Chamarajanagar: ಹೆಣ್ಮಕ್ಳೆ ಸ್ಟ್ರಾಂಗು ಗುರು.. ! ಡ್ರೈವರ್ ಸೀಟ್ ಮೂಲಕ ಬಸ್ ಹತ್ತಿದ ಲೇಡಿಸ್
Congress guarantee Free bus travel effect for women ladies boarded the bus through driver seat in chamrajnagar
Free bus travel effect : ಕರ್ನಾಟಕಲ್ಲಿ ಕಾಂಗ್ರೆಸ್ ಸರ್ಕಾರ ʻಶಕ್ತಿ ಯೋಜನೆʼಯಡಿ ಉಚಿತ ಬಸ್ ಜಾರಿಯಾದ ತಂದ ಬೆನ್ನಲ್ಲೆ ಸೀಟಿಗಾಗಿ ಡ್ರೈವರ್ ಸೀಟ್ನ ಡೋರ್ ಮೂಲಕ ಏರಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಉಚಿತ ಸಾರಿಗೆ ಬಸ್ (Free bus travel effect) ಜಾರಿಗೆ ತಂದ ಮರು ದಿನದಿಂದಲೇ ಬಸ್ಸಿಗಾಗಿ ರಾಜ್ಯಾದ್ಯಂತ ಮುಗಿಬೀಳುತ್ತಿದ್ದಾರೆ ಎಂಬ ಸುದ್ದಿ ವರದಿಯಾಗುತ್ತಿದೆ. ಉಚಿತ ಸಾರಿಗೆ ಬಸ್ಸಿನಲ್ಲಿ ಮಹಿಳೆಯರದ್ದೇ ಕಾರುಬಾರ್ ಆಗಿದ್ದು, ನೂಕುನುಗ್ಗಲು ಶುರುವಾಗಿದೆ.
ಉಚಿತ ಬಸ್ ನೆಪದಲ್ಲಿ ಬಸ್‌ನಲ್ಲಿ ಓಡಾಡೋದಕ್ಕೆ ಮುಹಿಳಾ ಮಣಿಗಳು ರಾಜ್ಯದ ಕೆಲ ಭಾಗಗಳಿಗೆ ಸಂಚಾರಕ್ಕೆ ತೆರಳುವುದು ಹೆಚ್ಚಾಗಿದೆ. ಅದರಲ್ಲೂ ಮುಖ್ಯ ರಾಜ್ಯದ ಧಾರ್ಮಿಕ ಕೇತ್ರಗಳಾದ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಶೃಂಗೇರಿ, ಮೈಸೂರು, ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಾಗಿ ತೆರಳುತ್ತಿದ್ದಾರೆ.
ಉಚಿತ ಬಸ್ ಪ್ರಯಾಣ ಜಾರಿಗೆಯಾದ ಬೆನ್ನಲ್ಲೆ ಬಸ್ಸು ತುಂಬೆಲ್ಲ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರು ಹರಸಾಹಸ ಪಡುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಓರ್ವ ಮಹಿಳೆ ಬಸ್ ಹೆಚ್ಚು ರಶ್ ಆಗಿದೆ ಎಂದು ಡ್ರೈವರ್ ಸೀಟ್ನ ಡೋರ್ ಮೂಲಕ ಬಸ್ ಏರಿದ್ದು, ಹೆಣ್ಮಕ್ಳೇನು ಕಮ್ಮಿಯಿಲ್ಲ ಸ್ಟ್ರಾಂಗು ಗುರು.. ಎನ್ನುವಂತಹ ಘಟನೆ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಉಚಿತ ಬಸ್ ಮಹಿಳೆಯರು ಅನುಕೂಲಕ್ಕೆ ಪೂರಕವಾಗಿದೆ ಎಂದರೇ ತಪ್ಪಗಲಾರದು.
ಇದನ್ನೂ ಓದಿ: ಚಾಲಕನ ನಿರ್ಲಕ್ಷ್ಯದಿಂದ ಏರ್‌ಪೋರ್ಟ್‌ನಲ್ಲಿ ಬಸ್ ಕಂಬಕ್ಕೆ ಡಿಕ್ಕಿ; 10ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