Viral video: ಜೊತೆ ಸೇರಿದ 1954 ನೇ ಇಸವಿಯ 10 ನೇ ಕ್ಲಾಸಿನ ಕ್ಲಾಸ್ ಮೇಟ್ಸ್: ಏನ್ ಉತ್ಸಾಹ, ಏನ್ ಮಸ್ತಿ ? ವಿಡಿಯೋ ಸಕತ್ ವೈರಲ್ !
Social media viral video Watch Class 10 student of 1954 batch dance at their reunion at Pune Video goes viral
Viral video : ಹತ್ತನೇ ಕ್ಲಾಸಿನ ಮಕ್ಕಳು ಒಂದೆಡೆ ಸೇರಿ ಪಾರ್ಟಿ ಮಾಡಿ ಹಾಡಿ ಕುಣಿದಿದ್ದಾರೆ. ಅದೇನು. ವಿಶೇಷ ಅನ್ನಬೇಡಿ, ಇಲ್ಲೊಂದು ವಿಶೇಷವಿದೆ. ಅಲ್ಲಿ ಸೇರಿದವರು 10 ನೇ ಕ್ಲಾಸ್ ಮೇಟ್ ಗಳೇ. ಆದರೆ ಅದ್ಯಾವ ಬ್ಯಾಚ್ ನ ಅಂತ ಕೇಳಿದ್ರೆ ನೀವು ಅಚ್ಚರಿ ಪಡ್ತೀರ.
ಹೌದು, ಪುಣೆಯ ಶಾಲೆಯೊಂದರ ಹಳೆಯ ವಿದ್ಯಾರ್ಥಿಗಳು ಅದೂ 1954 ರ ಇಸವಿಯ ಹತ್ತನೇ ತರಗತಿ ತೇರ್ಗಡೆಗೊಂಡವರು ಇತ್ತೀಚೆಗೆ ಒಂದೆಡೆ ಸೇರಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೇರಿ ಸಂಭ್ರಮ ಆಚರಿಸಿಕೊಂಡಿದ್ದಾರೆ. ಈಗ ಅದರ ವೀಡಿಯೋ ಒಂದು ಈಗ ವೈರಲ್ (Viral video) ಆಗಿದೆ.
ಈ ಕಿರಿಯ ಪೋಕರಿ ಮನಸ್ಸಿನ, ಹಿರಿಯ ಜೀವಿಗಳು ಹೀಗೆ ಒಂದೆಡೆ ‘ರೀಯೂನಿಯನ್’ ನೆಪದಲ್ಲಿ ಭೇಟಿ ಆಗಿದ್ದಾರೆ. ಅವರು ಅಲ್ಲಿ ತಾವು ಕಳೆದ ಶಾಲಾ ದಿನಗಳ ಹಲವು ನೆನಪುಗಳನ್ನು ಮೆಲುಕು ಹಾಕುತ್ತಾ, ಕುಲುಕಿ ನಗುತ್ತಾ, ಹಾಡಿ ಕುಣಿದಾಡಿದ್ದಾರೆ. ಅವರ ಭಾರೀ ಲವಲವಿಕೆಯ ಜೋಶ್ ನಲ್ಲಿ ಕುಣಿಯುತ್ತಿರುವ ವಿಡಿಯೋ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.
ಅವರು ಮುಖೇಶ್ ಕುಮಾರ್ ಹಾಡಿರುವ ‘ಕಿಸೀ ಕೀ ಮುಸ್ಕುರಾತೋಂ ಪೇ’ ಎಂಬ ಹಾಡಿಗೆ ನರ್ತಿಸಿದ್ದು, ‘ಸೂಪರ್ ಸಾಂಗ್ ಸೆಲೆಕ್ಷನ್, ಹಾಪ್ಪಿನೆಸ್ ಓವರ್ ಲೋಡೆಡ್ ‘ ಎಂದಿದ್ದಾರೆ ಓರ್ವ ಟ್ವಿಟ್ಟರ್ ಬಳಕೆದಾರರು. ಅದು ಹೇಗೆ ಇವರೆಲ್ಲ 70 ವರ್ಷದ ನಂತರ ಸೇರಿದರು ಎಂದು ಆಶ್ಚರ್ಯ ಆಗ್ತಿದೆ ಎಂದು ಇನ್ನೊಬ್ಬರು ಚಕಿತರಾಗಿ ಉದ್ಘರಿಸಿದ್ದಾರೆ. ‘ ಪುಣೆಯ ತುಂಬಾ ಇಂತಹಾ ಯುವಕರೇ ಇರೋದು’ ಎಂದು ಇನ್ನೊಬ್ಬರು. ತಮಾಷೆ ಮಾಡಿದ್ದಾರೆ. “ಆ ದಿನಗಳಲ್ಲಿ ಹತ್ತನೇ ತರಗತಿಯನ್ನು ಎಸ್‌ಎಸ್‌ಸಿ ಎನ್ನುತ್ತಿದ್ದರು ಅಂದುಕೊಳ್ಳುತ್ತೇನೆ. ಇವರ ಜೀವನೋತ್ಸಾಹ ಜೋರಾಗಿದೆ. ಅವರಿಗೆ ಉತ್ತಮ ಆರೋಗ್ಯದೊಂದಿಗೆ ದೇವರು ಹರಸಲಿ,” ಎಂದು ಮಗದೊಬ್ಬ ಬಳಕೆದಾರ ಅವರ ಜೀವನ ಪ್ರೀತಿ ಮತ್ತು ಲವಲವಿಕೆಯನ್ನು ಕೊಂಡಾಡಿದ್ದಾರೆ.
Viral | 10th Class Students
from 1954 Get-together for a union at Pune. pic.twitter.com/TBMklWmoxy— MUMBAI NEWS (@Mumbaikhabar9) June 12, 2023
ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರ ಆದ ಪಾಕಿಸ್ತಾನ್ ಸೋಷಿಯಲ್ ಮೀಡಿಯಾ ಸ್ಟಾರ್ ಶಯಾನ್ ಅಲಿ