ಕಬಳಿಸಿದ ಹೆಬ್ಬಾವು: ‘ ಹಾವು ಸರ್ಕಾರಕ್ಕೆ ಸೇರಿದ್ದು ಅಂತೀರಾ, ಆ ಕೋಳಿಗಳು ನನ್ನದು, ನನಗೆ ಪರಿಹಾರ ಕೊಡಿ ‘ ಎಂದು ಪಟ್ಟು ಹಿಡಿದ ರೈತ

Kerala man urged the government to compensate him for the death of his chickens

Kerala: ಕೊಚ್ಚಿ: ಹೆಬ್ಬಾವು ಬಾಯಿಗೆ ತುತ್ತಾದ ತನ್ನ ಕೋಳಿಗಳ ಸಾವಿಗೆ ಸರಕಾರ ಪರಿಹಾರ ನೀಡಬೇಕೆಂದು ವ್ಯಕ್ತಿಯೊಬ್ಬ ಸರ್ಕಾರವನ್ನು ಒತ್ತಾಯಿಸಿದ್ದು, ವಿಚಿತ್ರ ಕಾರಣ ನೀಡಿ ಆತ ಪರಿಹಾರ ಕೇಳಿದ ಘಟನೆ ಕೇರಳದಿಂದ (Kerala)  ವರದಿಯಾಗಿದೆ.

ಕಾಸರಗೋಡು ನಿವಾಸಿ ಕೆ.ವಿ. ಜಾರ್ಜ್ ಎಂಬುವರು ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಅದಾಲತ್ನಲ್ಲಿ ಭಾಗವಹಿಸಿದ್ದ ಜಾರ್ಜ್, ನನ್ನ ಎಲ್ಲ ಕೋಳಿಗಳು ಹೆಬ್ಬಾವಿಗೆ ಆಹಾರವಾಗಿವೆ. ಇದರಿಂದ ನನಗೆ ಭಾರೀ ನಷ್ಟವಾಗಿದ್ದು, ಪರಿಹಾರ ನೀಡುವಂತೆ ಕೇಳಿದ್ದಾರೆ. ಹಾವುಗಳು ಸರ್ಕಾರಕ್ಕೆ ಸೇರಿದ್ದು ಎಂದಾದರೆ, ಕೋಳಿಗಳು ನನಗೆ ಸೇರಿದ್ದಾಗಿವೆ. ಹೀಗಾಗಿ ನೀವು ನನಗೆ ಪರಿಹಾರ ನೀಡಲೇಬೇಕು ಎಂದು ಜಾರ್ಜ್​ ಪಟ್ಟು ಹಿಡಿದಿದ್ದಾರೆ.

ಕೇರಳದ ವೆಳ್ಳರಿಕುಂಡುನಲ್ಲಿ ನಡೆದ ತಾಲೂಕು ಮಟ್ಟದ ಅದಾಲತ್‌ನಲ್ಲಿ ಕೋಳಿಗಳ ಪರಿಹಾರ ವಿಚಾರ ಪ್ರಸ್ತಾಪವಾಗಿತ್ತು. ಅಲ್ಲಿನ ತಾಲ್ಲೂಕು ಮಟ್ಟದ ಅದಾಲತ್ ನಲ್ಲಿ ಸಚಿವ ಅಹಮ್ಮದ್ ದೇವರಕೋವಿಲ್, ಜಿಲ್ಲಾಧಿಕಾರಿ ಮತ್ತು ಸಬ್ ಕಲೆಕ್ಟರ್‌ಗಳು ಭಾಗವಹಿಸಿದ್ದರು.

2022ರ ಜೂನ್​ನಲ್ಲಿ ಒಂದು ದಿನ ಬೆಳಗ್ಗೆ ಕೋಳಿಯ ಗೂಡನ್ನು ತೆರೆದಾಗ, ಅದರಲ್ಲಿದ್ದ ಎಲ್ಲ ಕೋಳಿಗಳು ನಾಪತ್ತೆಯಾಗಿದ್ದವು. ಗೂಡಿನ ಒಳಗೆ ಹೆಬ್ಬಾವು ಇತ್ತು. ಬಳಿಕ ಅರಣ್ಯಾಧಿಕಾರಿಗಳು ನಮ್ಮ ಮನೆಗೆ ಬಂದು ಹಾವನ್ನು ಹಿಡಿದುಕೊಂಡು ಹೋಗಿ ಮತ್ತೆ ಅರಣ್ಯಕ್ಕೆ ಬಿಟ್ಟರು. ನಾವು ಹಾವುಗಳ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದೆವು. ಆದರೆ, ಅರಣ್ಯ ಇಲಾಖೆಯು ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ನಮಗೆ ತುಂಬಾ ನಷ್ಟವಾಗಿದೆ. ಅಲ್ಲದೇ ಹಾವುಗಳು, ಪ್ರಾಣಿಗಳು, ಜಂತುಗಳು ಸರ್ಕಾರದ ಸ್ವತ್ತು ಅಂತೀರಾ. ಹೀಗಾಗಿ ಸರ್ಕಾರದಿಂದ ನನಗೆ ತೊಂದರೆ ಆಗಿದೆ. ಅದಕ್ಕಾಗಿ ಪರಿಹಾರ ನೀಡಿ ಎಂದು ಅವರು ಒತ್ತಾಯ ಮಾಡಿದ್ದಾರೆ.

” ಹಾವುಗಳು ಸರ್ಕಾರಕ್ಕೆ ಸೇರಿದ್ದು ಎಂದಾದರೆ, ಕೋಳಿಗಳು ನನಗೆ ಸೇರಿದ್ದಾಗಿವೆ. ಹೀಗಾಗಿ ನೀವು ನನಗೆ ಪರಿಹಾರ ನೀಡಲೇಬೇಕು ” ಎಂದು ಜಾರ್ಜ್​ ಪಟ್ಟು ಹಿಡಿದಿದ್ದಾರೆ. ಕೋಳಿಯ ಮಾಲೀಕ ಜಾರ್ಜ್​ ಬೇಡಿಕೆಗೆ ಸಚಿವರು ಹಾಗೂ ಅಧಿಕಾರಿಗಳು ಮೌಖಿಕ ಒಪ್ಪಿಗೆ ನೀಡಿದ್ದು, ಪರಿಸ್ಥಿತಿಯನ್ನು ನೋಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮನೆಯ ಹೊರಗೆ ಜನಮನ್ನಣೆ ಹೆಚ್ಚುವುದು ಇಂದು ಈ ರಾಶಿಯವರಿಗೆ!

Leave A Reply

Your email address will not be published.