Manipur riots: 3 ತಿಂಗಳಾದರೂ ಮಣಿಪುರದ ಗಲಭೆ ನಿಲ್ಲುತ್ತಿಲ್ಲವೇಕೆ? ಸರ್ಕಾರಗಳು ಕೈಕಟ್ಟಿ ಕುಳಿತದ್ದಾರ್ರೂ ಏಕೆ? ಇಲ್ಲಿದೆ ನೋಡಿ ಹಲವು ರೋಚಕ ಕಾರಣಗಳು !!

Latest news Why Manipur riots are not stopping after 3 months There are many reasons here

Manipur riots: ಸುಮಾರು 3 ತಿಂಗಳಾಗುತ್ತಾ ಬಂದರೂ ಮಣಿಪುರದ ಗಲಭೆ(Manipur riots) ಇನ್ನೂ ಹೊತ್ತಿ ಉರಿಯುವ ಲಕ್ಷಣ ಕಾಣುತ್ತಿದೆಯೇ ಹೊರತು, ಶಮನವಾಗುವಂತಹ ಯಾವುದೇ ಲಕ್ಷಗಳು ಕಾಣುತ್ತಿಲ್ಲ. ಮೈತೇಯೀ(Maiteyi) ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಆರಂಭವಾದ ಘರ್ಷಣೆ, ದೇಶವೇ ತಲೆತಗ್ಗಿಸುವಂತಹ ಹೇಯ ಕೃತ್ಯಗಳಿಗೆ ಕಾರಣವಾಗಿದೆ. ಆದರೆ ಇಷ್ಟು ಸಮಯವಾದರೂ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಈ ಗಲಭೆಯನ್ನು ಹತ್ತಿಕ್ಕಲಾಗುತ್ತಿಲ್ಲವೇಕೆ? ಪ್ರಪಂಚದ ಎರಡನೇ ಅತೀ ದೊಡ್ಡ ಸೇನೆ(Military)ನಮ್ಮ ಬಳಿ ಇದ್ದರೂ ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಏಕೆ? ಸರ್ಕಾರಗಳು ಸುಮ್ಮನೆ ಕೈಕಟ್ಟಿ ಕುಳಿತಿರಲು ಕಾರಣವೇನು?

ಹೌದು, ಬರೋಬ್ಬರಿ 80 ದಿನಗಳಿಂದ ಎರಡು ಪ್ರಮುಖ ಸಮುದಾಯಗಳ ನಡುವೆ ನಡೆಯುತ್ತಿರೋ ಸಂಘರ್ಷದ ಕಾರಣದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಈವರೆಗೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಖುದ್ದು ಸೇನೆ ಫೀಲ್ಡ್‌ಗೆ ಇಳಿದರೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ. ಮೊನ್ನೆ ಮೊನ್ನೆ ತಾನೆ ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ, ಮೆರವಣಿಗೆ ಮಾಡಿದಂತ ಅವಮಾನಕರವಾದ ಕೃತ್ಯಕ್ಕೆ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಇದು ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿದ್ದಲ್ಲ, ಬದಲಿಗೆ ಇಡೀ ದೇಶವನ್ನೇ ವಿಶ್ವದೆದು ಬೆತ್ತಲೆಗೊಳಿಹಿದಂತಾಗಿದೆ. ಆದರೆ ಇಷ್ಟೆಲ್ಲಾ ಆದರೂ ನಮ್ಮಲ್ಲಿರೋ ಪ್ರಬಲ ಸರ್ಕಾರಗಳು ಕೈಕಟ್ಟಿ ಕುಳಿತಿರುವುದಾದರೂ ಏಕೆ? ಹೊರ ದೇಶಗಳ ಗಲಭೆಯನ್ನೆಲ್ಲ ನಿಯಂತ್ರಿಸುವ ನಾವು ನಮ್ಮಲ್ಲಾಗೋ ಈ ಗಲಭೆಗಳನ್ನು ನಿಯಂತ್ರಿಸಲು ಆಗುತ್ತಿಲ್ಲವೇಕೆ? ಸರ್ಕಾರವನ್ನು, ಸೈನ್ಯವನ್ನು ತಡೆಯುವ ಆ ನಿಯಮಗಳಾವು? ಇಲ್ಲಿದೆ ನೋಡಿ ಅವುಗಳಿಗೆ ಹಲವು ಕಾರಣಗಳು! !

