Home International Submarine missing: ಟೈಟಾನಿಕ್ ಅವಶೇಷ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ!!

Submarine missing: ಟೈಟಾನಿಕ್ ಅವಶೇಷ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ!!

Submarine missing
Image source- Wikipedia

Hindu neighbor gifts plot of land

Hindu neighbour gifts land to Muslim journalist

Submarine missing: ಟೈಟಾನಿಕ್(Titanic) ಹಡಗಿನ ಅವಶೇಷಗಳನ್ನು ನೋಡಲು ಜನರನ್ನು ಕರೆದೊಯ್ಯಲು ಬಳಸಲಾಗುವ ಜಲಾಂತರ್ಗಾಮಿ(Submarine) ಅಟ್ಲಾಂಟಿಕ್ ಸಾಗರದಲ್ಲಿ ಸೋಮವಾರ ನಾಪತ್ತೆಯಾಗಿದೆ.

ಹೌದು, ಟೈಟಾನಿಕ್ (Titanic) ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ (Submarine missing) ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ ಎಂದು ವರದಿಯಾಗಿದ್ದು, ನಾಪತ್ತೆಯಾಗಿರುವ ಸಬ್‌ಮರಿನ್‌ ಪತ್ತೆ ಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಜಲಾಂತರ್ಗಾಮಿಯಲ್ಲಿ ಎಷ್ಟು ಜನರಿದ್ದರು ಎಂಬುದರ ಬಗ್ಗೆ ಪ್ರಸ್ತುತ ಮಾಹಿತಿ ಲಭ್ಯವಾಗಿಲ್ಲ.

ಅಂದಹಾಗೆ ಅಮೆರಿಕದ(America)ಕರಾವಳಿ ಕಾವಲು ಪಡೆಯ ಮಾಹಿತಿ ಪ್ರಕಾರ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್(oceangeat expeditions)ಕಂಪನಿಗೆ ಸೇರಿದ್ದು, ಅದರಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನು ಕೂಡಾ ಸ್ಪಷ್ಟವಾಗಿಲ್ಲ. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಅಲ್ಲದೆ ಈ ಜಲಾಂತರ್ಗಾಮಿ ಒಂದು ಬಾರಿ 5 ಜನರನ್ನು ಹೊತ್ತೊಯ್ಯಬಹುದು ಎನ್ನಲಾಗಿದ್ದು ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸುವ ಪೂರ್ಣ ಡೈವ್ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೂಡ ತಿಳಿಸಿದೆ.

ಬೆಲ್‌ಫಾಸ್ಟ್‌ನ ಹಾರ್ಲಂಡ್ ಅಂಡ್ ವುಲ್ಫ್ ಸಂಸ್ಥೆ ನಿರ್ಮಿಸಿದ್ದ ಟೈಟಾನಿಕ್, ಅತ್ಯಂತ ದೊಡ್ಡ ಹಾಗೂ ವೈಭವೋಪೇತ ಹಡಗುಗಳಲ್ಲಿ ಅಗ್ರಸ್ಥಾನ ಪಡೆದಿದ್ದು, ‘ವೈಟ್ ಸ್ಟಾರ್ ಲೈನ್’ ಎಂಬ ಸಂಸ್ಥೆಯ ಒಡೆತನದಲ್ಲಿತ್ತು. ಇಂತಹ ಬೃಹತ್ ಹಡಗು 1912 ರಂದು, ಏಪ್ರಿಲ್ 14-15ರ ಮಧ್ಯರಾತ್ರಿ ನ್ಯೂಫೌಂಡ್‌ಲ್ಯಾಂಡಿನ ತೀರದಿಂದ ಸುಮಾರು 640 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣದಲ್ಲಿ ನೀರ್ಗಲ್ಲೊಂದಕ್ಕೆ ಡಿಕ್ಕಿ ಹೊಡೆದು ಮೂರು ಗಂಟೆಗಳೊಳಗೆಯೇ, ಅಂದರೆ ಏಪ್ರಿಲ್ 15ರ ಮುಂಜಾನೆ 2.20ರ ಸಮಯದಲ್ಲಿ ಸುಮಾರು 1500 ಪ್ರಯಾಣಿಕರೊಡನೆ ಸಂಪೂರ್ಣವಾಗಿ ಮುಳುಗಿಹೋಯಿತು.

‘ಮುಳುಗಲಾರದ ಹಡಗು’ ಎಂದು ಹೆಸರುವಾಸಿಯಾಗಿದ್ದ ಟೈಟಾನಿಕ್ ಮುಳುಗುವುದು ಅಸಾಧ್ಯ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಅದು ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋಗಿರುವುದು ಇಂದಿಗೂ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಟೈಟಾನಿಕ್ ನಿರ್ಮಿಸಿದ ನಂತರ ಇದು ಕೂಡ ಭೂಮಿಯ ಮೇಲಿನ ಒಂದು ಭಾಗದಂತಿತ್ತು. ಟೈಟಾನಿಕ್ ನಮ್ಮ ಜೊತೆ ಇದ್ದದ್ದು ಅಲ್ಪಾವಧಿಯಾದರೂ, ಯಾವುದಾದರೊಂದು ಹಂತದಲ್ಲಿ ಟೈಟಾನಿಕ್ ಬಗ್ಗೆ ಈಗಲೂ ನಾವು ಮೆಲುಕು ಹಾಕುತ್ತಿರುತ್ತೇವೆ.

ಇದನ್ನೂ ಓದಿ: MARAKKAR: ಅಬ್ಬಬ್ಬಾ… ಅಟ್ಟರ್ ಫ್ಲಾಪ್ ಆಗುತ್ತೆ ಅಂದ್ಕೊಂಡ್ರೆ ರಿಲೀಸ್ಗೂ ಮೊದ್ಲೇ 100 ಕೋಟಿ ಬಾಚಿ ಬಿಡ್ತು ಈ ಸೌತ್ ಸಿನಿಮಾ!!