Manipura: ರೋಗಿಯನ್ನು ಹೊತ್ತೊಯ್ಯುತ್ತಿದ್ದ ಅಂಬುಲೆನ್ಸ್‌ಗೆ ಬೆಂಕಿಯಿಟ್ಟ ಜನ- 8ರ ಬಾಲಕ, ತಾಯಿ ಸುಟ್ಟು ಭಸ್ಮ!!

Crime news Manipur news Manipur 8 year old boy and mother killed after mob sets ambulance on fire

Share the Article

Manipur: ತಲೆಗೆ ಗುಂಡೇಟು ಬಿದ್ದು ಗಾಯಗೊಂಡಿದ್ದ 8 ವರ್ಷದ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಜನರ ಗುಂಪೊಂದು ಅಂಬುಲೆನ್ಸ್‌ಗೆ(Ambulance) ಬೆಂಕಿ ಹೆಚ್ಚಿದ್ದು, ಇದರಿಂದ ಅಂಬೈಲೆನ್ಸ್ ಒಳಗಿದ್ದ ಬಾಲಕ ಮತ್ತು ಆತನ ತಾಯಿ ಹಾಗೂ ಅವರ ಸಂಬಂಧಿಯೊಬ್ಬರು ಸುಟ್ಟು ಭಸ್ಮವಾಗಿರುವಂತಹ ಮನ ಮಿಡಿಯುವ ಘಟನೆ ಮಣಿಪುರುದಲ್ಲಿ(Manipur) ನಡೆದಿದೆ.

ಹೌದು, ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipur Violence) ಜನಾಂಗೀಯ ದ್ವೇಷ, ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಫೆಲ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂಫಾಲ್ ಪಶ್ಚಿಮದ ಇರೊಸೆಂಬಾ ಪ್ರದೇಶದಲ್ಲಿ ಭಾನುವಾರ ಅಂಬುಲೆನ್ಸ್‌ಗೆ ಬೆಂಕಿ ಹಚ್ಚಲಾಗಿದ್ದು, 8 ವರ್ಷದ ಬಾಲಕ ಟೋನ್ಸಿಂಗ್ ಹ್ಯಾಂಗ್ಸಿಂಗ್(Tonsing hyangsing) ಎಂಬ ಬಾಲಕನ ಹಾಗೂ ಆತನ ತಾಯಿ ಮೀನಾ ಹ್ಯಾಂಗ್ಸಿಂಗ್(Meena hangsing) ಮತ್ತು ಅವರ ಸಂಬಂಧಿ ಲಿಡಿಯಾ ಲೌರೆಂಬಮ್ ಅಂಬೈಲೆನ್ಸ್ ಒಳಗೆ ಸುಟ್ಟು ಭಸ್ಮವಾಗಿದ್ದಾರೆ.

ಅಂದಹಾಗೆ ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆ ವಿರೋಧಿಸಿ ಮೇ 3 ರಂದು ಗುಡ್ಡಗಾಡು ಜಿಲ್ಲೆಗಳಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಇದಾದ ನಂತರ ಮಣಿಪುರದಲ್ಲಿ ಘರ್ಷಣೆ ಭುಗಿಲೆದ್ದಿದೆ. ಮೈತೇಯಿ ಮತ್ತು ಕುಕಿ(Kuki) ಸಮುದಾಯಗಳ ನಡುವೆ ಘರ್ಷಣೆ ನಡೆಯುತ್ತಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಘಟನೆಯನ್ನು ನೋಡುವುದಾದರೆ ಅಂಬುಲೆನ್ಸ್‌ ಬೆಂಕಿ ದುರಂತದಲ್ಲಿ ಮೃತಪಟ್ಟ ಮಹಿಳೆ ಮೈತೇಯಿ ಸಮುದಾಯಕ್ಕೆ ಸೇರಿದವರು. ಆಕೆ ಮದುವೆಯಾಗಿರುವ ವ್ಯಕ್ತಿ ಕುಕಿ ಸಮುದಾಯಕ್ಕೆ ಸೇರಿದಾತ. ಇವರಿಗೆ 8 ವರ್ಷ ವಯಸ್ಸಿನ ಮಗನಿದ್ದ. ಈ ದಂಪತಿ ಮಗ ಕಾಂಗ್‌ಚುಪ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದ. ಶಿಬಿರದಲ್ಲಿ ಮತ್ತು ಸುತ್ತಮುತ್ತ ಭದ್ರತೆ ಬಲಪಡಿಸಲಾಗಿತ್ತು. ಆದರೆ ಭಾನುವಾರ ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದು ಬಾಲಕನ ತಲೆಗೆ ಬುಲೆಟ್‌ ಹೊಕ್ಕಿ ಗಾಯಗೊಂಡಿದ್ದ.

ಈ ವೇಳೆ ಅಸ್ಸಾಂ ರೈಫಲ್ಸ್ ಹಿರಿಯ ಅಧಿಕಾರಿಯೊಬ್ಬರು(Rifal Officer’s)ತಕ್ಷಣವೇ ಇಂಫಾಲ್‌ನಲ್ಲಿ ಪೊಲೀಸರೊಂದಿಗೆ ಮಾತನಾಡಿ ಅಂಬುಲೆನ್ಸ್‌ ವ್ಯವಸ್ಥೆ ಮಾಡಿದರು. ತಾಯಿ ಬಹುಸಂಖ್ಯಾತ ಸಮುದಾಯದವಳಾಗಿದ್ದರಿಂದ ಬಾಲಕನನ್ನು ರಸ್ತೆಯ ಮೂಲಕ ಇಂಫಾಲ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆ ಸಮಯದಲ್ಲಿ ಐಸೊಸೆಂಬಾದಲ್ಲಿ ನಾಗರಿಕರು ಅಂಬುಲೆನ್ಸ್‌ನ್ನು ಸುಟ್ಟು ಹಾಕಿದರು. ವಾಹನದಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: V Somanna: ಅಸೆಂಬ್ಲಿ ಎಲೆಕ್ಷನಲ್ಲಿ ತಿಂದ ಪೆಟ್ಟೇ ಸಾಕು, ಇನ್ನು ಲೋಕಸಭೆಯದ್ದು ಬೇಡ ದೇವ್ರೆ…!! ಲೋಕಸಭಾ ಚುನಾವಣೆ ಸ್ಪರ್ಧೆ ವದಂತಿ ಕುರಿತು ಸೋಮಣ್ಣ ಕಿಡಿ!!

Leave A Reply