Uttar pradesh: ಮೋದಿ, ಯೋಗಿಯನ್ನು ಹೊಗಳಿದಕ್ಕೆ ಕಾರು ಹರಿಸಿ ಪ್ರಯಾಣಿಕನನ್ನೇ ಕೊಂದ ಕ್ಯಾಬ್ ಡ್ರೈವರ್!!

Uttar Pradesh crme news UP man killed by cab driver for supporting PM Modi CM Yogi Adityanath

Uttar pradesh Crime: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) ಅವರನ್ನು ಹೊಗಳಿದಕ್ಕಾಗಿ ಕ್ಯಾಬ್ ಚಾಲಕನೊಬ್ಬ (Cab Driver) ತನ್ನ ಪ್ರಯಾಣಿಕನನ್ನೇ ಕೊಂದಿದ್ದಾನೆ.

ಹೌದು, ಉತ್ತರ ಪ್ರದೇಶದ(Uttar pradesh Crime) ಮಿರ್ಜಾಪುರದಲ್ಲಿ(Mirjapura) ಕಾರಿನಲ್ಲಿ ಪ್ರಯಾಣಿಸುವಾಗ ಟೈಮ್ ಪಾಸ್ಗಾಗಿ ಮಾಡಿದ ಪುಟ್ಟ ರಾಜಕೀಯ ಚರ್ಚೆಯೊಂದು ಮಾರಣಾಂತಿಕವಾಗಿ ಪರಿಣಮಿಸಿದೆ. ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ(PM modi) ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು(UP CM Yogi adityanath) ಬೆಂಬಲಿಸಿ ಮಾತನಾಡಿದ್ದಕ್ಕಾಗಿ ಕ್ಯಾಬ್‌ ಡ್ರೈವರ್(cab driver) ತನ್ನ ಪ್ರಯಾಣಿಕನನ್ನೇ ಕೊಲೆ ಮಾಡಿದ್ದಾನೆ. ಈ ದುಷ್ಕೃತ್ಯ ಎಸಗಿದ ಚಾಲಕನನ್ನು ಸದ್ಯ ಪೊಲೀಸರು (Police) ಬಂದಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಅಂದಹಾಗೆ ಮೃತನನ್ನು 52 ವರ್ಷದ ರಾಜೇಶ್ ಧಾರ್ ದುಬೆ(Rajesh dhar dube) ಎಂದು ಗುರುತಿಸಲಾಗಿದೆ. ರಾಜೇಶ್ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುವ ಸಂದರ್ಭದಲ್ಲಿ ವಬಾಹನದಲ್ಲಿದ್ದ ಇತರೆ ಪ್ರಯಾಣಿಕರ ಜೊತೆ ರಾಜಕೀಯದ ಬಗ್ಗೆ ಚರ್ಚೆ ನಡೆಸಿಕೊಂಡು ಬಂದಿದ್ದಾರೆ. ಹೀಗೆ ಚರ್ಚೆಯ ವೇಳೆ ರಾಜೇಶ್, ಮೋದಿ ಹಾಗೂ ಯೋಗಿಯನ್ನು ಹಾಡಿ ಹೊಗಳಿದ್ದಾರೆ.

ಇದರಿಂದ ಸಿಟ್ಟುಗೊಂಡ ಕ್ಯಾಬ್ ಚಾಲಕ ಅಮ್ಜದ್, ರಾಜೇಶ್ ಹೊಗಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದರಿಂದ ಕೋಪಗೊಂಡ ರಾಜೇಶ್, ಮೋದಿ, ಯೋಗಿ ಬಗ್ಗೆ ಮತ್ತೆ ಹೊಗಳಿ ಮಾತನಾಡಲು ಶುರು ಮಾಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಅಮ್ಜದ್, ರಾಜೇಶ್‍ನನ್ನು ವಾಹನದಿಂದ ತಳ್ಳಿದ್ದಾನೆ.ಶೀ ವೇಳೆ ವಾಹನದ ಸೈಡ್ ಮಿರರ್ ಹಿಡಿದು ಒಳಗೆ ಬರಲು ರಾಜೇಶ್ ಪ್ರಯತ್ನಿಸಲು ಮುಂದಾದಾಗ ಚಾಲಕ ವೇಗವಾಗಿ ವಾಹನ ಚಾಲನೆ ಮಾಡಿದ್ದಾನೆ. ಪರಿಣಾಮ ವಾಹನದಡಿ ಸಿಲುಕಿ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಾಗಿದ್ದರೂ, ಯುಪಿ ಪೊಲೀಸರು ಚಾಲಕ ಅಮ್ಜದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಚಾಲಕ ಅಮ್ಜದ್‌ ಪರಾರಿಯಾಗಿದ್ದಾರೆ. ಈ ನಡುವೆ, ರಾಜೇಶ್‌ ದುಬೆ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದು, ಮಿರ್ಜಾಪುರ-ಪ್ರಯಾಗರಾಜ್ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಮಿರ್ಜಾಪುರ ಪೊಲೀಸರು ಮಂಗಳವಾರದ ವೇಳೆಗೆ ಕ್ಯಾಬ್‌ ಚಾಲಕ ಅಮ್ಜದ್‌ನಲ್ಲಿ ಬಂಧಿಸಲು ಯಶಸ್ವಿಯಾಗಿದ್ದಾರೆ.

Leave A Reply

Your email address will not be published.