Viral Video: ಜ್ವಾಲಾಮುಖಿಯ ತುದಿಯಲ್ಲಿ ಪಿಜ್ಜಾ ಬೇಯಿಸಿ ಸವಿದ ಮಹಿಳೆ

Latest news Viral Video woman cooked and ate pizza in a volcano

Pizza: ಜ್ವಾಲಾಮುಖಿಯಿಂದ ಪಿಜ್ಜಾವನ್ನು ಬೇಯಿಸಿ ತಿನ್ನಬಹುದು ಎಂದು ಇಲ್ಲೊಬ್ಬಳು ಚಾಣಕ್ಯೆ ತಿಳಿಸಿ ಕೊಟ್ಟಿದ್ದಾಳೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋವೊಂದರಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.

ಅಲೆಕ್ಸಾಂಡ್ರಾ ಬ್ಲೊಡ್ಜೆಟ್ Instagram ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಗ್ವಾಟೆಮಾಲಾದಲ್ಲಿ ಅವರ ಪ್ರವಾಸದ ಆಸಕ್ತಿದಾಯಕ ಕ್ಷಣಗಳು ಕಾಣಬಹುದಾಗಿದೆ. ಅಲೆಕ್ಸಾಂಡ್ರಾ ಕುದಿಯುತ್ತಿದ್ದ ಜ್ವಾಲಾಮುಖಿಯಿಂದ ಪಿಜ್ಜಾವನ್ನು ಬೇಯಿಸಿ ತಿಂದಿರುವುದು ಕಾಣಬಹುದು.

ಈ ಪೋಸ್ಟ್ ನಲ್ಲಿ ಬಹುಶಃ ನಾವು ಇದಕ್ಕೆಂದೇ ಅಲ್ಲಿಗೆ ಪ್ರಯಾಣಿಸಿಲ್ಲ, ಆದರೆ ಇದೊಂದು ರೀತಿಯಲ್ಲಿ ನಮ್ಮ ಮೋಜಿಗೆ ಬೋನಸ್ ನೀಡಿದಂತಿತ್ತು ಎಂದು ಈ ವಿಡಿಯೋಗೆ ಶಿರ್ಷಿಕೆ ನೀಡಲಾಗಿದೆ. ಈ ವೀಡಿಯೊ 1.2 ಮಿಲಿಯನ್ ವೀಕ್ಷಣೆ ಆಗಿದ್ದು ಮತ್ತು ಲಕ್ಷಗಟ್ಟಲೇ ಕಮೆಂಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಒಟ್ಟಿನಲ್ಲಿ ವಿಶಿಷ್ಟ ಖಾದ್ಯವನ್ನು ಕಂಡು ಜನ ಬೆರಗಾದರು. ಇನ್ನು ಪಿಜ್ಜಾ ರುಚಿ ಹೇಗಿದೆ ಎಂದು ತಿಳಿದುಕೊಳ್ಳಲು ಹಲವರು ಕಮೆಂಟ್ ಮಾಡಿ ಕೇಳಿದ್ದಾರೆ.

 

 

ಇದನ್ನು ಓದಿ: Aeolus Satellite : ಮನುಕುಲಕ್ಕೆ ಹೊಸ ಕಂಟಕ: ಇನ್ನು ಕೆಲವೇ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ ಭಾರೀ ಗಾತ್ರದ ಉಪಗ್ರಹ ! 

Leave A Reply

Your email address will not be published.