಳಿಯ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿದ ಪುಟಾಣಿ ಹುಡುಗಿ ; ಮಗುವಿನ ಮುಗ್ಧತೆಯ ವಿಡಿಯೋಗೆ ಮನಸೋತ ನೆಟ್ಟಿಗರು !