Home International Australia: ಮೋದಿ ಭೇಟಿ ಬೆನ್ನಲ್ಲೇ ಭಾರತದ ಈ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದ ಆಸ್ಟ್ರೇಲಿಯಾ!...

Australia: ಮೋದಿ ಭೇಟಿ ಬೆನ್ನಲ್ಲೇ ಭಾರತದ ಈ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದ ಆಸ್ಟ್ರೇಲಿಯಾ! ಕಾರಣವೇನು ಗೊತ್ತಾ?

Australia
Image source- NewsKannada.com, Kannada news-News 18

Hindu neighbor gifts plot of land

Hindu neighbour gifts land to Muslim journalist

Australia: ಇತ್ತೀಚೆಗಷ್ಟೆ ಪ್ರಧಾನಿ ಮೋದಿ(PM Modi)ಯವರ ಆಸ್ಟ್ರೇಲಿಯಾ(Australia) ಭೇಟಿ ವಿಶ್ವದಾದ್ಯಂತ ಭಾರಿ ಸದ್ಧು ಮಾಡಿತ್ತು. ಅಲ್ಲಿನ ಪ್ರಧಾನಿ ಮೋದಿಯವರನ್ನು ಬಾಸ್ ಎಂದೆಲ್ಲ ಸಂಭೋದಿಸಿದ್ದರು. ಆದರೆ ಈ ಬೆನ್ನಲ್ಲೇ ಇದೀಗ ಭಾರತದ 6 ರಾಜ್ಯಗಳ(India 6 states) ವಿದ್ಯಾರ್ಥಿಗಳಿಗೆ(students) ಆಸ್ಟ್ರೇಲಿಯಾದ ಹಲವು ವಿಶ್ವವಿದ್ಯಾಲಯಗಳು ನಿಷೇಧವನ್ನು ಹೇರಿವೆ.

ಹೌದು, ಪಂಜಾಬ್(Punjab), ಉತ್ತರ ಪ್ರದೇಶ(Uttar prades, ಗುಜರಾತ್(Gujarat), ಉತ್ತರ ಖಾಂಡ(Uttar khand), ಹರಿಯಾಣ (Hariyan) ಮತ್ತು ಜಮ್ಮು ಕಾಶ್ಮೀರ(Jammu and Kashmir) ಎಂಬಂತೆ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ(Universitys) ನಿಷೇಧ ಹೇರಿದೆ. ಅಲ್ಲದೇ ಈ ಆರು ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ನಿಲ್ಲಿಸುವಂತೆ ಫೆಡರೇಶನ್ ವಿಶ್ವವಿದ್ಯಾಲಯ ಮತ್ತು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯವು ಶಿಕ್ಷಣ ಏಜೆಂಟರಿಗೆ ಸೂಚನೆ ನೀಡಿದೆ. ಕಾರಣವೇನು ಗೊತ್ತಾ?

ಇದಕ್ಕೆ ಮುಖ್ಯ ಕಾರಣ ವಿದ್ಯಾರ್ಥಿ ವೀಸಾ ಅಕ್ರಮ. ಪಂಜಾಬ್, ರಾಜಸ್ಥಾನ, ಹರ್ಯಾಣ, ಗುಜರಾತ್, ಉತ್ತರ ಪ್ರದೇಶ, ಉತ್ತರಖಂಡದಲ್ಲಿ ವಿದ್ಯಾರ್ಥಿ ವೀಸಾ ಅಕ್ರಮ ಹಚ್ಚಾಗಿದೆ. ಇದು ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ತಲೆನೋವು ಹೆಚ್ಚಿಸಿದೆ. ಹೀಗಾಗಿ ಈ ಉಸಾಬರಿ ಬೇಡ ಎಂದು ಭಾರತದ 6 ರಾಜ್ಯಗಳ ಎಲ್ಲಾ ವಿದ್ಯಾರ್ಥಿಗಳಿಗೆ, ಆಸ್ಟ್ರೇಲಿಯಾದ ಟೊರೆನ್ಸ್ ವಿಶ್ವವಿದ್ಯಾಲಯ, ಸೌದರ್ನ್ ಕ್ರಾಸ್ ಯುನಿವರ್ಸಿಟಿ, ಎಡಿತ್ ಕೋವನ್, ವಿಕ್ಟೋರಿಯಾ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ನಿರ್ಧಾರ ಪ್ರಕಟಿಸಿತ್ತು. ಇದೀಗ ನ್ಯೂ ಸೌಥ್ ವೇಲ್ಸ್, ಫೆಡರೇಶನ್, ವೆಸ್ಟರ್ನ್ ಸಿಡ್ನಿ ಯುನಿವರ್ಸಿಟಿಗಳು ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದೆ.