ಗಲಭೆಗೆ ಕಾರಣ ಏನು?
ಮೊದಲಿನಿಂದಲೂ ಮಣಿಪುರುದ ಕೆಲವೊಂದು ಗುಂಪುಗಳಿಗೂ ಹಾಗೂ ಅಲ್ಲಿನ ರಾಜ್ಯ ಸರ್ಕಾರದ(State Government)ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ ದಂಗೆ ತೀವ್ರ ಗತಿಯನ್ನು ಪಡೆದುಕೊಂಡಿದ್ದು ಮೇ 3ರಂದು ಹೈಕೋರ್ಟ್(High Court) ನೀಡಿದ ಒಂದು ತೀರ್ಪಿನಿಂದಾಗಿ. ಹೌದು, ಹತ್ತು ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಕೊಟ್ಟದ್ದರಿಂದಾಗಿ. ಅದೇ, ಮೈತೈ ಜನಾಂಗವನ್ನು ಬುಡುಕಟ್ಟು ಜನಾಂಗದ ಗುಂಪಿಗೆ ಸೇರಿಸುವಂತಹ ನಿರ್ಧಾರವನ್ನು ಮತ್ತೆ ಪುನಶ್ಚೇತನ ಗೊಳಿಸುವಂತಹ ಕಾರ್ಯವನ್ನು ಮಾಡಿರುವ ಕಾರಣದಿಂದಾಗಿ ಮಣಿಪುರದಲ್ಲಿ ಈ ದಂಗೆ (Manipur Riot) ತೀವ್ರಗತಿಯನ್ನು ಪಡೆದುಕೊಳ್ಳುತ್ತದೆ.

ಏಕೆಂದರೆ ಕುಕಿ (Kuki) ಹಾಗೂ ಇತರ ನಾಗಾ ಪಂಗಡಗಳು (Naga Comunity) ಮಣಿಪುರದಲ್ಲಿ ಅಲ್ಪಸಂಖ್ಯಾತರು. ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡಿದರೆ ಅವರು ಪ್ರಬಲರಾಗುತ್ತಾರೆ. ಶೇ.10ರಷ್ಟು ಮಾತ್ರ ಬಯಲು ಪ್ರದೇಶವನ್ನು ಹೊಂದಿರುವ ಕಣಿವೆ ರಾಜ್ಯದಲ್ಲಿ ಮೈತೇಯಿಗಳಿಗೆ ಹಕ್ಕುಗಳು ವಿಸ್ತರಣೆಯಾದರೆ ತಮ್ಮ ಭೂಮಿ ಹಾಗೂ ಅರಣ್ಯಕ್ಕೆ ಭಂಗ ಬರುತ್ತದೆ ಎಂಬ ಭಯ ಅರಣ್ಯದಲ್ಲಿ ಹೆಚ್ಚಾಗಿ ನೆಲೆಸಿರುವ ಕುಕಿ ಸಮುದಾಯವನ್ನು ಕಾಡಿದೆ. ಹೀಗಾಗಿ ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡದಂತೆ ಒತ್ತಾಯಿಸುತ್ತಿದ್ದಾರೆ. ಹೈಕೋರ್ಟ್ ಆದೇಶ ನೀಡಿದ ಬಳಿಕ ನಿಧಾನವಾಗಿ ಆರಂಭವಾದ ಪ್ರತಿಭಟನೆಗಳು ಉಗ್ರ ರೂಪ ಪಡೆದು ಭಾರಿ ಹಿಂಸಾಚಾರಕ್ಕೆ (Violence)ಕಾರಣವಾಗಿದೆ.

ಗಲಭೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು?
• ಮಣಿಪುರ ಹಿಂಸೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಅನೇಕ ಕ್ರಮ ಕೈಗೊಂಡಿವೆ.
• ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಸಮತೋಲನ ಮಾಡಲಾಗದೇ ಸರ್ಕಾರಗಳು ಒದ್ದಾಡುತ್ತಿವೆ.
• ಮಣಿಪುರದಲ್ಲಿ ಸಂಘರ್ಷ ಆರಂಭವಾದ ಕೂಡಲೇ ಅದನ್ನು ನಿಯಂತ್ರಿಸಲು ಮೇ 4ರಂದು ರಾಜ್ಯಸರ್ಕಾರ ಕಂಡಲ್ಲಿ ಗುಂಡು ನೀತಿಯನ್ನು ಜಾರಿ ಮಾಡಿತು.
• ಅಸ್ಸಾಂ ರೈಫಲ್ಸ್‌ ಮತ್ತು ಸೇನೆಯನ್ನು ನಿಯೋಜಿಸಲಾಯಿತು.
• ಗಲಭೆ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ವಿಧಿಸಿ, ಕೇಂದ್ರೀಯ ಭದ್ರತಾ ಪಡೆಗಳ ಪ್ರಮಾಣವನ್ನು 10 ಸಾವಿರಕ್ಕೆ ಹೆಚ್ಚಿಸಲಾಯಿತು.
• ರಾಜ್ಯಾದ್ಯಂತ ಇಂಟರ್ನೆಟ್‌ ಸ್ಥಗಿತಗೊಳಿಸಲಾಯಿತು.
• ಗಲಭೆಯನ್ನು ತಡೆಯಲು ಮುಂದಾದ ಸೇನಾಪಡೆಗಳು ಈ ಸಮುದಾಯಗಳಿಂದ ಆಯುಧಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮುಂದಾದವು. ಆದರೆ ಈ ವೇಳೆ ಸೇನಾಪಡೆಗಳ ಮೇಲೂ ದಾಳಿ ನಡೆದ ಕಾರಣ ಗುಂಡಿನ ಚಕಮಕಿಯಲ್ಲಿ 33 ಮಂದಿ ಗಲಭೆಕೋರರು ಮೃತಪಟ್ಟರು.
• ಕೇಂದ್ರ ಗೃಹ ಸಚಿವ ಅಮಿತ್‌ ಶಾ ಖುದ್ದು 3 ದಿನ ರಾಜ್ಯದಲ್ಲಿ ಸಂಚರಿಸಿ ಶಾಂತಿಸಭೆಗಳನ್ನು ನಡೆಸಿದರು. ಆದರೂ ಹಿಂಸೆ ನಿಯಂತ್ರಣಕ್ಕೆ ಬಂದಿಲ್ಲ.
• ಇದೀಗ ಖುದ್ದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಶಾಂತಿ ಸ್ಥಾಪನೆಗೆ ನಾವೇ ಸೂಚನೆ ನೀಡಬೇಕಾದೀತು ಎಂದಿದೆ.

