Ambassadar Car: ರಸ್ತೆ ರಾಜ ಅಂಬಾಸಡರ್- EV ಕಾರ್ ಮತ್ತೆ ಬರ್ತಿದೆ – ಕ್ಯೂ ನಿಲ್ಲಲು ಜನ ಈಗ್ಲೇ ರೆಡಿ !

Ambassador Car: ಇದು ರಾಜ ರಥ. ಭಾರತದ ರೋಡುಗಳಲ್ಲಿ ಪ್ರತ್ಯಕ್ಷವಾದರೆ ಗುರುಗುಡುವ ಸಿಂಹದಂತೆ, ರಸ್ತೆ ರಾಜನಂತೆ ಕಾಲದ ಹಂಗಿಲ್ಲದೆ ಮೆರೆಯುತ್ತಿರುವ ಈ ಕಾರು ಈಗಲೂ ಅಲ್ಲಿ ಇಲ್ಲಿ ಪ್ರತ್ಯಕ್ಷವಾದರೆ ನಮ್ಮ ನೋಟ ಮತ್ತು ಮನಸ್ಸು ಅದರತ್ತ ಸರಿಯುತ್ತದೆ. ಈಗ ಅಲ್ಲೊಮ್ಮೆ ಇಲ್ಲೊಮ್ಮೆಅಪರೂಪಕ್ಕೆ ಕಂಡುಬರುವ ಈ ‘ ಬ್ರಾಂಡ್ ಅಂಬಾಸಿಡರ್ ‘ ಒಂದು ಸಮಯದಲ್ಲಿ ಭಾರತದಲ್ಲಿ ಇದನ್ನು ಪ್ರತಿಷ್ಠೆಯ ವಿಷಯವಾಗಿತ್ತು. ಕಾರು ಅಂದರೆ ಅಂಬಾಸಿಡರ್ ಕಾರು (Ambassador Car) ಎನ್ನುವಂತಿದ್ದ ಕಾರು ಕ್ರಮೇಣ ಜನ ಮಾನಸದಿಂದ ಮರೆಯಾಗುತ್ತಾ ಬಂತು. ಕಾರು ಪೇಟೆಗೆ ಹೊಸ ಮಾಡೆಲ್ಲುಗಳ, ಅನಂತ ಫೀಚರುಗಳ ಕಾರುಗಳು ಲಗ್ಗೆ ಹಾಕಿದವು. ಅದೇ ಹಳೆಯ ಮಾಡೆಲ್ ಒಂದಕ್ಕೇ ಕಚ್ಚಿಕೊಂಡು ಕುಳಿತ ಅಂಬಾಸಡರ್ ಕಾರಿನ ಮಾತೃ ನಿರ್ಮಾತೃ ಸಂಸ್ಥೆ ಆಗಿರುವಂತಹ ಹಿಂದುಸ್ತಾನ ಮೋಟಾರ್ಸ್ (Hindustan Motors) ಸಂಸ್ಥೆ ಅಂಬಾಸಿಡರ್ ಕಾರ್ ಅನ್ನು ಹೊಚ್ಚ ಹೊಸ ರೂಪದಲ್ಲಿ ಮಾರುಕಟ್ಟೆಗೆ ತರುವಂತಹ ಪ್ರಯತ್ನವನ್ನು ಈಗ ಮಾಡುತ್ತಿದೆ.

 

ಹಿಂದೆ ರಸ್ತೆ ರಾಜನಾಗಿದ್ದ ಅಂಬಾಸಿಡರ್ ಕಾರಿಗೆ ಆಗ ಹೊಸದಾಗಿ ಬಿಡುಗಡೆ ಆದಂತಹ ಮಾರುತಿ 800 (Maruti 800) ಟಗರು ಠಕ್ಕರ್ ಒಡ್ಡಿತ್ತು. ಬಲಿಷ್ಠ ಉಕ್ಕಿನ ದೇಹದ ಅಂಬಾಸಡರ್ ಆ ಸ್ಪರ್ಧೆಯಲ್ಲಿ ಸಣ್ಣ ಸೈಜಿನ, ಎಲ್ಲಿ ಬೇಕಾದರೂ ಸುಯ್ಯನೆ ತಿರುಗಿಸಿ ಓಡಿಸಬಲ್ಲ, ಕೈತುಂಬಾ ಮೈಲೇಜು ನೀಡುವ, ಜೇಬು ತುಂಬಾ ದುಡ್ಡು ಉಳಿಸುವ ಮಾರುತಿ 800 ಕಾರು ಅಂಬಾಸಿಡರ್ ಕಾರನ್ನು ಮಾರುಕಟ್ಟೆಯಿಂದ ಹೊರಬೀಳುವಂತೆ ಮಾಡುತ್ತದೆ. ಅದಾದ ನಂತರ ಈ ಕಾರು ಕೇವಲ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳಿಗೆ ಮತ್ತು ಸೇನಾ ಇಲಾಖೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. 2019 ರಲ್ಲಿ ಭಾರತೀಯ ಸೇನೆ ಕೂಡ ಅಂಬಾಸಿಡರ್ ಕಾರಿಗೆ (Ambassador Car) ಗುಡ್ ಬೈ ಹೇಳುತ್ತೆ. ಆದರೂ ಈ ಕಾರು ಹಳೆಯ ಪಳೆಯುಳಿಕೆಯ್ತ ಥರ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತದೆ. ಅದೆಲ್ಲ ಈಗ ಹಳೆಯ ಕಥೆ, ಬಿಡಿ. ಈಗಿನ ಹೊಸ ವಿಷ್ಯ ಏನೆಂದರೆ, ಈ ಕಾರು ಮತ್ತೆ ಮಾರ್ಕೆಟ್ ಗೆ ಲಗ್ಗೆ ಹಾಕುತ್ತಿದೆ.

