Life style: ಬಿಪಿಎಲ್ ಕುಟುಂಬಗಳಿಗೆ ಮುಟ್ಟಿನ ಕುರಿತು ಹೆಚ್ಚು ತಪ್ಪು ಕಲ್ಪನೆಯಿದೆ: ಸಮೀಕ್ಷೆ ಬಿಚ್ಚಿಟ್ಟ ಮಾಹಿತಿ ಹೀಗಿದೆ!
Life style Latest news BPL families have more misconceptions about menstruation
Life style: ಮಹಿಳೆಯರಲ್ಲಿ ಮುಟ್ಟು ನೈಸರ್ಗಿಕ ಕ್ರಿಯೆಯಾಗಿದ್ದು, ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು ಗೊತ್ತಿರುವ ವಿಚಾರವೇ. ಮುಟ್ಟಿನ ಸಮಯವನ್ನು ಜೊತೆಗೆ ಆ ನೋವಿನ ಪರಿಸ್ಥಿತಿಯನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ ಸಂಗತಿಯಾಗಿದೆ. ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್, ಕಪ್ ಅಥವಾ ಟ್ಯಾಂಪೂನ್ಗಳನ್ನು ಬಳಕೆ ಮಾಡೋದು ಸಹಜ. ಆದರೆ, ಇಂದಿಗೂ ಕೆಲವೆಡೆ ಈ ಮುಟ್ಟು ಎಂದರೆ (Life style) ಒಂದು ರೀತಿಯ ಮೌಢ್ಯಾಚರಣೆ ರೂಡಿಯಲ್ಲಿದೆ.
ಕೆಲವು ಹಳ್ಳಿಗಳಲ್ಲಿ ಮುಟ್ಟಿನ ಕುರಿತು ತಪ್ಪು ಕಲ್ಪನೆಗಳು, ಆಚರಣೆಗಳು ಇಂದಿಗೂ ರೂಡಿಯಲ್ಲಿದೆ. ಈ ಕುರಿತು ಯುನೆಸ್ಕೋ ಇತ್ತೀಚಿನ ಸಮೀಕ್ಷೆಯ ವರದಿ ಪ್ರಕಟಿಸಿದ್ದು,ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಅಂದರೆ ಬಿಪಿಎಲ್ ಕುಟುಂಬಗಳಲ್ಲಿ ಅತಿ ಹೆಚ್ಚು ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದ ಮೌಢ್ಯಗಳನ್ನು ಒಳಗೊಂಡಿರುವ ಕುರಿತು ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಹಾಗೆ ಮುಟ್ಟಿನ ಸಮಯದಲ್ಲಿ ದೇವಾಲಯಗಳಲ್ಲಿ ಪ್ರವೇಶ ನಿರಾಕರಣೆ, ಎಲ್ಲ ಸದಸ್ಯರ ಜೊತೆಗೆ ಕುಳಿತು ಊಟ ಮಾಡಲು ಅವಕಾಶ ಇಲ್ಲದಿರುವುದು. ಈ ಎಲ್ಲ ಲಕ್ಷಣಗಳೂ ಅಸ್ಪ್ರಶ್ಯತೆ ಧೋರಣೆ ಅನುಸರಿಸುವುದರ ಸಂಕೇತ ಎಂಬುದು ಕೆಲವರ ಅಭಿಪ್ರಾಯ. ಅಡುಗೆ ಕೋಣೆ ಇಲ್ಲವೇ ಮನೆಯಲ್ಲಿ ಪೂಜಾ ಕೊಠಡಿಗಳನ್ನು ಪ್ರವೇಶಿಸಬಾರದು’ ಎನ್ನುವ ಕಟ್ಟುಪಾಡುಗಳು ಇಂದಿಗೂ ಚಾಲ್ತಿಯಲ್ಲಿರುವ ಕುರಿತು ಯುನೆಸ್ಕೋದ ಲಿಂಗ ತಜ್ಞ ಡಾ ಹುಮಾ ಮಸೂದ್ ಮಾಹಿತಿ ನೀಡಿದ್ದಾರೆ.