ಗಲಭೆ ಆರದಿರಲು ಕಾರಣ ಏನು?
• ಎರಡು ಸಮುದಾಯಗಳ ನಡುವಿನ ಹಳೆಯ ದ್ವೇಷ:
ಮೈತೇಯಿ-ಕುಕಿಗಳ ನಡುವಿನ ದ್ವೇಷ ಇಂದು-ನಿನ್ನೆಯದಲ್ಲ. ಮೈತೇಯಿ ಸಮುದಾಯ ಸುಮಾರು 10 ವರ್ಷಗಳಿಂದ ಎಸ್‌ಟಿ ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಲೇ ಇದೆ. ಮಣಿಪುರದಲ್ಲಿರುವ 60 ಶಾಸಕರಲ್ಲಿ 50 ಶಾಸಕರು ಮೈತೇಯಿ ಸಮುದಾಯಕ್ಕೆ ಸೇರಿದವರಾದ ಕಾರಣ, ಮೀಸಲಾತಿಯು ತಮ್ಮನ್ನು ರಾಜಕೀಯವಾಗಿ ದುರ್ಬಲಗೊಳಿಸಬಹುದು ಎಂಬ ಭೀತಿ ಕುಕಿಗಳನ್ನು ಕಾಡುತ್ತಿದೆ, ಈ ಸಮುದಾಯಗಳಲ್ಲಿರುವ ಬಂಡುಕೋರರು, ನಾಗರಿಕ ಪಡೆಗಳು ಮತ್ತು ಕಿಡಿಗೇಡಿಗಳು ಅವಕಾಶ ಸಿಕ್ಕಾಗೆಲ್ಲಾ ಇನ್ನೊಂದು ಗುಂಪಿನ ಮೇಲೆ ದಾಳಿ ನಡೆಸಿ, ಹಾನಿ ಉಂಟು ಮಾಡುತ್ತಿರುವುದು ಈ ಸಮುದಾಯಗಳ ನಡುವೆ ನಿರಂತರ ದ್ವೇಷಕ್ಕೆ ಕಾರಣವಾಗಿದೆ. ಪ್ರತಿ ಬಾರಿ ದಾಳಿ ನಡೆಸಿದಾಗಲೂ ನಡೆಯುತ್ತಿರುವ ಅಮಾನುಷ ಹತ್ಯೆಗಳು, ಆಸ್ತಿ ಪಾಸ್ತಿ ಕೊಳ್ಳೆ ಮತ್ತು ಧಾರ್ಮಿಕ ಸ್ಥಳಗಳ ನಾಶ ಇಬ್ಬರ ನಡುವೆ ಬದ್ಧ ದ್ವೇಷ ಉಂಟಾಗುವಂತೆ ಮಾಡಿದ್ದು, ಅವಕಾಶ ಸಿಕ್ಕಾಗೆಲ್ಲಾ ಅದು ಭುಗಿಲೇಳುತ್ತಿದೆ.

• ರಾಜ್ಯ ಸರ್ಕಾರ, ಪೊಲೀಸ್‌ ವ್ಯವಸ್ಥೆ ಮೇಲಿನ ಅಪನಂಬಿಕೆ:
ಒಂದು ದೇಶ ಅಥವಾ ರಾಜ್ಯ ಸುವವ್ಯವಸ್ಥಿತವಾಗಿ, ಶಾಂತಿಯುತವಾಗಿ ಇರಬೇಕೆಂದರೆ ಅಲ್ಲಿನ ಸರ್ಕಾರ, ಕಾನೂನು ವ್ಯವಸ್ಥೆ, ಆಡಳಿತ ವ್ಯವಸ್ಥೆ, ಪೋಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇರಬೇಕು. ಆದರೆ ಇಲ್ಲಿನ ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ವ್ಯವಸ್ಥೆಯ ಮೇಲೆ ಎರಡೂ ಪಂಗಡಗಳಿಗೂ ಅಪನಂಬಿಕೆ ಇರುವುದು ಅನಾಹುತ ನಿಲ್ಲದಿರಲು ಇನ್ನೊಂದು ಕಾರಣವಾಗಿದೆ.

• ಎರಡೂ ಸಮುದಾಯಗಳಲ್ಲಿರುವ ತಪ್ಪು ಊಹೆಗಳು:
50 ಮೈತೇಯಿ ಶಾಸಕರನ್ನು ಹೊಂದಿದ್ದರೂ ಎಸ್‌ಟಿ ಮೀಸಲಾತಿಗಾಗಿ ವರ್ಷಾನುಗಟ್ಟಲೆ ಹೋರಾಟ ಮಾಡಬೇಕಿರುವುದು ಮೈತೇಯಿ ಸಮುದಾಯವನ್ನು ಕೆರಳಿಸಿದೆ. ಮತ್ತೊಂದೆಡೆ ಮೈತೇಯಿಗಳು ಪ್ರಬಲವಾದರೆ ತಾವು ಮೂಲೆಗುಂಪು ಖಚಿತ ಎಂಬ ಭಾವನೆ ಕುಕಿಗಳಿಗಿದ್ದು, ಯಾವಾಗಲೂ ತಮ್ಮ ಸಮುದಾಯದ ವಿರುದ್ಧ ಪೊಲೀಸರು ನಡೆದುಕೊಳ್ಳುತ್ತಾರೆ ಎಂದು ಕುಕಿಗಳು ವಾದಿಸುತ್ತಲೇ ಇದ್ದಾರೆ.

