KL Rahul in StripClub: ಲಂಡನ್​ನಲ್ಲಿ ಅರೆನಗ್ನ ಡ್ಯಾನ್ಸ್​ ಮಾಡುವ ಸ್ಟ್ರಿಪ್​​​ಕ್ಲಬ್​ಗೆ ಹೋದ ರಾಹುಲ್​​​! ಏನಂದ್ರು ಪತ್ನಿ ಆಥಿಯಾ?!

Athiya Shetty reacts KL Rahul's video from London strip club

KL Rahul in StripClub: ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್​ ರಾಹುಲ್ ಗಂಭೀರವಾದ ತೊಡೆಯ ಗಾಯಕ್ಕೆ ಒಳಗಾಗಿದ್ದು, ಇದರಿಂದಾಗಿ 16ನೇ ಆವೃತ್ತಿ ಐಪಿಎಲ್ (IPL 2023)​ ಹಾಗೂ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (WTC Final 2023)​ ಪಂದ್ಯದಿಂದ ಹೊರಬಿದ್ದಿದ್ದಾರೆ. ಆನಂತರ ಲಂಡನ್​​ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕೆಎಲ್​ ರಾಹುಲ್ (KL Rahul) ಶಸ್ತ್ರಚಿಕಿತ್ಸೆಗೆಂದು ಲಂಡನ್’ಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿನ ಅರೆನಗ್ನ ಡ್ಯಾನ್ಸ್​ ಮಾಡುವ ಸ್ಟ್ರಿಪ್​​​ಕ್ಲಬ್​’ನಲ್ಲಿ (KL Rahul in StripClub) ಕಾಣಿಸಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಹೌದು, ಪತಿ-ಪತ್ನಿ ಇಬ್ಬರೂ ಸ್ಟ್ರಿಪ್​ ಕ್ಲಬ್’ಗೆ ಹೋಗಿದ್ದಾರೆ ಎಂಬ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾಗೇ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆ ರಾಹುಲ್ ಪತ್ನಿ ಆಥಿಯಾ (Athiya Shetty) ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಆಥಿಯಾ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​ ಹಂಚಿಕೊಂಡಿದ್ದು, “ನಾನು ಹೆಚ್ಚಾಗಿ ಮೌನವಾಗಿರುತ್ತೇನೆ ಮತ್ತು ಗಾಸಿಪ್’ಗಳಿಗೆ ಕಡಿಮೆ ಪ್ರತಿಕ್ರಿಯಿಸುತ್ತೇನೆ. ಆದರೆ ಕೆಲವೊಮ್ಮೆ ನಿಮ್ಮ ಪರವಾಗಿ ನಿಲ್ಲುವುದು ಮುಖ್ಯವಾಗಿರುತ್ತದೆ. ರಾಹುಲ್, ನಾನು ಮತ್ತು ನಮ್ಮ ಸ್ನೇಹಿತರು ಸಾಮಾನ್ಯ ಸ್ಥಳಕ್ಕೆ ಹೋಗಿದ್ದೆವು. ಈ ವಿಷಯದ ಬಗ್ಗೆ ಸತ್ಯ ಅರಿತು ನಂತರ ವರದಿ ಮಾಡಿ. ಈ ರೀತಿ ಸುಖಾಸುಮ್ಮನೆ ಮಾತನಾಡುವುದನ್ನು ಮೊದಲು ನಿಲ್ಲಿಸಿ ಎಂದು ನಟಿ ಪೋಸ್ಟ್​ನಲ್ಲಿ ಬರೆದು ಟೀಕೆಗಳಿಗೆ ಅಂತ್ಯ ಹಾಡಿದ್ದಾರೆ.

ಇದನ್ನೂ ಓದಿ: Chennai: ‘ಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್ ನ ಕಾರು ಡಿಕ್ಕಿಯಾಗಿ ಮಹಿಳೆ ಸಾವು!!!

Leave A Reply

Your email address will not be published.