ಅಲ್ಲದೆ ಆಸ್ಟ್ರೇಲಿಯಾ ಸರ್ಕಾರ ಹಾಗೂ ಅಲ್ಲಿನ ಕೆಲವು ವಿಶ್ವವಿದ್ಯಾನಿಲಯಗಳು ಭಾರತದ ಕೆಲವು ರಾಜ್ಯಗಳ ಜನರು ವಲಸೆ ಬರಲು ಶಿಕ್ಷಣವನ್ನು ಹಿಂಬಾಗಿಲಿನಂತೆ ಬಳಸುತ್ತಿದ್ದಾರೆ ಎಂದು ಆರೋಪಿಸಿವೆ. ವಿದ್ಯಾರ್ಥಿಗಳ ವೀಸಾ ಅರ್ಜಿಗಳನ್ನು ವಿಶ್ವವಿದ್ಯಾನಿಲಯ ಸ್ವೀಕರಿಸಿದ ನಂತರವೂ ಆಸ್ಟ್ರೇಲಿಯಾದ ವಲಸೆ ವಿಭಾಗವು ಹಲವರ ವೀಸಾ ಅರ್ಜಿಗಳನ್ನು ತಿರಸ್ಕರಿಸಿದೆ. ಅರ್ಜಿದಾರರು ನಿಜವಾಗಿ ಅಧ್ಯಯನಕ್ಕಾಗಿ ಬರುತ್ತಿದ್ದಾರೆಂದು ಸಾಬೀತುಪಡಿಸಲು ಸಾಧ್ಯವಾಗದೇ ಇರುವುದು ಹಾಗೂ ಅನೇಕ ಜನರು ವಿಶ್ವವಿದ್ಯಾಲಯದ ಶಿಕ್ಷಣದಿಂದ ಹೊರಗುಳಿದಿರುವುದನ್ನು ಅಲ್ಲಿನ ಸರ್ಕಾರ ಗಮನಿಸಿದೆ.

ಇನ್ನು ಆಸ್ಟ್ರೇಲಿಯಾದ ಒಂದೊಂದೆ ವಿಶ್ವವಿದ್ಯಾಲಗಳು ನಿಷೇಧ ನಿರ್ಧಾರ ಘೋಷಿಸುತ್ತಿದ್ದಂತೆ ಇತ್ತ ಆಯಾ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದೆ. ಅಕ್ರಮ ವೀಸಾ ಪ್ರಕರಣಕ್ಕೆ ಅಂತ್ಯಹಾಡಲು ಕಟ್ಟಿನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮುಜುಗರ ಅನುಭವಿಸುವಂತಾಗಿದೆ. ಹೀಗಾಗಿ ಅಕ್ರಮ ದಾಖಲಾತಿ, ವೀಸಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ರಾಜ್ಯಗಳು ನಿರ್ಧರಿಸಿದೆ.

 

ಇದನ್ನು ಓದಿ: Siddaramaiah Cabinet Expansion: ಟಿಕೆಟ್ ಸಿಗಲಿಲ್ಲ, ಎಲೆಕ್ಷನ್ ಗೆಲ್ಲಲಿಲ್ಲ, ವಿಧಾನಸಭೆಯ ಸದಸ್ಯರೂ ಅಲ್ಲ, ಆದ್ರೂ ಸಿಕ್ತು ಇವರಿಗೆ ಮಂತ್ರಿಗಿರಿ! ಸಿದ್ದು ಸರ್ಕಾರದಲ್ಲಿ ಹೀಗೊಂದು ಅಚ್ಚರಿ!!