ಸಂಸದೆಗೆ ಬಸ್ ಟಿಕೆಟ್ ನೀಡಿದ ವಿವಾದ: ಚಾಲಕಿ ಶರ್ಮಿಳಾಗೆ ಹೊಸ ಕಾರು ನೀಡಿದ ಕಮಲ್ ಹಾಸನ್

Kamal Haasan :ಡಿಎಂಕೆ ಸಂಸದೆ ಕನಿಮೋಳಿ ಅವರ ಪ್ರಯಾಣದ ವೇಳೆ ಬಸ್ ಟಿಕೆಟ್ ವಿಚಾರವಾಗಿ ಉಂಟಾದ ವಿವಾದ ಹಿನ್ನೆಲೆಯಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಮಹಿಳಾ ಬಸ್ ಚಾಲಕಿಗೆ ಈಗ ಹೊಸ ಕಾರೊಂದು ಉಡುಗೊರೆಯಾಗಿ ಬಂದಿದೆ. ತಮಿಳು ನಟ ರಾಜಕಾರಣಿ ಕಮಲ್ ಹಾಸನ್ (Kamal Haasan )ರವರು ಶರ್ಮಿಳಾಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

 

ನಗರದ ಮೊದಲ ಮಹಿಳಾ ಬಸ್ ಚಾಲಕಿಯಾಗಿರುವ ಶರ್ಮಿಳಾ ಅವರಿಗೆ ‘ಕಮಲ್ ಪನ್ಬಟ್ಟು ಮೈಯಂ’ ವತಿಯಿಂದ ಕಾರೊಂದನ್ನು ನೀಡಲಾಗಿದ್ದು ಇದು ಆಕೆಯನ್ನು ಉದ್ಯಮಿಯಾಗಲು ಅನುವು ಮಾಡಿಕೊಡಲು ಈ ಕಾರನ್ನು ನೀಡಲಾಗಿದೆ ಎಂದು ಮಕ್ಕಳ್ ನಿಧಿ ಮೈಯಂ ಮುಖ್ಯಸ್ಥರಾದ ಕಮಲ್ ಹಾಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಕಮಾಲ್ ಹೇಳಿಕೆ ನೀಡಿ, ” ಆಕೆಯ ವಯಸ್ಸಿನ ಮಹಿಳೆಯರಿಗೆ ಉತ್ತಮ ಉದಾಹರಣೆಯಾಗಿದ್ದ ಶರ್ಮಿಳಾ ಕುರಿತ ಇತ್ತೀಚಿನ ಹಲವು ಚರ್ಚೆಗಳ ಬಗ್ಗೆ ನಾನು ದುಃಖಿತನಾಗಿದ್ದೆ. ಶರ್ಮಿಳಾ ಕೇವಲ ಓರ್ವ ಚಾಲಕಿಯಾಗಿ ಉಳಿಯಬಾರದು, ಆಕೆ ಅನೇಕ ಶರ್ಮಿಳಾರನ್ನು ಸೃಷ್ಟಿಸಬೇಕೆಂಬುದು ನನ್ನ ಬಯಕೆ ಮತ್ತು ನಂಬಿಕೆ. ಆಕೆ ಈಗ ಈ ಕಾರನ್ನು ಬಾಡಿಗೆ ಸೇವೆಗಾಗಿ ಬಳಸುತ್ತಾಳೆ ಮತ್ತು ಮುಂದೆ ಓರ್ವ ಉದ್ಯಮಿಯಾಗುತ್ತಾಳೆ ” ಎಂದು ಹೇಳಿದ್ದಾರೆ.

 

ಕಳೆದ ವಾರ, ಶರ್ಮಿಳಾ ಚಲಾಯಿಸುತ್ತಿದ್ದ ಬಸ್‌ನಲ್ಲಿ ಕನಿಮೊಳಿಯವರು ಗಾಂಧಿಪುರಂನಿಂದ ಕೊಯಮತ್ತೂರಿನ ಪೀಲಮೇಡುವಿಗೆ ಪ್ರಯಾಣಿಸಿದ್ದರು. ಈ ವೇಳೆ ಅವರಿಗೆ ಕಂಡಕ್ಟರ್ ಟಿಕೆಟ್ ನೀಡಿ ದುಡ್ಡು ಪಡೆದಿದ್ದರು. ಅದನ್ನು ಬಸ್ ಚಾಲಕಿ ಶರ್ಮಿಳಾ ವಿರೋಧಿಸಿದ್ದರು. ಆಗ ಕಂಡೆಕ್ಟರ್ ಮತ್ತು ಬಸ್ ಚಾಲಕಿ ಮಧ್ಯೆ ವಾದ ಏರ್ಪಟ್ಟಿತ್ತು. ಡಿಎಂಕೆ ಸಂಸದರನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಕಂಡಕ್ಟರ್ ಜೊತೆಗೆ ವಾಗ್ವಾದ ನಡೆದಿತ್ತು. ಅಲ್ಲದೇ ಪ್ರಚಾರಕ್ಕಾಗಿ ಶರ್ಮಿಳಾ ಈ ರೀತಿ ಮಾಡಿದ್ದಾರೆ ಎಂಬ ಆರೋಪದ ನಂತರ ಚಾಲಕಿ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದರು. ಈಗ ಶರ್ಮಿಳಾಗೆ ಕಾರು ದೊರೆತಿದೆ. ಆಕೆ ಕಾರು ಓಡಿಸಿ ಸ್ವ-ಉದ್ಯೋಗಿ ಆಗ್ತಾಳ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ : 2 ಸಾವಿರ ರೂ. ನೋಟಿನ ಹೊಸ ಅಪ್ಡೇಟ್ !ಈವರೆಗೆ ಎಷ್ಟು ಕೋಟಿ ಹಣ ಬ್ಯಾಂಕ್’ಗೆ ವಾಪಾಸ್ ಬಂದಿದೆ ಗೊತ್ತಾ?

Leave A Reply

Your email address will not be published.