2019 ರಲ್ಲಿ ಪ್ರಾರಂಭವಾದ ಯುನೆಸ್ಕೋ ಮತ್ತು ಪ್ರಾಕ್ಟರ್ ಮತ್ತು ಗ್ಯಾಂಬಲ್ (P&G) ವಿಸ್ಪರ್ನ #KeepGirlsinSchool ಅಭಿಯಾನದ ‘ಸ್ಪಾಟ್ಲೈಟ್ ರೆಡ್’ ಎಂಬ ಶೀರ್ಷಿಕೆಯಡಿ ಆರು ರಾಜ್ಯಗಳಲ್ಲಿ ಸಮೀಕ್ಷೆ ಮಾಡಲಾಗಿದೆ. ಒಟ್ಟು 1,800 ಜನರ ಸಮೀಕ್ಷೆಯ ಅನುಸಾರ ಒಟ್ಟು 1,800 ಜನರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ದೆಹಲಿ ಈ ಪ್ರದೇಶಗಳಲ್ಲಿ ಮಾಡಲಾಗಿದೆ.
ಸಮೀಕ್ಷೆ ಮಾಡಿದ ಕರ್ನಾಟಕದ ಗ್ರಾಮೀಣ ಭಾಗದ ಶೇ 33 ರಷ್ಟು ಹುಡುಗರು ಮುಟ್ಟಿನ ಕುರಿತು ತಪ್ಪು ಕಲ್ಪನೆ ಒಳಗೊಂಡಿದ್ದು, ಮೌಢ್ಯ ಮತ್ತು ತಪ್ಪುಗ್ರಹಿಕೆಗಳಿಗೆ ಜಾತಿ ಎಂಬ ವಿಚಾರ ಕೂಡ ಕಾರಣವಾಗಿದೆ ಎಂಬ ಅಂಶ ಬಯಲಾಗಿದೆ. ಇದೆಲ್ಲದರ ನಡುವೆ, ಸರ್ಕಾರ ಅದೆಷ್ಟೋ ಹೊಸ ನಿಯಮಗಳನ್ನೂ ಜಾರಿಗೆ ತಂದರು ಕೂಡ ಈ ನಿಯಮಗಳು ಜನರ ತಪ್ಪು ಕಲ್ಪನೆ ಅಳಿಸಿ ಹಾಕುವಲ್ಲಿ ವಿಫಲವಾಗಿದೆ.
ಹುಡುಗಿಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಣೆ ಮಾಡುವ ದೆಸೆಯಲ್ಲಿ ಕರ್ನಾಟಕದ ಶುಚಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಈ ಯೋಜನೆಯನ್ನು 2020 ರಲ್ಲಿ ನಿಲ್ಲಿಸಲಾಗಿ ಆ ಬಳಿಕ ಈ ಯೋಜನೆಯನ್ನು ಪ್ರಾರಂಭ ಮಾಡಿಲ್ಲ. ಜನರ ಮನದಲ್ಲಿ ಮೂಡಿರುವ ತಪ್ಪು ಕಲ್ಪನೆಯನ್ನು ಅಳಿಸಿಹಾಕಲು ಭಾರತದಲ್ಲಿ ಮುಟ್ಟಿನ ಆರೋಗ್ಯವನ್ನು ಸಾಮಾನ್ಯ ಎಂದು ಪರಿಗಣಿಸಲು ಎಲ್ಲ ವರ್ಗಗಳ ಜನರು ಮುಟ್ಟು ಸಾಮಾನ್ಯ ಪ್ರಕ್ರಿಯೆ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂಬುದು ತಜ್ಞರ ಅನಿಸಿಕೆಯಾಗಿದೆ.