• ದುಷ್ಕರ್ಮಿಗಳ ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ
ತಿಂಗಳ ಗಲಭೆ ವೇಳೆ ಸಾವಿರಾರು ಶಸ್ತ್ರಾಸ್ತ್ರಗಳನ್ನು ಸೈನಿಕರು ಹಾಗೂ ಪೊಲೀಸರಿಂದ ದುಷ್ಕರ್ಮಿಗಳು ಲೂಟಿ ಮಾಡಿದ್ದರೆ. ಅಲ್ಲದೆ, ಮಣಿಪುರ ಸಂಪೂರ್ಣವಾಗಿ ಕಣಿವೆ ರಾಜ್ಯವಾಗಿದ್ದು, ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಎರಡೂ ಗುಂಪುಗಳಿಗೂ ಆಯುಧಗಳು ಸುಲಭವಾಗಿ ದೊರೆಯುತ್ತಿವೆ. ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಿ ಆಯುಧಗಳನ್ನು ತಂದು ಇವರಿಗೆ ಮಾರುವ ಅನೇಕ ಕಳ್ಳದಂಧೆಗಳು ಇಲ್ಲಿ ಸಾಕಷ್ಟಿವೆ. ಆಯುಧಗಳು ಸುಲಭವಾಗಿ ದೊರೆಯುತ್ತಿರುವುದರಿಂದ ಘರ್ಷಣೆಗಳು ನಡೆದಾಗೆಲ್ಲಾ ಆಗುತ್ತಿರುವ ಹಾನಿ ಹೆಚ್ಚಿನ ಮಟ್ಟದ್ದಾಗಿದೆ.

• ಸೇನಾಪಡೆಗಳಿಗೆ ಮುಳುವಾದ ಆಫ್‌ಸ್ಪಾ ರದ್ದತಿ:
ಮಣಿಪುರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ವರ್ಷ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ‘ಆಫ್‌ಸ್ಪಾ’ವನ್ನು ತೆಗೆದು ಹಾಕಿರುವ ಕಾರಣ, ಉಗ್ರ ಕೃತ್ಯ ನಡೆಸುತ್ತಿರುವ ಜನರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುವುದು ಸೇನಾಪಡೆಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ 10 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ನೇಮಿಸಿದರೂ ಸಹ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೇನೆ ಹಾಗೂ ಅಸ್ಸಾಂ ರೈಫಲ್ಸ್‌ ಪಡೆಗಳು ವಿಫಲವಾಗಿವೆ. ಹಿರಿಯ ಅಧಿಕಾರಿಗಳ ಆಣತಿ ಇಲ್ಲದೇ ಬಂಧಿಸಲು ಸಾಧ್ಯವಾಗದೇ ದುಷ್ಕರ್ಮಿಗಳು ಮತ್ತಷ್ಟು ಹಿಂಸಾಚಾರದಲ್ಲಿ ತೊಡಗಿಕೊಂಡಿದ್ದಾರೆ.

 

ಇದನ್ನು ಓದಿ: Bizarre Rule: ಇಲ್ಲಿ ಗೋವುಗಳು ರಸ್ತೆಗೆ ಇಳಿದ್ರೆ ಮಾಲೀಕನಿಗೆ ಬೀಳುತ್ತೆ 5 ಸಲ ಕಪಾಳಮೋಕ್ಷ, ಈ ವಿಚಿತ್ರ ನಿಯಮ ಇರೋ ಗ್ರಾಮ ಎಲ್ಲಿದೆ ? 

Leave A Reply

Your email address will not be published.