Home Breaking Entertainment News Kannada Tamanna bhatiya: ಬೆಡ್‌ರೂಮ್ ನಲ್ಲಿ ಹಸಿಬಿಸಿ ದೃಶ್ಯಗಳನ್ನು ಮಾಡುವಾಗ ವಿಜಯ್ ವರ್ಮಾ ನಂಗೆ ‘ಆ...

Tamanna bhatiya: ಬೆಡ್‌ರೂಮ್ ನಲ್ಲಿ ಹಸಿಬಿಸಿ ದೃಶ್ಯಗಳನ್ನು ಮಾಡುವಾಗ ವಿಜಯ್ ವರ್ಮಾ ನಂಗೆ ‘ಆ ಫೀಲ್’ ಮಾಡಿಸಿದ – ತಮನ್ನಾ!!

Tamanna bhatiya
Image source- IMDb

Hindu neighbor gifts plot of land

Hindu neighbour gifts land to Muslim journalist

Tamanna bhatiya: ಸೌತ್ ಇಂಡಿಯಾದ(South india) ಖ್ಯಾತ ನಟಿ, ಮಿಲ್ಕಿ ಬ್ಯೂಟಿ(Milky beauty) ತಮನ್ನಾ ಭಾಟಿಯಾ(Tamanna bhatiya) ಸದ್ಯ ತಮ್ಮ ವೈಯಕ್ತಿಕ ವಿಚಾರಗಳಿಂದ ಹಾಗೂ ಹಸಿ ಬಿಸಿ ವಿಡಿಯೋಗಳ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅಲ್ಲದೆ ವಿಜಯ್‌ ವರ್ಮಾ(Vijay varma) ಜೊತೆಗಿನ ಪ್ರೀತಿ ಬಗ್ಗೆಯೂ ಚರ್ಚೆಯಾಗುತ್ತಿದೆ. ಅಂದಹಾಗೆ ಇದೀಗ ನಟಿ ತಮನ್ನಾ ವಿಜಯ್‌ ವರ್ಮಾ ಜೊತೆ ತಾವು ಜೀ ಕರ್ದಾ ವೆಬ್‌ಸಿರೀಸ್‌ನಲ್ಲಿ(Web Series) ಹಸಿಬಿಸಿ ದೃಶ್ಯಗಳಲ್ಲಿ ನಟಿಸುವಾಗ ಯಾವ ಫೀಲ್‌ ಆಗುತ್ತೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹೌದು, ನಟಿ ತಮನ್ನಾ ಭಾಟಿಯಾ ಸದ್ಯ ಲಸ್ಟ್ ಸ್ಟೋರಿ-2(Love story 2)ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಲಸ್ಟ್ ಸ್ಟೋರಿಗಾಗಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಈ ಸೀರಿಸ್‌ಗಾಗಿ ತಮನ್ನಾ ತನ್ನ 18 ವರ್ಷದ ನೋ ಕಿಸ್ಸಿಂಗ್ ದೃಶ್ಯದ(Kissing seen) ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಡ್ ರೂಮ್(Bed room) ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ತಮನ್ನಾ ಅವರನ್ನು ಈ ಪರಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ದೃಶ್ಯಗಳನ್ನು ಮಾಡುವಾಗ ಹೇಗನಿಸಿತು ಎಂದು ತಮನ್ನಾ ಈಗ ಬಹಿರಂಗ ಪಡಿಸಿದ್ದಾರೆ.

ಅಂದಹಾಗೆ ನೆಟ್‌ಫ್ಲಿಕ್ಸ್‌ನಲ್ಲಿ(Netflix) ಈ ಸಿರೀಸ್ ರಿಲೀಸ್ ಆಗಿದೆ. ಈ ಸಿರೀಸ್‌ನಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿದ್ದು, ವಿಜಯ್ ವರ್ಮಾ ಅವರು ತುಂಬ ಸೇಫ್, ಕಂಫರ್ಟ್ ಎನ್ನುವಂತೆ ಫೀಲ್ ಮಾಡಿಸಿದ್ದಾರೆ. ಕಲಾವಿದರಾಗಿ ಈ ಭಾವ ಬರೋದು ತುಂಬ ಮುಖ್ಯ ಆಗತ್ತೆ ಎಂದು ತಮನ್ನಾ ಹೇಳಿದ್ದಾರೆ.

ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅವರು ‘ನನಗೆ ನಟನ ಸುತ್ತ ಇದ್ದಾಗ ಎಂದೂ ಸೇಫ್ ಅಂತ ಅನಿಸಿರಲಿಲ್ಲ. ಕಲಾವಿದರಿಗೆ ಇದು ತುಂಬ ಮುಖ್ಯವಾಗುತ್ತದೆ. ನಮಗೆ ಈ ರೀತಿ ಸುರಕ್ಷಾ ಭಾವನೆ ಬರಬೇಕು. ಈ ರೀತಿ ಸಿನಿಮಾಗಳಲ್ಲಿ ಈ ವಿಷಯ ಸಿಕ್ಕಾಪಟ್ಟೆ ಮುಖ್ಯ ಆಗುತ್ತದೆ. ನಟಿಸಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ವಿಜಯ್ ವರ್ಮ ಅವರು ನಾನು ನಟಿಸಲು ಏನೋ ಮಾಡೋದಿಕ್ಕೆ ಅಥವಾ ಹೇಳೋದಿಕ್ಕೆ ಸೇಫ್ ಎನ್ನುವಂತಹ ಭಾವ ಮೂಡುವಂತೆ ಮಾಡಿದರು. ಅವರಿಂದ ನನ್ನ ನಟನೆ ಸುಲಭ ಆಯ್ತು. ಅದನ್ನೇ ನಾನು ಅವರಲ್ಲಿ ಇಷ್ಟಪಡೋದು” ಎಂದು ತಮನ್ನಾ ಭಾಟಿಯಾ ಹೇಳಿಕೊಂಡಿದ್ದಾರೆ.

ಇನ್ನು 2023ರ ಜನವರಿಯಲ್ಲಿ ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸುವ ವೇಳೆ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಅವರು ಗೋವಾದಲ್ಲಿ ಲಿಪ್ ಕಿಸ್(Lip kiss) ಮಾಡಿ ಪಾರ್ಟಿ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇವರಿಬ್ಬರು ಕೆಲ ಬಾರಿ ಒಟ್ಟಿಗೆ ಕಾಣಿಸಿಕೊಂಡಾಗ ಆರಂಭದಲ್ಲಿ ಸ್ನೇಹಿತರು ಎಂದು ಹೇಳಿ ಜಾರಿಕೊಳ್ಳುತ್ತಿದ್ದ ಈ ಜೋಡಿ ಇತ್ತೀಚೆಗೆ ರಿಲೇಶನ್‌ಶಿಪ್‌ನಲ್ಲಿರೋದು ಸತ್ಯ ಎಂದು ಹೇಳಿತ್ತು

ಅಲ್ಲದೆ ಇತ್ತೀಚೆಗಷ್ಟೆ ಫಿಲ್ಮ್ ಕಂಪ್ಯಾನಿಯನ್(Film campain) ಜೊತೆ ಮಾತನಾಡಿದ ನಟಿ ತಮನ್ನಾ ಭಾಟಿಯಾ ವಿಜಯ್ ವರ್ಮಾ ಬಗ್ಗೆ ಬಹಿರಂಗ ಪಡಿಸಿದ್ದರು. ‘ಅವರು (ವಿಜಯ್ ವರ್ಮಾ) ನಾನು ತುಂಬಾ ಬಾಂಧವ್ಯ ಹೊಂದಿದ ವ್ಯಕ್ತಿ. ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ವೈಯಕ್ತಿಕವಾಗಿದೆ. ಆ ವ್ಯಕ್ತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ’ ಎಂದಿದ್ದರು.

 

ಇದನ್ನು ಓದಿ: Bengaluru: ಕಾಲೇಜು ವಿದ್ಯಾರ್ಥಿ ಮೇಲೆ ಲಾಂಗ್ ನಿಂದ ಹಲ್ಲೆ! ಈ ಘಟನೆ ಹಿಂದೆ ಇದೆಯೇ ಹೆಣ್ಣೊಬ್ಬಳ ವಿಷಯ?!