 

ಹಿಂದುಸ್ತಾನ್ ಮೋಟರ್ಸ್ ನ ಹೊಸ ಅಂಬಾಸಡರ್:

 

ಹಿಂದುಸ್ತಾನ್ ಮೋಟರ್ಸ್ ಸಂಸ್ಥೆಯು ಯುರೋಪ್ ನ ಒಂದು ಕಂಪನಿಯ ಜೊತೆಗೆ ಸೇರಿಕೊಂಡು 2024 ರ ಒಳಗೆ ಅಂಬಾಸಿಡರ್ ಕಾರಿನ (Ambassador Car) ಹೊಸ ರೂಪಾಂತರವನ್ನು ಮಾರುಕಟ್ಟೆಗೆ ತರುವ ಪ್ರಯತ್ನದಲ್ಲಿದೆ. ಈಗ ಹಿಂದುಸ್ತಾನ್ ಮೋಟಾರ್ ಸಂಸ್ಥೆ ತನ್ನ ಅತ್ಯಂತ ಪ್ರತಿಷ್ಠಿತ ಹಾಗೂ ಪ್ರಖ್ಯಾತಕಾರ ಅಂಬಾಸಿಡರ್ (Ambassador Car) ಅನ್ನು ಒದಗಿಸಲಿದೆ. ಇನ್ನೊಂದು ವಿಶೇಷ ಏನೆಂದರೆ ಈ ನಮ್ಮ ವಿಂಟೇಜ್ ಬ್ರಾಂಡಿನ ಕಾರು ಅಡ್ವಾನ್ಸ್ಡ್ ಎಲೆಕ್ಟ್ರಿಕ್ ರೂಪಾಂತರದೊಂದಿಗೆ ಬಿಡುಗಡೆ ಆಗಲಿದೆ.

 

ಯಾವಾ ಬರಲಿದೆ ?

 

ಎಲ್ಲವೂ ಅಂದುಕೊಂಡಂತೆ ತಯಾರಿಕೆ ನಡೆದರೆ, 2024 ವರ್ಷದ ಒಳಗಾಗಿ ಭಾರತದ ಮಾರುಕಟ್ಟೆಗೆ ಇಳಿಸಲಿದೆ ಎಂಬುದು ಆಟೋ ಸಂಸ್ಥೆಗಳು ವರದಿ ಮಾಡಿವೆ. ಈ ಅಂಬಾಸೆಡರ್ ಇವಿಯ ಬೆಲೆ ಕೂಡ ಸುಮಾರು 20 ಲಕ್ಷದ ಒಳಗೆ ಇರಲಿದೆ ಎನ್ನಲಾಗಿದೆ. ಈ ಕಾರು ಸೆಡಾನ್ ಆಗಿದ್ದು ಮಾಡ್ರನ್ ಲುಕ್ ನಲ್ಲಿ ಗಮನ ಸೆಳೆಯುತ್ತದೆ. ಟೆಸ್ಲಾ ಬ್ಯಾಟರಿ ಹೊಂದಿರಲಿರುವ ಈ ಕಾರು ಹಲವು ಬಣ್ಣಗಳಲ್ಲಿ ಕಾಣಿಸಿ ಕೊಳ್ಳಲಿದ್ದು, ಹೊಸ ಕಾರಿನ ಆಗಮಿಕೆಗೆ ಕುತೂಹಲ ಹೆಚ್ಚು ಮಾಡಿದೆ. ಅಂಬಾಸಡರ್ ಕಾರನ್ನು ಅಂದು ನೋಡಿ ಇಷ್ಟಪಟ್ಟ ಜನರು, ಈಗ ಹೊಸ ಅಂಬಾಸೆಡರ್ ಕಾರನ್ನು ಮುಗಿಬಿದ್ದು ಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ.

ಇದನ್ನೂ ಓದಿ :ಕರಾವಳಿಯಲ್ಲಿ ರೆಡ್ ಅಲರ್ಟ್ ಮಹಾ ಮಳೆಗೆ ಸಿಕ್ಕಿದೆ ದೊಡ್ಡ ಮುನ್ಸೂಚನೆ !

Leave A Reply

Your email address will not be published.